Musical Sound Forest : ರಾಜ್ಯದ ಮೊದಲ ಸಂಗೀತ ಸ್ವರ ವನ

ಶಿರಸಿ ಮರಾಠಿಕೊಪ್ಪದ ಸಂಗೀತ ಸ್ವರ ವನ. ( Musical Sound Forest )
ಶಿರಸಿ ಮರಾಠಿಕೊಪ್ಪದ ಸಂಗೀತ ಸ್ವರ ವನ. ( Musical Sound Forest )
Published on

ಪ್ರಮುಖ ಮುಖ್ಯಾಂಶಗಳು

  • ಶಿರಸಿಯ ಮರಾಠಿಕೊಪ್ಪದ ಅಮರ ಜವಾನ್​ ಉದ್ಯಾನದಲ್ಲಿ ನಿರ್ಮಾಣ
ಮಂಜುನಾಥ ಸಾಯೀಮನೆ ಶಿರಸಿ
ಸಂಗೀತ ಯಾರಿಗೆ ತಾನೆ ಮೆಚ್ಚುಗೆಯಾಗುವುದಿಲ್ಲ? ಆದರೆ, ಸಂಗೀತದ ಉಪಕರಣಗಳ ತಯಾರಿಕೆಗೆ ಬಳಸುವ ಮರ ಗಿಡಗಳ ಬಗ್ಗೆ ಅನೇಕರಿಗೆ ಮಾಹಿತಿ ಇರುವುದಿಲ್ಲ. ಇಂತಹ ಸಸ್ಯಗಳ ಬಗ್ಗೆ ಸಾರ್ವಜನಿರಲ್ಲಿ ಜಾಗೃತಿ ಮೂಡಿಸಿ, ಬೆಳೆಸಲು ಉತ್ತೇಜಿಸುವ ಸಲುವಾಗಿ ರಾಜ್ಯದ ಮೊದಲ "ಸಂಗೀತ ಸ್ವರ ವನ' ( Musical Sound Forest ) ಶಿರಸಿಯಲ್ಲಿ ನಿರ್ಮಾಣವಾಗಿದೆ. ಕೆಲವೇ ದಿನಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಈ ವನ ತೆರೆದುಕೊಳ್ಳಲಿದೆ.
ಹೌದು, ನಗರದ ಮರಾಠಿಕೊಪ್ಪದ ಅಮರ ಜವಾನ ಉದ್ಯಾನದಲ್ಲಿ 4 ಗುಂಟೆ ೇತ್ರದಲ್ಲಿ ಈ ವನ ಸಿದ್ಧಗೊಂಡಿದೆ. ಸಂಗೀತ ೇತ್ರಕ್ಕೂ, ಪರಿಸರಕ್ಕೂ ಅಪಾರ ನಂಟಿದೆ. ಕೊಳಲು, ವೀಣೆ, ತಬಲಾ, ಹಾಮೋರ್ನಿಯಂ...ಹೀಗೆ ಎಲ್ಲ ಸಂಗೀತ ವಾದ್ಯಗಳ ತಯಾರಿಕೆಯಲ್ಲಿ ಮರಗಳ ಬಳಕೆ ಇದ್ದೇ ಇರುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಂಗೀತ ಸಾಧನ ತಯಾರಿಸಲು ಬೇಕಾಗುವ ಮರಗಳನ್ನು ಹೊರ ರಾಜ್ಯದಿಂದ ತರಿಸಿಕೊಳ್ಳಲಾಗುತ್ತಿದೆ. ನಮ್ಮಲ್ಲಿಯೇ ಈ ಗಿಡ ಮರಗಳನ್ನು ಬೆಳೆಯಬಹುದಾದರೂ ಈ ಬಗ್ಗೆ ಸೂಕ್ತ ಮಾಹಿತಿಯ ಕೊರತೆ ಸಂಗೀತ ಸಾಧನ ತಯಾರಕರಲ್ಲಿಯೂ ಇದೆ. ಈ ಹಿನ್ನೆಲೆಯಲ್ಲಿ ಸಂಗೀತ ಉಪಕರಣಗಳ ತಯಾರಿಕೆಗೆ ಬಳಸುವ ಮರಗಳು, ಅವುಗಳ ರಣೆ, ಈ ಗಿಡ ಬೆಳೆಸುವ ಬಗ್ಗೆ ಉತ್ತೇಜಿಸುವ ಕನಸಿನೊಂದಿಗೆ ಈ ವನ ತಲೆ ಎತ್ತಿದೆ.
ಇಲ್ಲಿಯ ಮರಾಠಿಕೊಪ್ಪದಲ್ಲಿರುವ ಈ ವನವನ್ನು ಕೆಲ ವರ್ಷಗಳ ಹಿಂದೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿದೆ. ನಗರಸಭೆಯ ಸುಪದಿರ್ಯಲ್ಲಿರುವ ಈ ವನದಲ್ಲಿ ಸೈನಿಕರಿಗೆ ಗೌರವ ಸಲ್ಲಿಸುವ ಹಿನ್ನೆಲೆಯಲ್ಲಿ ಅಮರ ಜವಾನ್​ ಸ್ಮಾರಕ ನಿಮಿರ್ಸಿಲಾಗಿದೆ. ಬಳಿಕ ಖಾಲಿ ಉಳಿದ ಜಾಗದಲ್ಲಿ ಮಕ್ಕಳ ಆಟಿಕೆ, ಜಾರು ಬಂಡಿಗಳನ್ನು ನಿಮಿರ್ಸಲಾಗಿದೆ. ಬಾಕಿ ಉಳಿದ 4 ಗುಂಟೆ ೇತ್ರವನ್ನು ನಗರಸಭೆ ಈ ಉದ್ಯಾನಕ್ಕಾಗಿ ಬಳಕೆ ಮಾಡಿಕೊಂಡಿದೆ. ನಗರಸಭೆಯ ಜೀವ ವೈವಿಧ್ಯತಾ ಸಮಿತಿ ಸದಸ್ಯರಾಗಿರುವ ಉಮಾಪತಿ ಭಟ್​ ಅವರು ಇಂತಹ ಕಲ್ಪನೆಗೆ ಜೀವ ನೀಡಿದ್ದಾರೆ. 15ನೇ ಹಣಕಾಸು ಯೋಜನೆಯಲ್ಲಿ 25 ಲ ರೂ. ವೆಚ್ಚದಲ್ಲಿ ಈ ಸಂಗೀತ ಸ್ವರ ವನ ಸಿದ್ಧಪಡಿಸಲಾಗಿದೆ.
ಏನಿದೆ ಉದ್ಯಾನದಲ್ಲಿ?:
ಉದ್ಯಾನದ ಮಧ್ಯ ಭಾಗದಲ್ಲಿ ಸರಸ್ವತಿ ಮೂತಿರ್ ಸ್ಥಾಪಿಸಲಾಗಿದೆ. ಮೂತಿರ್ಯ ಎದುರಿನಲ್ಲಿ ಸರಸ್ವತಿ ಕೈಲಿ ಹಿಡಿದಿರುವ ವೀಣೆ ತಯಾರಿಕೆಗೆ ಬಳಸುವ ಮರದ ಗಿಡಗಳನ್ನು ನೆಡಲಾಗಿದೆ. ಎರಡು ಸಾಲುಗಳಲ್ಲಿ ನಾಡಿನ ಪ್ರಖ್ಯಾತ ಸಂಗೀತಗಾರು ಸಂಗೀತ ನುಡಿಸುತ್ತಿರುವ ಮೂತಿರ್ಗಳನ್ನು ಸ್ಥಾಪಿಸಲಾಗಿದೆ. ತಬಲಾ ನುಡಿಸುತ್ತಿರುವ ಜಾಕೀರ್​ ಹುಸೇನ್​ ಮೂತಿರ್ಯ ಮುಂದೆ ತಬಲಾ ತಯಾರಿಕೆಗೆ ಬಳಸುವ ಗಿಡಗಳು, ಕೊಳಲು ವಾದಕರ ಮೂತಿರ್ಯ ಮುಂದೆ ವಾಟೆ ಗಿಡಗಳು... ಹೀಗೆ ಆಯಾ ವಾದ್ಯ ನುಡಿಸುತ್ತಿರುವ ಕಲಾವಿದ ಮೂತಿರ್ಯ ಮುಂದೆ ಸಂಬಂಧಿಸಿದ ಗಿಡಗಳನ್ನು ನೆಡಲಾಗಿದೆ. ಮದ್ದಾಲೆ, ಮಹಾನಿ, ರಕ್ತ ಚಂದನ, ಕಕ್ಕೆ, ಸಾಗವಾನಿ, ಹಲಸು, ಸರಳ...ಹೀಗೆ ನೂರಕ್ಕೂ ಹೆಚ್ಚಿನ ಗಿಡಗಳು ಇಲ್ಲಿವೆ.

ಸಂಗೀತ ಕಲಾವಿದ ಮೂತಿರ್ಗೆ ಮೇಲ್ಛಾವಣಿ ಹಾಗೂ ಜಾಗೃತಿ ಮೂಡಿಸುವ ಲಕಗಳ ಅಳವಡಿಕೆ ಕಾರ್ಯ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಇಲ್ಲಿಯ ಪ್ರತಿ ಗಿಡ ಮರಗಳಿಗೂ ಮಾಹಿತಿ ನೀಡುವ ಕ್ಯೂ ಆರ್​ ಕೋಡ್​ ಅಳವಡಿಸಲಿದ್ದೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net