ಮತದಾರರ ಪಟ್ಟಿ ಪರಿಷ್ಕರಣೆ ಸಮರ್ಪಕವಾಗಿರಲಿ Voter List

ಯಲ್ಲಾಪುರದ ಪಪಂ ಮತದಾರರ ಪಟ್ಟಿಯ (Voter List) ಪರಿಷ್ಕರಣೆಯನ್ನು ರಾಜಕೀಯ ಹಸ್ತಕ್ಷೇಪ ಇಲ್ಲದೇ ಸಮರ್ಪಕವಾಗಿ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಮಂಡಲದ ವತಿಯಿಂದ ತಹಸೀಲ್ದಾರ್ ಚಂದ್ರಶೇಖರ ಹೊಸ್ಮನಿ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರಸಾದ ಹೆಗಡೆ, ಹರಿಪ್ರಕಾಶ ಕೋಣೆಮನೆ, ರಾಮು ನಾಯ್ಕ ಇತರರಿದ್ದರು.

Published on
ಯಲ್ಲಾಪುರ: ಪಟ್ಟಣ ಪಂಚಾಯಿತಿಯ ಮತದಾರರ ಪಟ್ಟಿಯ (Voter List) ಪರಿಷ್ಕರಣೆಯನ್ನು ರಾಜಕೀಯ ಹಸ್ತಕ್ಷೇಪ ಇಲ್ಲದೇ ಸಮರ್ಪಕವಾಗಿ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಮಂಡಲದ ವತಿಯಿಂದ ಪಟ್ಟಣದಲ್ಲಿ ತಹಸೀಲ್ದಾರ್ ಚಂದ್ರಶೇಖರ ಹೊಸ್ಮನಿ ಅವರಿಗೆ ಮನವಿ ಸಲ್ಲಿಸಲಾಯಿತು.
ಹಿಂದಿನ ಬಾರಿ ಪಟ್ಟಣ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಲೋಪವಾಗಿದೆ.
ಕೋರ್ಟ್‌ವಾಡದಲ್ಲಿ ವಾಸಿಸುವ ಮತದಾರರನ್ನು ಅಕ್ಬರಗಲ್ಲಿಗೆ, ಸಬಗೇರಿಯ ಮತದಾರರನ್ನು ಶಿವಾಜಿನಗರಕ್ಕೆ, ಇಸ್ಲಾಂ ಗಲ್ಲಿಯ ಮತದಾರರನ್ನು ಗೋಪಾಲಕೃಷ್ಣ ನಗರಕ್ಕೆ, ಗ್ರಾಮದೇವಿ ನಗರದ ಮತದಾರರನ್ನು ವಲೀಷಾಗಲ್ಲಿಗೆ ಹೀಗೆ ಎಲ್ಲ ವಾರ್ಡ್‌ಗಳಲ್ಲಿ ಅಸಮರ್ಪಕವಾಗಿ ಸೇರಿಸಲಾಗಿದೆ.
ವಾರ್ಡ್‌ವಾರು ವಿಗಂಡಣೆಯಲ್ಲಿ ರಾಜಕೀಯ ಹಸ್ತಕ್ಷೇಪ ಎದ್ದು ಕಾಣುತ್ತಿದೆ. ಈ ಬಾರಿಯಾದರೂ ಮತದಾರರ ಪಟ್ಟಿಯನ್ನು ರಾಜಕೀಯ ಹಸ್ತಕ್ಷೇಪವಿಲ್ಲದೇ ಸರಿಯಾಗಿ ಪರಿಷ್ಕರಿಸಬೇಕೆಂದು ಬಿಜೆಪಿ ಮುಖಂಡರು ಆಗ್ರಹಿಸಿದರು.
ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಜಿಲ್ಲಾ ಪದಾಧಿಕಾರಿಗಳಾದ ರಾಮು ನಾಯ್ಕ, ಗೋಪಾಲಕೃಷ್ಣ ಗಾಂವ್ಕರ, ವಿನೋದ ತಳೇಕರ, ದೊಂಡು ಪಾಟೀಲ, ವಿಠ್ಠು ಪಾಂಡ್ರಮೀಸೆ, ಗಜಾನನ ನಾಯ್ಕ, ವಿಶ್ವನಾಥ ಹಳೇಮನೆ, ರವಿ ದೇವಡಿಗ, ಮಂಜುನಾಥ ಹರಿಜನ, ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net