ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳೋ ಮುನ್ನ ಯೋಚಿಸಿ !!

ದಾಂಡೇಲಿಯಲ್ಲಿ ವಶಕ್ಕೆ ಪಡೆದ ವಾಹನ
ದಾಂಡೇಲಿಯಲ್ಲಿ ವಶಕ್ಕೆ ಪಡೆದ ವಾಹನ
Published on
ಕಾರವಾರ/ ದಾಂಡೇಲಿ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವಿಡಿಯೋಗಳ ವಿರುದ್ಧ ಕಣ್ಣಿಟ್ಟಿರುವ ಪೊಲೀಸರು ಅಂಥವರ ವಿರುದ್ಧ ಎಫ್‌ಐಆರ್‌ ದಾಖಲಿಸುತ್ತಿದ್ದಾರೆ. ಇದೇ ವಾರದಲ್ಲಿ ಜಿಲ್ಲೆಯಲ್ಲಿ 2 ಇಂಥ ಪ್ರಕಟಣಗಳು ದಾಖಲಾಗಿವೆ.
ಪ್ರಯಾಣಿಕರಿದ್ದ ವಾಹನವನ್ನು ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ, ವಿಡಿಯೋ ಮಾಡಿ ಇನಸ್ಟ್ರಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದ ವಾಹನ ಚಾಲಕನ ಮೇಲೆ ಪ್ರಕರಣ ದಾಖಲಿಸಿದ ದಾಂಡೇಲಿ ಗ್ರಾಮೀಣ ಠಾಣೆಯ ಪೊಲೀಸರು ಕ್ರುಸರ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಮತ್ತು ಫಾಲೋವರ್ಸ್ ಪಡೆಯುವುದಕ್ಕಾಗಿ ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಜೋಯಿಡಾ ತಾಲೂಕಿನ ಪ್ರಧಾನಿ ಗ್ರಾಮದ ಹತ್ತಿರ ತೂಫಾನ್ ಎಂಬ ಕ್ರುಸರ್ ವಾಹನದ ಚಾಲಕ ಸಾರಿಗೆ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ವೇಗವಾಗಿ ಚಲಾಯಿಸಿ ರೀಲ್ಸ್ ಮಾಡಿದ್ದ. ತೂಫಾನ್ ಕ್ರೂಸರ್ ವಾಹನದ (ಏಂ-24/A-0450) ಬಾನೆಟ್ ಹಾಗೂ ಟಾಪ್ (ಮೇಲ್ಛಾವಣಿ) ಮೇಲೆ ಸುಮಾರು 10 ರಿಂದ 12 ಜನರನ್ನು ಕುಳ್ಳಿರಿಸಿಕೊಂಡು, ಜನರ ಪ್ರಾಣಕ್ಕೆ ಅಪಾಯವಾಗುವಂತೆ ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ಚಾಲನೆ ಮಾಡಿದ್ದ. ಈ ಅಪಾಯಕಾರಿಯಾದ ದೃಶ್ಯವನ್ನು ವಿಡಿಯೋಮಾಡಿ, ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊAಡಿದ್ದ.ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಈ ವಿಡಿಯೋ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಸುಭಾಷ ಸಾಲಮಂಟಪ ಗಮನಕ್ಕೆ ಬಂದಿದ್ದು, ಅವರು ನೀಡಿದ ದೂರಿನನ್ವಯ ಚಾಲಕನ ವಿರುದ್ಧ ನೂತನ ಬಿಎನ್‌ಎಸ್ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ಪಿ.ಎಸ್.ಐ. ಶಿವಾನಂದ ನಾವದಗಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಆದರೆ, ಎಫ್‌ಐಆರ್‌ನಲ್ಲಿ ಯಾರದೇ ಹೆಸರು ದಾಖಲಿಸಿಲ್ಲ.

ಹೊನ್ನಾವರದಲ್ಲಿ ಪ್ರಕರಣ

ಸಂರಕ್ಷಿತ ಅರಣ್ಯದ ಅಭಯಾರಣ್ಯದ ಅಪಾಯಕಾರಿ ಸ್ಥಳಕ್ಕೆ ಅನುಮತಿ ಇಲ್ಲದೇ ಹೋಗಿ ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದವರ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಅರಣ್ಯಾಽಕಾರಿಗಳು ದೂರು ದಾಖಲಿಸಿದ್ದಾರೆ.
ಲೋಕಲ್ ಮ್ಯಾಮ್ಸ್ ಎಂಬ ಫೇಸ್‌ಬುಕ್ ಖಾತೆಯ ವಿರುದ್ಧ ಹೊನ್ನಾವರ ಗೇರುಸೊಪ್ಪ ವಲಯದ ಡಿಆರ್‌ಎಫ್‌ಒ ಬಾಲಕೃಷ್ಣ ಈಶ್ವರ ನಾಯ್ಕ ದೂರು ನೀಡಿದ್ದಾರೆ. ಕನ್ನಿಕಾ ಜಲಪಾದ ವಿಡಿಯೋ ಅಪ್‌ಲೋಡ್ ಮಾಡಿ ವೈಯಕ್ತಿಕ ಹಾಗೂ ಮಾನವ ಜೀವಕ್ಕೆ ಅಪಾಯವನ್ನುಂಟು ಮಾಡಿದ್ದಾರೆ ಎಂದು ದೂರಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net