ಕುಮಟಾದ ಮಾರಿಬಂಟ ಜಟಗ ದೇವರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕೃಷ್ಣ ಪೈ ಇನ್ನಿತರ ಗಣ್ಯರು ಬಿಡುಗಡೆಗೊಳಿಸಿದರು. ಅನಂತರಾಯ ಪೈ, ರಾಜು ಗುನಗಾ, ರಾಮಚಂದ್ರ ಗುನಗಾ, ರಾಜು ನಾಯಕ, ಜಯರಾಮ ಗುನಗಾ, ಪ್ರಸಾದ ಶಾನಭಾಗ ಇತರರು ಇದ್ದರು.
Published on:
Copied
Follow Us
ಕುಮಟಾ: ಗ್ರಾಮದೇವಿ ಶ್ರೀ ಶಾಂತಿಕಾ ಪರಮೇಶ್ವರಿ ದೇವಿಯ ಸೀಮೆಯಲ್ಲಿ ಗುರುತಿಸಲ್ಪಟ್ಟ ಪುರಾತನ ಹಾಗೂ ಜಾಗೃತ ಶಕ್ತಿ ಸ್ಥಳವಾಗಿ ಪಟ್ಟಣದ ಕೊಂಕಣ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಮಾರಿಬಂಟ ಜಟಗ, ಚೌಡಿ, ನಾಗದೇವತೆ ಮತ್ತು ಸನ್ಯಾಸಿ ದೇವರ ಮರು ಪ್ರತಿಷ್ಠಾ ಮಹೋತ್ಸವವನ್ನು ಜೂನ್ 23 ಮತ್ತು 24ರಂದು ನೂತನ ನಿರ್ವಿುತ ಗುಡಿಯೊಳಗೆ ಶ್ರದ್ಧಾಭಕ್ತಿಯಿಂದ ನಡೆಸಲು ತೀರ್ವನಿಸಲಾಗಿದೆ ಎಂದು ಶ್ರೀ ಮಾರಿಬಂಟ ಜಟಗ ಸೇವಾ ಸಮಿತಿಯ ಅಧ್ಯಕ್ಷ ಅನಂತರಾಯ ಪಾಂಡುರಂಗ ಪೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುಮಾರು 500 ವರ್ಷಕ್ಕೂ ಹೆಚ್ಚು ಐತಿಹ್ಯ ಹೊಂದಿರುವ ಸನ್ನಿಧಾನದಲ್ಲಿ ಗ್ರಾಮರಕ್ಷಕ ದೈವವಾದ ಶ್ರೀ ಮಾರಿಬಂಟ ಜಟಗ, ಚೌಡೇಶ್ವರಿ, ನಾಗದೇವ ಹಾಗೂ ಸನ್ಯಾಸಿಯ ಸಾನ್ನಿಧ್ಯವು ಶತಶತಮಾನಗಳಿಂದ ಕ್ಷೇತ್ರದ ಹಾಗೂ ಭಕ್ತಾದಿಗಳ ಸಂರಕ್ಷಣೆ, ಶಾಂತಿ, ಸುಖ, ಸಮೃದ್ಧಿ ಮತ್ತು ಪವಾಡ ಸದೃಶ ಘಟನೆಗಳಿಗೆ ಹೆಸರುವಾಸಿಯಾಗಿ ಪ್ರಸಿದ್ಧಿ ಪಡೆದಿದೆ. ಸತ್ಯ ವಿಠೋಬ ಗುನಗಾ ಅವರ ಕುಟುಂಬವು ಈ ಕ್ಷೇತ್ರದ ಪೂಜೆ-ಪುನಸ್ಕಾರಗಳನ್ನು ಯಾವುದೇ ಫಲಾಪೇಕ್ಷೆಯಿಲ್ಲದೇ ನಿರಂತರವಾಗಿ ನಡೆಸಿಕೊಂಡು ಬಂದಿರುತ್ತಾರೆ ಎಂದರು.
ಏಳು ಅಡಿ ಎತ್ತರದ ಕೃಷ್ಣಶಿಲೆಯ ಶ್ರೀ ಮಾರಿಬಂಟ ಜಟಗ ದೇವರ ನೂತನ ಮೂರ್ತಿಯ ಪ್ರತಿಷ್ಠಾಪನೆಯ ಜತೆಗೆ ನಾಗದೇವತೆ, ಚೌಡಿ ಹಾಗೂ ಸನ್ಯಾಸಿ ದೇವರ ಮರುಪ್ರತಿಷ್ಠಾಪನೆ ನಡೆಯಲಿದೆ. ಈ ಕಾರ್ಯದಲ್ಲಿ ಭಕ್ತಾದಿಗಳು, ದಾನಿಗಳು ತುಂಬಾ ಸಹಯೋಗ ನೀಡಿದ್ದಾರೆ ಎಂದರು.
ಉಪ್ಪುಂದದ ವಿದ್ವಾನ್ ಉಮೇಶ ಭಾಸ್ಕರ ಹೊಳ್ಳ ಅವರ ಮಾರ್ಗದರ್ಶನದಲ್ಲಿ ಜೂನ್ 23ರಂದು ಗಣಹೋಮದೊಂದಿಗೆ ಆರಂಭಗೊಂಡು, ವಿವಿಧ ಧಾರ್ವಿುಕ ಕೈಂಕರ್ಯಗಳು ನಡೆಯಲಿವೆ. ಜೂ. 24ರಂದು ದೇವ ಪ್ರತಿಷ್ಠಾ ಬಳಿಕ ಬ್ರಹ್ಮಕಲಶಾಭಿಷೇಕ, ಮಹಾಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ಆಯೋಜಿಸಲಾಗಿದೆ ಎಂದರು.
ಸಮಿತಿಯ ಗೌರವಾಧ್ಯಕ್ಷ ಕೃಷ್ಣ ಬಾಬಾ ಪೈ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಸಮಿತಿಯ ಉಪಾಧ್ಯಕ್ಷ ರಾಜು ನಾಯಕ, ರಾಮಚಂದ್ರ ಸತ್ಯ ಗುನಗಾ, ಅರ್ಚಕರಾದ ರಾಜು ಗುನಗಾ, ಪ್ರಶಾಂತ ಗುನಗಾ, ಕಾರ್ಯದರ್ಶಿ ಜಯರಾಮ ಗಂಗಾಧರ ಗುನಗಾ, ಕೋಶಾಧ್ಯಕ್ಷ ಪ್ರಸಾದ ಬಾಬು ಶಾನಭಾಗ, ದೇವಳದ ಅರ್ಚಕರು, ಸಮಿತಿಯ ಸದಸ್ಯರು ಇತರರಿದ್ದರು.