Theft ಕಳ್ಳತನ ಆರೋಪಿಯ ಬಂಧನ

 ಕಳ್ಳತನ ಆರೋಪಿ
ಕಳ್ಳತನ ಆರೋಪಿ
Published on
ಭಟ್ಕಳ: ನಗರದ ಕಿದ್ವಾಯಿ ರಸ್ತೆಯಲ್ಲಿ ನಡೆದ ಮನೆ ಕಳ್ಳತನ Theft ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ನಗರ ಪೊಲೀಸರು ಬಂಧಿಸಿ, ಆತನಿಂದ 4.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 20 ಸಾವಿರ ರೂ.ನಗದು ವಶಪಡಿಸಿಕೊಂಡಿದ್ದಾರೆ.
ಮೇ 8ರಂದು ಕಿದ್ವಾಯಿ ರಸ್ತೆಯ 1ನೇ ಕ್ರಾಸ್ ನಿವಾಸಿ ನಾಹಿದ್ ಅಕ್ತರ್ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ದುಷ್ಕರ್ಮಿಗಳು ಮನೆಯ ಹಿಂಭಾಗದ ಕಿಟಕಿಯ ಗಾಜು ಒಡೆದು ಒಳನುಗ್ಗಿ 55 ಗ್ರಾಂ ತೂಕದ 5.50 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಹಾಗೂ 10 ಸಾವಿರ ರೂನಗದು ಕಳವು ಮಾಡಿದ್ದರು. ಈ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಭಟ್ಕಳದ ಬದ್ರಿಯಾ ಕಾಲನಿ ನಿವಾಸಿ ೌಜಾನ್ ಅಹ್ಮದ್ (21)ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಕಳವು ಮಾಡಿದ ಚಿನ್ನಾಭರಣವನ್ನು ಬೆಂಗಳೂರಿನ ಕೆ.ಆರ್. ರಸ್ತೆಯ ಮಣಪ್ಪುರಂ ೈನಾನ್ಸ್ ಶಾಖೆಯಲ್ಲಿ ಗಿರವಿ ಇಟ್ಟಿರುವುದು ಬೆಳಕಿಗೆ ಬಂದಿದೆ.
ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು 29.01 ಗ್ರಾಂ ತೂಕದ 4.50 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಹಾಗೂ 20 ಸಾವಿರ ರೂ.ನಗದು ವಶಪಡಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net