ಸೇನೆಯಲ್ಲಿ ಸೇವೆ ಸಲ್ಲಿಸಿ ತಾಯ್ನಡಿಗೆ ಮರಳಿದ ಮಂಜುನಾಥ ತಳವಾರ ಅವರನ್ನು ಮುಂಡಗೋಡದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
Published on:
Copied
Follow Us
ಮುಂಡಗೋಡ: ಕಳೆದ 22 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, ಹುಟ್ಟೂರಿಗೆ ಮರಳಿದ ಯೋಧ ಮಂಜುನಾಥ ತಳವಾರ ಅವರಿಗೆ ತಾಲೂಕಿನ ಜನತೆಯ ಪರವಾಗಿ ಯೋಧನ ಸ್ನೇಹಿತರು, ಶಿಂಗನಳ್ಳಿ ಗ್ರಾಮಸ್ಥರು ಹಾಗೂ ದೇಶ ಪ್ರೇಮಿಗಳು ಪಟ್ಟಣದ ಶಿವಾಜಿ ವೃತ್ತದಲ್ಲಿ ಅದ್ದೂರಿಯಾಗಿ ಸ್ವಾಗತಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಯೋಧ ಮಂಜುನಾಥ ತಳವಾರ ಮತ್ತು ದಂಪತಿಯನ್ನು ಶಿಂಗನಳ್ಳಿ ಗ್ರಾಮಸ್ಥರು, ಸ್ನೇಹಿತರು ಸನ್ಮಾನಿಸಿ ಅದ್ದೂರಿಯಾಗಿ ಬರಮಾಡಿಕೊಂಡರು. ತೆರೆದ ವಾಹನದಲ್ಲಿ ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ಮೂಲಕ ಶಿವಾಜಿ ವೃತ್ತದಲ್ಲಿ ಮಾರ್ಗವಾಗಿ ಶಿಂಗನಳ್ಳಿವರೆಗೂ ಸಾಗಿದರು. ಈ ವೇಳೆ ಶಿವಾಜಿ ವೃತ್ತದಲ್ಲಿರುವ ಶಿವಾಜಿ ಮೂರ್ತಿಗೆ ಮಂಜುನಾಥ ಅವರು ಮಾರ್ಲಾಪಣೆ ಮಾಡಿದರು.
ನಿವೃತ್ತಿಯಾದ ತಾಲೂಕಿನ ಯೋಧರು ಮತ್ತು ಹಾಲಿ ಯೋಧರು ಮಂಜುನಾಥ ಮತ್ತು ದಂಪತಿಯನ್ನು ಸನ್ಮಾನಿಸಿ ಶುಭ ಕೋರಿದರು. ಶಿಂಗನಳ್ಳಿ ಗ್ರಾಮಕ್ಕೆ ಮೆರವಣಿಗೆ ತಲುಪುತ್ತಿದ್ದಂತೆ, ಗ್ರಾಮಸ್ಥರು ಯೋಧನನ್ನು ಆರತಿ ಮಾಡಿಬರಮಾಡಿಕೊಂಡರು. ಗ್ರಾಮದಲ್ಲಿಯೂ ಸಹ ವಿಜೃಂಭಣೆಯಿಂದ ಮೆರವಣಿಗೆ ನಡೆಯಿತು.