ಗೋಕರ್ಣ: ಇಲ್ಲಿನ ಮುಖ್ಯ ಸಮುದ್ರದಲ್ಲಿ ಸೋಮವಾರ ಮಧ್ಯಾಹ್ನ ಈಜಲು ಹೋಗಿ ಸೆಳೆತಕ್ಕೆ ಸಿಲುಕಿ ದಡ ಸೇರಲಾಗದೆ ಅಪಾಯದಲ್ಲಿದ್ದ ಚಿತ್ರದುರ್ಗದ ಮೂವರು ಯುವಕರನ್ನು ಕರ್ತವ್ಯದಲ್ಲಿದ್ದ ಜೀವರಕ್ಷಕ ಸಿಬ್ಬಂದಿ ಉಳಿಸಿ ಮೇಲಕ್ಕೆ ತಂದಿದ್ದಾರೆ. ಮನು (23), ಶಿವು(36) ಮತ್ತು ಕಿರಣ (26) ರಕ್ಷಿಸಲ್ಪಟ್ಟವರು. ಚಿತ್ರದುರ್ಗದಿಂದ 21 ಸ್ನೇಹಿತರು ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದು, ಅವರಲ್ಲಿ ಆರು ಜನ ನೀರಿಗಿಳಿದಿದ್ದರು.
ಮೇಲ್ವಿಚಾರಕ ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಬ್ಬಂದಿ ಲೋಕೇಶ ಹರಿಕಂತ್ರ, ಶಿವಪ್ರಸಾದ ಅಂಬಿಗ, ರೋಷನ್ ಖಾರ್ವಿ, ಮೋಹನ ಅಂಬಿಗ, ಶೇಖರ ಹರಿಕಂತ್ರಅವರ ಜೊತೆ ಜಲಸಾಹಸ ತಂಡದ ದೀಪಕ ಗೌಡ ಕಾರ್ಯಾಚರಣೆಯಲ್ಲಿದ್ದರು.