ವುಡ್ ವರ್ಕ್ ಅಂಗಡಿಯಲ್ಲಿ ಸೋಪಾ, ಕಾಟ್‌ಗಳು ಹಾಗೂ ಮನೆಗಳ ಬಾಗಿಲು ಚೌಕಟ್ಟು ಸೇರಿದಂತೆ ಸಾಗವಾನಿ ಕಟ್ಟಿಗೆಯಲ್ಲಿ ತಯಾರಿಸಿಟ್ಟಿದ್ದ ಸಾಮಗ್ರಿ ಹಾಗೂ ಯಂತ್ರಗಳು ಸುಟ್ಟಿವೆ. ಅಂಗಡಿ ಪಕ್ಕದ ದಾಸ್ತಾನು ಕೊಠಡಿಗೂ ಬೆಂಕಿ ತಗುಲಿ ಪ್ಲೈವುಡ್‌ಗಳು ಸುಟ್ಟಿವೆ. ಪಕ್ಕದಲ್ಲಿದ್ದ ಮತ್ತೊಂದು ಪಿವಿಸಿ ಪೈಪ್ ದಾಸ್ತಾನು ಅಂಗಡಿಗೂ ಬೆಂಕಿ ತಗುಲಿದ್ದು. ಅಲ್ಲಿ ಸಹ ಲಕ್ಷಾಂತರ ರೂ. ಮೌಲ್ಯದ ಪೈಪ್ ಹಾಗೂ ಇತರೆ ಸಾಮಗ್ರಿಗಳು ಸುಟ್ಟಿವೆ. ವಿಷಯ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪೈಪ್ ಅಂಗಡಿಯಲ್ಲಿ ಆಗುತ್ತಿದ್ದ ಹೆಚ್ಚಿನ ಹಾನಿಯನ್ನು ತಡೆದಿದ್ದಾರೆ.