ಜಿಲ್ಲೆಯ ಇಬ್ಬರು ಶಾಸಕರಿಗೆ ಸ್ಥಾನ, ಮಾನ ನೀಡಿ, ಸಮಾಧಾನಪಡಿಸುವ ಯತ್ನವನ್ನು ಕಾಂಗ್ರೆಸ್ ಮಾಡಿದೆ. ರಾಜ್ಯದ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಅವರನ್ನು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮಂಕಾಳ ವೈದ್ಯ ಅವರ ಹೆಸರನ್ನು ವಿಧಾಸಭೆ ಉಪ ಸಭಾಪತಿ ಸ್ಥಾನಕ್ಕೆ ಶಿಫಾರಸು ಮಾಡಲಾಗಿದೆ. ಆದರೆ ಎರಡೂ ಹುದ್ದೆಗಳು ಹಲ್ಲಿಲ್ಲದ ಹಾವಿನಂತಿದ್ದು, ಯಾವುದೇ ಆಡಳಿತಾತ್ಮಕ ಪವರ್ ಇಲ್ಲವಾಗಿದೆ.