ಕಲಾ ಪರಂಪರೆಯ ಉಳಿವಿಗೆ ಕಾರ್ಯಕ್ರಮ ಸಹಕಾರಿ

ಯಲ್ಲಾಪುರ ತಾಲೂಕಿನ ಮಾಗೋಡ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಕಲ್ಯಾಣ ಪ್ರಸಂಗ ಪಂಚಕ ಕಾರ್ಯಕ್ರಮವನ್ನು ಹಿರಿಯ ವೈದಿಕ, ಅರ್ಥಧಾರಿ ವೇ.ರಾಮಕೃಷ್ಣ ಭಟ್ಟ ಮಾಗೋಡ ಉದ್ಘಾಟಿಸಿದರು. ನರಸಿಂಹ ಕೋಣೆಮನೆ, ಗಣಪತಿ ಭಟ್ಟ, ವೆಂಕಟರಮಣ ಭಾಗ್ವತ, ನಾರಾಯಣ ಭಟ್ಟ ಇತರರಿದ್ದರು.
ಯಲ್ಲಾಪುರ ತಾಲೂಕಿನ ಮಾಗೋಡ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಕಲ್ಯಾಣ ಪ್ರಸಂಗ ಪಂಚಕ ಕಾರ್ಯಕ್ರಮವನ್ನು ಹಿರಿಯ ವೈದಿಕ, ಅರ್ಥಧಾರಿ ವೇ.ರಾಮಕೃಷ್ಣ ಭಟ್ಟ ಮಾಗೋಡ ಉದ್ಘಾಟಿಸಿದರು. ನರಸಿಂಹ ಕೋಣೆಮನೆ, ಗಣಪತಿ ಭಟ್ಟ, ವೆಂಕಟರಮಣ ಭಾಗ್ವತ, ನಾರಾಯಣ ಭಟ್ಟ ಇತರರಿದ್ದರು.
Published on
ಯಲ್ಲಾಪುರ: ತಾಲೂಕಿನ ಮಾಗೋಡ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ವೀರಮಾರುತಿ ತಾಳಮದ್ದಲೆ ಕೂಟದಿಂದ ಆಷಾಢ ಏಕಾದಶಿ ಪ್ರಯುಕ್ತ ನಾಲ್ಕನೇ ವರ್ಷದ ಪ್ರಸಂಗ ಪಂಚಕ ಕಾರ್ಯಕ್ರಮ ಶನಿವಾರ ಜರುಗಿತು.
ಸಂಜೆ 6ರಿಂದ ಬೆಳಗ್ಗೆ 6ರವರೆಗೆ ನಿರಂತರವಾಗಿ 12 ತಾಸುಗಳ ಕಾಲ ತಾಳಮದ್ದಲೆಗಳು ಪ್ರಸ್ತುತಗೊಂಡವು. ಈ ಬಾರಿ ಕಲ್ಯಾಣ ಪ್ರಸಂಗ ಪಂಚಕ ಎಂಬ ಶೀಷಿರ್ಕೆಯಡಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಐದು ಕಲ್ಯಾಣ ಪ್ರಸಂಗಗಳನ್ನು ಕಲಾವಿದರು ಪ್ರಸ್ತುತಪಡಿಸಿದರು.
ಕಾರ್ಯಕ್ರಮವನ್ನು ಹಿರಿಯ ವೈದಿಕ, ಅರ್ಥಧಾರಿ ವೇ. ರಾಮಕೃಷ್ಣ ಭಟ್ಟ ಮಾಗೋಡ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಟಿಎಂಎಸ್​ ಉಪಾಧ್ಯ ನರಸಿಂಹ ಕೋಣೆಮನೆ ಮಾತನಾಡಿ, ಆಷಾಢ ಏಕಾದಶಿಯ ಪರ್ವ ಕಾಲದಲ್ಲಿ ಸ್ಥಳಿಯ ಕಲಾವಿದರಿಗೆ ವೇದಿಕೆ ಒದಗಿಸುವ ಉದ್ದೇಶದಿಂದ ನಡೆಯುವ ಇಂತಹ ಕಾರ್ಯಕ್ರಮಗಳು ಕಲಾ ಪರಂಪರೆಯ ಉಳಿಸುವ ನಿಟ್ಟಿನಲ್ಲಿ ಅಗತ್ಯವಾಗಿವೆ. ಅನೇಕ ಹೊಸ ಕಲಾವಿದರಿಗೆ, ಆಸಕ್ತರಿಗೆ ಇದು ಪ್ರೇರಣೆಯಾಗುತ್ತದೆ ಎಂದರು.
ಹಿರಿಯ ವೈದಿಕ ಗಣಪತಿ ಭಟ್ಟ ಮಾಗೋಡ, ದೇವಸ್ಥಾನದ ಮೊಕ್ತೆಸರ ನಾರಾಯಣ ಭಟ್ಟ, ಪ್ರಮುಖರಾದ ಕೃಷ್ಣ ಹೆಗಡೆ ಕುಳಿಮಾಗೋಡ, ವೆಂಕಟರಮಣ ಭಾಗ್ವತ ಹೆಬ್ಬಾರಮನೆ ಇತರರಿದ್ದರು.
ನರಸಿಂಹ ಭಟ್ಟ ಕುಂಕಿಮನೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಧರ ಅಣಲಗಾರ, ನಾಗರಾಜ ಭಟ್ಟ ಕುಂಕಿಪಾಲ, ಮಹಾಬಲೇಶ್ವರ ಭಟ್ಟ ಬೆಳಶೇರು, ನಾರಾಯಣ ಭಟ್ಟ ಕಿರಕುಂಭತ್ತಿ ನಿರ್ವಹಿಸಿದರು. ಮಂಜುನಾಥ ಜೋಶಿ ವಂದಿಸಿದರು.
ಆದ್ಯಪಾಡಿ ರಾಮಕೃಷ್ಣಯ್ಯ ವಿರಚಿತ ಯೋಗಿನಿ ಕಲ್ಯಾಣ, ಹಟ್ಟಿಯಂಗಡಿ ರಾಮ ಭಟ್ಟ ವಿರಚಿತ ರತಿ ಕಲ್ಯಾಣ, ಸೀತಾನದಿ ಗಣಪಯ್ಯ ಶೆಟ್ಟಿ ವಿರಚಿತ ಶ್ರೀನಿವಾಸ ಕಲ್ಯಾಣ, ನಿತ್ಯಾನಂದ ಅವಧೂತ ವಿರಚಿತ ಕನಕಾಂಗಿ ಕಲ್ಯಾಣ ಹಾಗೂ ದೇವಿದಾಸ ವಿರಚಿತ ಗಿರಿಜಾ ಕಲ್ಯಾಣ ಆಖ್ಯಾನಗಳು ನಡೆದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net