ಕಾರವಾರ: ಕಾರು ಹಾಗೂ ಮಹೀಂದ್ರಾ ಪಿಕ್‌ಅಪ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡ ಘಟನೆ ಗುರುವಾರ ಜೊಯಿಡಾ ಗವೇಗಾಳಿ ಸಮೀಪ ನಡೆದಿದೆ.
ಕಾರಿನಲ್ಲಿದ್ದ ಆಂಧ್ರ ಪ್ರದೇಶದ ಆನಂದ ನಗರ ನಿವಾಸಿಗಳಾದ ಮಹೇಶ ಹಾಗೂ ಮುರಳಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಲ್ಲಪ್ಪ ಮಾದರ್, ದಾಕ್ಷಾಯಣಿ ಮಾದರ್ ಹಾಗೂ ಶೇಖ್ ಅಲಿ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಬೆಳಗಾವಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಗೊವಾದಿಂದ ಕರ್ನಾಟಕ ಕಡೆಗೆ ರಾಷ್ಟಿçÃಯ ಹೆದ್ದಾರಿ 4ಎ ಬರುತ್ತಿರುವ ಕಾರು ಹಾಗೂ ಎದುರಿನಿಂದ ಕೋಳಿ ತುಂಬಿಕೊAಡು ಬರುತ್ತಿದ್ದ ಮಹೀಂದ್ರಾ ಪಿಕ್‌ಅಪ್ ನಡುವೆ ರಮನಗರ ಅನಮೋಡ ನಡುವೆ ಘಟನೆ ನಡೆದಿದೆ. ರಾಮನಗರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ರಿಕ್ಷಾ ಚಾಲಕ ಸಾವು
ಕಾರವಾರ: ಕಾರು ಹಾಗೂ ರಿಕ್ಷಾ ನಡುವೆ ಡಿಕ್ಕಿಯಾಗಿ ರಿಕ್ಷಾ ಚಾಲಕ ಮೃತಪಟ್ಟ ಘಟನೆ ಮಾಜಾಳಿಯಲ್ಲಿ ಗುರುವಾರ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಘಟನೆ ನಡೆದಿದ್ದು, ತಮಿಳುನಾಡು ಮೂಲದ ಕಾರೂ ಸಹ ಪಲ್ಟಿಯಾಗಿ ಬಿದ್ದಿದೆ. ರಿಕ್ಷಾ ಚಾಲಕ ಪ್ರದೀಪ ಪೆಡ್ನೇಕರ್ ತೀವ್ರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಕೊಂಡೊಯ್ಯುವ ಹೊತ್ತಿಗೆ ಅವರು ಮೃತಪಟ್ಟಿದ್ದಾರೆ. ಚಿತ್ತಾಕುಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.