ಏಕಕಾಲದಲ್ಲಿ ಮೂರು ಮಂಗ(Three monkeys)ಗಳ ಸಾವು

ಸಿದ್ದಾಪುರ ಪಪಂ ವ್ಯಾಪ್ತಿಯ ಗಣಪತಿ ಗಲ್ಲಿಯಲ್ಲಿ ಸತ್ತ ಮಂಗಗಳ ಮರಣೋತ್ತರ ಪರೀಕ್ಷೆ ನಡೆಸುತ್ತಿರುವ ಪಶುವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ.
ಸಿದ್ದಾಪುರ ಪಪಂ ವ್ಯಾಪ್ತಿಯ ಗಣಪತಿ ಗಲ್ಲಿಯಲ್ಲಿ ಸತ್ತ ಮಂಗಗಳ ಮರಣೋತ್ತರ ಪರೀಕ್ಷೆ ನಡೆಸುತ್ತಿರುವ ಪಶುವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ.
Published on

ಪ್ರಮುಖ ಮುಖ್ಯಾಂಶಗಳು

  • ಕೆಎಫ್‌ಡಿ ಆತಂಕದಲ್ಲಿ ಸಿದ್ದಾಪುರ ಗಣಪತಿಗಲ್ಲಿ ಜನತೆ
ಸಿದ್ದಾಪುರ: ಸ್ಥಳೀಯ ಪಪಂ ವ್ಯಾಪ್ತಿಯ ಗಣಪತಿಗಲ್ಲಿಯ ಉದಯ ರಂಗೈನ್ ಹಾಗೂ ಅಶೋಕ ಪ್ರಭು ಮನೆಯ ಹಿಂಭಾಗದಲ್ಲಿ ಮೂರು ಮಂಗಗಳು (Three monkeys die) ಏಕಕಾಲದಲ್ಲಿ ಸಾವಿಗೀಡಾಗಿರುವುದರಿಂದ ಜನತೆ ಆತಂಕಕ್ಕೆ ಒಳಗಾಗಿದ್ದಾರೆ.
ಪಪಂ ಸದಸ್ಯ ಗುರುರಾಜ ಶಾನಭಾಗ ಅವರು ಮಂಗನ ಕಾಯಿಲೆ ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ ವರದಿಯಾಗುತ್ತಿರುವುದರಿಂದ ಮುಂಜಾಗ್ರತೆ ಕ್ರಮವಾಗಿ ಆರೋಗ್ಯ, ಪಶುಸಂಗೋಪನೆ, ಅರಣ್ಯ ಇಲಾಖೆ ಮತ್ತು ಪಪಂ ಅಧಿಕಾರಿಗಳಿಗೆ ಮಾಹಿತಿ ನೀಡಿ ಸೂಕ್ತ ಕ್ರಮಕೈಗೊಂಡಿದ್ದಾರೆ.
ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವಿವೇಕ ಹೆಗಡೆ ಹಾಗೂ ಸಿಬ್ಬಂದಿ ಸತ್ತ ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಿ ಪುಣೆ ಹಾಗೂ ಶಿವಮೊಗ್ಗದ ಸಂಶೋಧನಾಲಯಗಳಿಗೆ ಕಳುಹಿಸಿದ್ದಾರೆ.
ಸ್ಥಳಕ್ಕೆ ಪಪಂ, ಅರಣ್ಯ ಇಲಾಖೆ ಅಧಿಕಾರಿಗಳು, ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ, ಮಂಗ ಸತ್ತ ಸ್ಥಳದ ಸುತ್ತಲೂ ಕ್ರಿಮಿನಾಶಕ ಔಷಧ ಸಿಂಪಡಿಸಿದರು.
ಮಂಗನ ಕಾಯಿಲೆ ಲಕ್ಷಣಗಳಾದ ಸಣ್ಣ ಜ್ವರ ಹಾಗೂ ಮೈಕೈ ನೋವುಗಳು ಪ್ರಾರಂಭವಾದರೆ ಜನತೆ ಕೂಡಲೇ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಕೊಳ್ಳಬೇಕು ಎಂದು ಗುರುರಾಜ ಶಾನಭಾಗ ಜನತೆಯಲ್ಲಿ ವಿನಂತಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net