

ಪ್ರಮುಖ ಮುಖ್ಯಾಂಶಗಳು
ಪುರಸಭೆ ಮುಖ್ಯಾಧಿಕಾರಿಗಳಿಗೆ ಈ ಸ್ಥಳಕ್ಕೆ ಕರೆಸಿ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಮಾಡಲು ಬಹಳ ಸಲ ವಿನಂತಿಸಲಾಗಿತ್ತು. ಜಿಲ್ಲೆಯ ಹಿರಿಯ ಅಧಿಕಾರಿಗಳು ಹೇಳಿದರೂ ಸಹ ಏನು ಪ್ರಯೋಜನಾಗಿಲ್ಲ. ಈಗ ಅನಿವಾರ್ಯವಾಗಿ ನಮ್ಮ ವಸತಿ ನಿಲಯದ ಶೌಚಗೃಹ ಹೊರತುಪಡಿಸಿ, ಸ್ನಾನಗೃಹ ಮತ್ತು ಕಿಚನ್ ನೀರನ್ನು ಹೊರಗಡೆ ಬಿಡಲಾಗುತ್ತಿದೆ.
ಅಲ್ಪಸಂಖ್ಯಾತ ಇಲಾಖೆಯ ಅಧಿಕಾರಿ ಯುಜಿಡಿ ಸಂಪರ್ಕಕ್ಕೆ ನಮಗೆ ಮನವಿ ಮಾಡಿದ್ದಾರೆ. ಆದರೆ ಅವರ ವಸತಿ ನಿಲಯ ಇರುವ ಸ್ಥಳದಲ್ಲಿ ಯುಜಿಡಿ ಪೈಪ್‌ಲೈನ್ ಇಲ್ಲ. ಹಾಗಾಗಿ ಅಲ್ಲಿ ಸಂಪರ್ಕ ನೀಡಲು ಆಗುತ್ತಿಲ್ಲ. ಸಚಿವರ ಸೂಚನೆಯಂತೆ ಕಾಲಕಾಲಕ್ಕೆ ನಾವು ಸೇಪ್ಟಿ ಟ್ಯಾಂಕನ್ನು ಕಾಲಿ ಮಾಡುತ್ತಾ ಇದ್ದೇವೆ. ಇನ್ನೂ ವಸತಿ ನಿಲಯದವರು ಅಲ್ಲಿ ಶೌಚವನ್ನು ಪಂಪ್ ಮಾಡಿ ಸಂತೆ ಮಾರುಕಟ್ಟೆಯ ಬಳಿಯ ಚೆಂಬರಿಗೆ ಸಂಪರ್ಕ ಮಾಡಿದರೆ ತಾತ್ಕಾಲಿಕ ಪರಿಹಾರ ದೊರಕಬಹುದು. ಬಳಿಕ ಯುಜಿಡಿ ಸಂಪರ್ಕ ಕಲ್ಪಿಸಿದ ಮೇಲೆ ಇದಕ್ಕೆ ಶಾಶ್ವತ ಪರಿಹಾರ ಸಿಗಲಿದೆ.