ಕಾರವಾರ: ಜಿಲ್ಲೆಯಲ್ಲಿ ಒಂದೆಡೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಕೊಡುತ್ತೇನೆ ಎಂದರೂ ಪಡೆಯುವವರಿಲ್ಲ. ಇದರಿಂದ ಬ್ಯಾಂಕ್‌ಗಳಿಗೆ ಸಾಲದ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ. ಇಡೀ ರಾಜ್ಯದಲ್ಲಿ ಅತಿ ಕಡಿಮೆ ಠೇವಣಿ: ಸಾಲದ ಅನುಪಾತ ಇರುವ ಜಿಲ್ಲೆ ಉತ್ತರ ಕನ್ನಡವಾಗಿದೆ. ವಿಪರ್ಯಾಸವೆಂದರೆ ಇನ್ನೊಂದೆಡೆ ಜಿಲ್ಲೆಯಲ್ಲಿ ಅಕ್ರಮ ಬಡ್ಡಿ ವ್ಯವಹಾರಸ್ಥರ ವ್ಯವಹಾರ ಜೋರಾಗಿದೆ.
27 ಸಾವಿರ ಕೋಟಿ ಠೇವಣಿ
ಈ ವರ್ಷದ ಮಾರ್ಚ್ ತ್ರೆÊಮಾಸಿಕದಲ್ಲಿ ಜಿಲ್ಲೆಯ ಬ್ಯಾಂಕ್‌ಗಳಲ್ಲಿ ಒಟ್ಟು 27,064 ಕೋಟಿ ರೂ. ಠೇವಣಿ ಸಂಗ್ರಹಿಸಲಾಗಿದೆ. 12,528 ಕೋಟಿ ಸಾಲ ವಿತರಣೆ ಮಾಡಲಾಗಿದೆ ಎಂದರು. ಜಿಲ್ಲೆಯಲ್ಲಿ ಸಾಲ ಮತ್ತು ಠೇವಣಿ ಅನುಪಾತ ಶೇ.46.29 ಮಾತ್ರ ಇದೆ ಎಂದು ಲೀಡ್ ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಕೈಗಾರಿಕಾ ಕ್ಷೇತ್ರ ಬೆಳೆಯದೇ ಇರುವುದು. ಕೈಗಾರಿಕೆ, ವಸತಿ ಯೋಜನೆಗಳಿಗೆ ಬೇಕಾದ ಭೂಮಿಯ ದಾಖಲೆಗಳು ಅರಣ್ಯ ಹಾಗೂ ಸಿಆರ್‌ಜಡ್ ಕಾರಣಕ್ಕೆ ಸರಿ ಇಲ್ಲದೇ ಇರುವುದು ಜಿಲ್ಲೆಯ ಈ ಸಮಸ್ಯೆಗೆ ಕಾರಣವಾಗಿದೆ. ಹಾಗಾಗಿ ಜಿಪಂ ಸಿಇಒ ಡಾ.ದಿಲೀಶ್ ಶಶಿ ಅವರು ಬ್ಯಾಂಕರ್‌ಗಳಿಗೆ ಹೊಸ ಪರಿಹಾರ ಯೋಜನೆ ನೀಡಿದ್ದಾರೆ.
ಜಿಪಂ ಸಿಇಒ ಸಭೆ
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಆರಂಭಿಸುವುವರಿಗೆ ಬ್ಯಾಂಕ್‌ಗಳು, ಹೆಚ್ಚಿನ ಸಾಲವನ್ನು ವಿತರಿಸಿ ಎಂದು ಜಿಪಂ ಸಿಇಒ ಡಾ.ದಿಲೀಷ್ ಶಶಿ ಬ್ಯಾಂಕರ್‌ಗಳಿಗೆ ನಿರ್ದೇಶನ ನೀಡಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳು ಕರಾವಳಿ ಪ್ರವಾಸೋದ್ಯಮ ಬೆಳವಣಿಗೆಗೆ ಆಸಕ್ತಿ ಹೊಂದಿದ್ದಾರೆ. ಕಾರವಾರದಲ್ಲಿ ವಿಮಾನ ನಿಲ್ದಾಣವೂ ಬರಲಿದೆ. ಪ್ರವಾಸೋದ್ಯಮಿಗಳಿಗೆ ಸಾಲ ನೀಡುವುದರಿಂದ ಪ್ರವಾಸೋದ್ಯಮ ಬೆಳವಣಿಗೆಗೆ ಮತ್ತು ಬ್ಯಾಂಕ್‌ಗಳ ಸಾಲ ಮತ್ತು ಠೇವಣಿ ಅನುಪಾತದಲ್ಲಿ ಗುರಿ ತಲುಪಲು ಅನುಕೂಲವಾಗಲಿದೆ ಎಂದರು.
ಜಿಪಂ ಯೋಜನಾ ನಿರ್ದೇಶಕ ಕರೀಂ ಅಸಾದಿ, ಮುಖ್ಯ ಯೋಜನಾಽಕಾರಿ ಸೋಮಶೇಖರ್ ಮೇಸ್ತ, ಮುಖ್ಯ ಲೆಕ್ಕಾಽಕಾರಿ ಆನಂದಸಾ ಹಬೀಬ್, ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ನಾಗರಾಜ್, ನಬಾರ್ಡ್ ವ್ಯವಸ್ಥಾಪಕ ಸುಶೀಲ್, ಲೀಡ್ ಬ್ಯಾಂಕ್ ಮೆನೇಜರ್ ರಾಜಪ್ಪ ವೇದಿಕೆಯಲ್ಲಿದ್ದರು.