

ಜೊಯಿಡಾ: ತಾಲೂಕಿನಲ್ಲಿ ಬುದವಾರ ಆಯೋಜಿಸಿದ್ದ ಗಡ್ಡೆಗೆಣಸು ಮೇಳ ಗಮನ ಸೆಳೆಯಿತು. ತಾಲೂಕಿನ ಕುಣಬಿ ಜನಾಂಗದವರು ಬೆಳೆದ ಅಸಾಮಾನ್ಯ ಗಾತ್ರದ ಗಡ್ಡೆಗಳ ಪ್ರದರ್ಶನ ಹಾಗೂ ಮಾರಾಟ ನಡೆಯಿತು. ಸಾಕಷ್ಟು ಮಹಿಳೆಯರು ತಮ್ಮ ಹಿತ್ತಲಲ್ಲಿ ಬೆಳೆದ ಗಡ್ಡೆ, ಗೆಣಸುಗಳನ್ನು ತಂದು ಮಾರಾಟ ಮಾಡಿದರು. ಸಾವಿರಾರು ಜನ ಮುಗಿಬಿದ್ದು ಖರೀದಿಸಿದರು.
ಮೇಳದಲ್ಲಿ ಅತಿಥಿಯಾಗಿದ್ದ ಸಮಾಜದ ಮುಖಂಡ ಡಾ. ಜಯಾನಂದ್ ಡೆರೇಕರ್, ಸರ್ಕಾರವು ಗೆಡ್ಡೆಗಳಿಗೆ ಒಂದು ಬೆಳೆಯ ಸ್ಥಾನ ನೀಡಿ ಕೃಷಿ ಇಲಾಖೆಯಲ್ಲಿ ನೋಂದಾಯಿಸಿಕೊಂಡಿದೆ. ಈ ನಿರ್ಧಾರ ಸ್ವಗತಾರ್ಹ. ಸರ್ಕಾರ ಗೆಡ್ಡೆಗಳನ್ನು ಬೆಳೆಸಲು ರೈತರಿಗೆ ಬೆಳೆ ಸಾಲಗಳು ಲಭ್ಯವಾಗುವಂತೆ ಮಾಡಬೇಕೆಂದು ಒತ್ತಾಯಿಸಿದರು.
ಅತಿ ಹೆಚ್ಚಿನ ಅರಣ್ಯ ಹೊಂದಿರುವ ಜೊಯಿಡಾ ತಾಲೂಕಿನಲ್ಲಿ ಗೆಡ್ಡೆ ಗೆಣಸು ಹಬ್ಬವು ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದೆ. ಮತ್ತು ಜೊಯಿಡಾ ತಾಲೂಕನ್ನು ಸಾವಯವ ತಾಲೂಕಾಗಿ ಘೋಷಣೆಯಾಗಿದ್ದು, ಇದು ಇಲ್ಲಿ ಉದ್ಯೋಗಾವಕಾಶ ಹೆಚ್ಚಲು ಸಹಕಾರಿಯಾಗಲಿದೆ ಎಂದರು.
ಕಾಳಿ ಪ್ರವಾಸೋದ್ಯಮ ಸಂಸ್ಥೆಯ ಅಧ್ಯಕ್ಷ ವಿನಯ್ ದೇಸಾಯಿ ಮಾತನಾಡಿ, ಈ ಭಾಗದಲ್ಲಿರುವ ಪ್ರವಾಸೋದ್ಯಮಕ್ಕೂ ಇದು ಅನುಕೂಲವಾಗಬಹುದು ಎಂದರು.
ಜಿಪಂ ಮಾಜಿ ಸದಸ್ಯ ರಮೇಶ ನಾಯಕ, ಗ್ರಾಪಂ ಅಧ್ಯಕ್ಷೆ ಚಂದ್ರಿಮಾ ಮಿರಾಶಿ, ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಸುಶೀಲ ನಾಯಕ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವಪ್ರಸಾದ್ ಗಾಂವ್ಕರ, ಸೆಲ್ಕೋ ಫೌಂಡೇಶನ್ ಪ್ರತಿನಿಽ ಪ್ರಕಾಶ ಮೇಟಿ, ದಾಂಡೇಲಿ ರೋಟರಿ ಕ್ಲಬ್‌ನ ಅಧ್ಯಕ್ಷ ಅಶುತೋಷ್ ಕುಮಾರ ರಾಯ್, ರವಿ ರೆಡ್ಕರ್, ಶಾಂತಾರಾಮ್ ಕಾಮತ್ ಇದ್ದರು.