ಕಳೆದ ಒಂದೂವರೆ ತಿಂಗಳಿನಿಂದ ಹುಲಿ ಘರ್ಜನೆ ಕೇಳಿಸುತ್ತಿತ್ತಾದರೂ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಆದರೆ, ಸೋಮವಾರ ಸಂಜೆ ಬೈಕ್ ಸವಾರರೊಬ್ಬರಿಗೆ ಹುಲಿ ರಸ್ತೆಯಲ್ಲೇ ಎದುರಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ಸೋಮವಾರ ಸಂಜೆ ಪರ ಊರಿನಿಂದ ಬೈಕ್ ಮೂಲಕ ಮುತ್ತಿಗೆ ಗ್ರಾಮಕ್ಕೆ ಬರುತ್ತಿದ್ದ ಸವಾರನಿಗೆ ಗ್ರಾಮದ ಮುಖ್ಯ ರಸ್ತೆಯಲ್ಲೇ ಹುಲಿ ಕಂಡು ಬಂದಿದ್ದು, ಕೂಡಲೇ ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ್ದಾರೆ.