ಗೋಕರ್ಣದಲ್ಲಿ ಅಪಾಯಕ್ಕೆ ಸಿಲುಕಿದ್ದ ಪ್ರವಾಸಿಗನ ರಕ್ಷಣೆ

ಪ್ರವಾಸಿಗನ ರಕ್ಷಣೆ
ಪ್ರವಾಸಿಗನ ರಕ್ಷಣೆ
Published on

ಗೋಕರ್ಣ:ಇಲ್ಲಿನ ಮುಖ್ಯ ಕಡಲ ತೀರದಲ್ಲಿ ಸಮುದ್ರದಲ್ಲಿ ಈಜಲು ತೆರಳಿ ಅಲೆಯ ಸೆಳೆತಕ್ಕೆ ಸಿಲುಕಿ ದಡಕ್ಕೆ ಬರಲಾರದೆ ಆತಂಕಕ್ಕೊಳಗಾಗಿದ್ದ ಪ್ರವಾಸಿಯೋರ್ವರನ್ನು ಕರ್ತವ್ಯದಲ್ಲಿದ್ದ ಜೀವರಕ್ಷಕ ಮತ್ತು ಜಲಸಾಹಸ ಸಿಬ್ಬಂದಿ ಜೆಟ್-ಸ್ಕೀ ಮೂಲಕ ರಕ್ಷಿಸಿದ ಘಟನೆ ಗುರುವಾರ ಮಧ್ಯಾನ್ಹ ನಡೆದಿದೆ.ದಾವಣಗೆರೆಯಿಂದ ಬಂದಿದ್ದ 6 ಪ್ರವಾಸಿಗರ ಪೈಕಿ ಪರಶುರಾಮ ರಾಜಪ್ಪ(21) ಎನ್ನುವವರು ರಕ್ಷಿಸಲ್ಪಟ್ಟವರು.ಮೇಲ್ವಿಚಾರಕ ರವಿ ನಾಯ್ಕ ನೇತೃತ್ವದಲ್ಲಿ ಸಿಬ್ಬಂದಿ ಲೋಕೇಶ ಹರಿಕಂತ್ರ,ಶಿವಪ್ರಸಾದ ಅಂಬಿಗ,ರೋಷನ್ ಖಾರ್ವಿ,ಮೋಹನ ಅಂಬಿಗ,ಶೇಖರ ಹರಿಕಂತ್ರ,ಜಲಸಾಹಸ ತಂಡದ ಅಶೋಕ ಹೊಸ್ಕಟ್ಟ,ಕಮಲಾಕರ ಹೊಸ್ಕಟ್ಟ,ದರ್ಶನ್ ಲಕ್ಕುಮನೆ,ದೀಪಕ ಗೌಡ ಮತ್ತು ಹೋಮ್‌ಗಾರ್ಡ್ ಲಿಂಗರಾಜ ಗೌಡ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net