ಜಿಲ್ಲೆಯ ವಿವಿಧ ಪ್ರದೇಶಗಳಿಂದ ಆಗಮಿಸಿದ ಹಸಿರು ಶಾಲು ಹೊದ್ದ ಸಾವಿರಾರು ಅರಣ್ಯವಾಸಿಗಳು ತಮ್ಮ ಅರಣ್ಯ ಹಕ್ಕು ಕಾಯ್ದೆಯ ಅರ್ಜಿಗಳನ್ನು ಕೇಂದ್ರ ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿ ತಿರಸ್ಕರಿಸಿರುವುದಕ್ಕೆ ಜಿಲ್ಲಾಽಕಾರಿ ಅವರಿಗೆ ಪ್ರತ್ಯೇಕವಾಗಿ ಆಕ್ಷೇಪಣಾ ಪತ್ರ ಸಲ್ಲಿಸಿದರು.
ಡಿ.3 ರಂದು ಭಟ್ಕಳದಿಂದ ಈ ಅಭಿಯಾನ ಪ್ರಾರಂಭವಾಗಿತ್ತು. ಕರಾವಳಿಯ ಎಲ್ಲ ತಾಲೂಕುಗಳಲ್ಲೂ ಸಮಾವೇಶ ನಡೆಸಿ, ಅಂತಿಮವಾಗಿ ಕಾರವಾರ ತಲುಪಲಾಗಿದೆ. ಶನಿವಾರ ನಗರದ ಪ್ರಮುಖ ಬೀದಿಗಳಲ್ಲಿ ಅರಣ್ಯ ಹಕ್ಕು ಹೋರಾಟಗಾರರು ಮೆರವಣಿಗೆ ನಡೆಸಿದರು. ಘೋಷಣೆಗಳನ್ನು ಕೂಗಿದರು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಸೇರಿ ವಿವಿಧ ಕಲಾ ತಂಡಗಳು ಗಮನ ಸೆಳೆದವು. ಮಾಲಾದೇವಿ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಿ, ನಂತರ ಅಪರ ಜಿಲ್ಲಾಽಕಾರಿ ಸಾಜಿದ್ ಮುಲ್ಲಾ ಅವರ ಮೂಲಕ ಆಕ್ಷೇಪಣಾ ಪತ್ರವನ್ನು ಸಲ್ಲಿಸಲಾಯಿತು.
ಅರಣ್ಯ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಎ.ರವೀಂದ್ರನಾಥ ನಾಯ್ಕ ಸಮಾವೇಶದಲ್ಲಿ ಮಾತನಾಡಿ, 75 ವರ್ಷಗಳ ಸಾಂದರ್ಭಿಕ ದಾಖಲೆಗಳನ್ನು ಅನುಸರಿಸಿ ಅರಣ್ಯವಾಸಿಗಳಿಗೆ ಹಕ್ಕು ಪತ್ರ ನೀಡಬಹುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಆದರೆ, ಅದರ ಹೊರತಾಗಿಯೂ ರಾಜ್ಯ ಸರ್ಕಾರ ಯಾವುದೇ ಹಕ್ಕು ಪತ್ರ ನೀಡಿಲ್ಲ. ಬದಲಾಗಿ, ನಿಯಮಕ್ಕೆ ವಿರುದ್ಧವಾಗಿ 73 ಸಾವಿರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ.
ಅರಣ್ಯ ಹಕ್ಕು ಕಾಯ್ದೆಯಲ್ಲಿ ಅರ್ಜಿ ಸಲ್ಲಿಸಿ, ಜಿಪಿಎಸ್ ಮಾಡಿದ ನಂತರ, ಯಾವುದೇ ಕಾರಣಕ್ಕೂ ಅತಿಕ್ರಮಣ ತೆರವು ಮಾಡಬಾರದು ಎಂದಿದೆ. ಆದರೆ, ಅರಣ್ಯಾಽಕಾರಿಗಳು ನಿರಂತರವಾಗಿ ಅತಿಕ್ರಮಣದಾರರಿಗೆ ಕಿರುಕುಳ ನೀಡುತ್ತಿದ್ದಾರೆ. ಈ ಎಲ್ಲ ಅಂಶಗಳ ಕುರಿತು ಬರುವ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ಮಾಡಬೇಕು ಎಂದು ಒತ್ತಾಯಿಸಿದರು.
ಹೋರಟಗಾರರ ವೇದಿಕೆಯ ಜಿಲ್ಲಾ ಸಂಚಾಲಕರುಗಳಾದ ಇಬ್ರಾಹೀಂ ಗೌಡಳ್ಳಿ, ರಾಜೇಶ್ ಮಿತ್ರ ನಾಯ್ಕ, ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಕುಮಟಾ ಅದ್ಯಕ್ಷ ಮಂಜುನಾಥ ಮರಾಠಿ ನಾಗೂರು, ಮಹೇಶ ನಾಯ್ಕ ಕಾನಕ್ಕಿ, ಮುಂಡಗೊಡ ಅಧ್ಯಕ್ಷ ಶಿವಾನಂದ ಜೋಗಿ ಮುಂಡಗೋಡ, ಅಂಕೋಲ ಅದ್ಯಕ್ಷ ರಮಾನಂದ ನಾಯಕ ಅಚವೆ, ಯಲ್ಲಾಪುರ ಅಧ್ಯಕ್ಷ ಭೀಮಸಿ ವಾಲ್ಮೀಕಿ,ಜಗದೀಶ್ ಶಿರಳಗಿ, ಪಾಂಡುರAಗ ನಾಯ್ಕ ಬೆಳಕೆ, ಚಂದ್ರ ಪೂಜಾರಿ ಮಂಚಿಕೇರಿ, ದಿವಾಕರ್ ಮರಾಠಿ ಆನಗೋಡ, ದೇವರಾಜ ಗೊಂಡ, ರಪೀಕ ಗಫಾರ, ಪ್ರಭಾಕರ ವೇಳಿಪ್ ಜೋಯಿಡ, ವಿಜು ಪೀಟರ್ ಪಿಲ್ಲೆ, ಶಾಂತರಾಮ ನಾಯ್ಕ ಅಂಕೋಲ, ರಾಮು ಕಲಕರಡಿ, ಹರಿಹರ ನಾಯ್ಕ ಓಂಕಾರ, ಸೀತಾರಾಮ ಗೌಡ, ಅರವಿಂದ ಗೌಡ, ಉದಯ ಗುನಗ ಅಚವೆ, ಶಂಕರ್ ಕೊಡಿಯಾ, ಮಾದೇವ ನಾಯಕ ಮುಂತಾದವರು ಮೆರವಣಿಗೆ ನೇತೃತ್ವವ ವಹಿಸಿದ್ದರು.