ವಿಶೇಷತೆ ಬೆರೆತ ಯಕ್ಷಗಾನ ಕಲೆಗಳ ರಾಜ

ಸಿದ್ದಾಪುರ ತಾಲೂಕಿನ ಶಿರಳಗಿಯ ಚೈತನ್ಯ ರಾಜಾರಾಮ ಕ್ಷೇತ್ರದಲ್ಲಿ ನಡೆದ ಯಕ್ಷರಾಮ ಕಥಾ ಕಾರ್ಯಕ್ರಮವನ್ನು ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿದರು. ಗಂಗಾಧರ ಕೊಳಗಿ, ಕೇಶವ ಹೆಗಡೆ, ಶರತ್ ಜಾನಕೈ ಇದ್ದರು.
ಸಿದ್ದಾಪುರ ತಾಲೂಕಿನ ಶಿರಳಗಿಯ ಚೈತನ್ಯ ರಾಜಾರಾಮ ಕ್ಷೇತ್ರದಲ್ಲಿ ನಡೆದ ಯಕ್ಷರಾಮ ಕಥಾ ಕಾರ್ಯಕ್ರಮವನ್ನು ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿದರು. ಗಂಗಾಧರ ಕೊಳಗಿ, ಕೇಶವ ಹೆಗಡೆ, ಶರತ್ ಜಾನಕೈ ಇದ್ದರು.
Published on
ಸಿದ್ದಾಪುರ: ನೃತ್ಯ, ವೇಷ, ಸಾಹಿತ್ಯ, ಸಂಗೀತ, ವಾದನ, ಮಾತುಗಾರಿಕೆ ಸೇರಿದಂತೆ ಎಲ್ಲ ವಿಶೇಷತೆಗಳೂ ಬೆರೆತ ಯಕ್ಷಗಾನ ಕಲೆಗಳ ರಾಜ ಎಂದು ತಾಲೂಕಿನ ಶಿರಳಗಿಯ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಹೇಳಿದರು.
ತಾಲೂಕಿನ ಶಿರಳಗಿಯ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರದಲ್ಲಿ ಬಾಲ ಭಾರತೀ ಸಂಘಟನೆ ಆಯೋಜಿಸಿದ್ದ ಸಂಸ್ಕಾರ ಸುಧಾ ಎನ್ನುವ ಮಕ್ಕಳ ಶಿಬಿರದಲ್ಲಿ ಅನಂತ ಯಕ್ಷಕಲಾ ಪ್ರತಿಷ್ಠಾನದವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಏಕ ವ್ಯಕ್ತಿ ಪ್ರದರ್ಶನ ಯಕ್ಷರಾಮ ಕಥಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯ, ಕಲೆ, ಸಂಗೀತಗಳ ಸಂಪರ್ಕವಿಲ್ಲದವನು ಪಶುವಿಗಿಂತಲೂ ಕಡೆ ಎನ್ನುವ ಮಾತಿದೆ. ನಮ್ಮ ಬದುಕಿಗೆ ಸುಖ ಸಿಗುವುದು ಸಂಪಾದನೆ ಮತ್ತು ಮೋಜು, ಆರಾಮಗಳಿಂದ ಎಂದು ತಿಳಿದಿದ್ದರೆ ತಪ್ಪು. ನಿಜವಾದ ಸುಖ ಸಿಗುವುದು ಸಾಹಿತ್ಯ, ಸಂಗೀತದಂತಹ ಕಲೆಗಳಿಂದ. ಶ್ರೀ ರಾಮನ ಕುರಿತಾದ ಪ್ರಾತ್ಯಕ್ಷಿಕೆ ಬೇರೆ ಬೇರೆ ಯಕ್ಷಗಾನ ಪ್ರಸಂಗಗಳಿಂದ ಆಯ್ದ ಪದ್ಯಗಳ ಗಾಯನ ಮತ್ತು ಯಕ್ಷಗಾನ ನೃತ್ಯದಿಂದ ಕೂಡಿದೆ ಎಂದರು.
ಪತ್ರಕರ್ತ ಗಂಗಾಧರ ಕೊಳಗಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ಆಯಾ ಪ್ರದೇಶದ ಕಲೆಗಳು ಸಂಸ್ಕಾರ ಕಟ್ಟಿಕೊಡುತ್ತವೆ. ನಮಗೆಲ್ಲ ಜಾತಿ, ಧರ್ಮ, ಅಂತಸ್ತು ಮೀರಿ ಯಕ್ಷಗಾನ ಒಂದಿಷ್ಟು ಸಂಸ್ಕಾರ ನೀಡಿದೆ. ಸನಾತನಿಗಳ ಆದರ್ಶವಾದ ಶ್ರೀ ರಾಮನ ಕುರಿತು ಮಕ್ಕಳಿಗೆ ಯಕ್ಷಗಾನದ ಹಾಡು, ನೃತ್ಯಗಳ ಮೂಲಕ ಅರಿವು ಮೂಡಿಸುವ ಕಾರ್ಯ ಮಹತ್ವದ್ದಾಗಿದೆ ಎಂದರು.
ಕೇಶವ ಹೆಗಡೆ ಕೊಳಗಿ ಮಾತನಾಡಿ, ಕಳೆದ 20 ವರ್ಷಗಳಿಂದ ಅನಂತ ಯಕ್ಷಕಲಾ ಪ್ರತಿಷ್ಠಾನ ಯಕ್ಷಗಾನ ಪ್ರದರ್ಶನ, ಸಾಧಕರಿಗೆ ಪ್ರಶಸ್ತಿ ಪ್ರದಾನ ಸೇರಿದಂತೆ ಯಕ್ಷಗಾನದ ಕುರಿತು ಕಾರ್ಯಕ್ರಮ ನಡೆಸುತ್ತ ಬಂದಿದೆ. ಶಿಬಿರದಲ್ಲಿ ಮಕ್ಕಳಿಗೆ ಯಕ್ಷಗಾನ ಕಲೆ, ಸಂಸ್ಕೃತಿಯ ಪರಿಚಯ ಮಾಡಿಕೊಡಲು ಶ್ರೀಗಳಿಂದ ಅವಕಾಶ ದೊರಕಿದೆ ಎಂದರು.
ಮದ್ದಳೆವಾದಕ ಶರತ್ ಹೆಗಡೆ ಜಾನಕೈ ಇದ್ದರು. ಹಲವು ಯಕ್ಷಗಾನ ಪ್ರಸಂಗಗಳ ಪದ್ಯಗಳನ್ನು ಸಂಯೋಜಿಸಿ ರೂಪಿಸಿದ ಯಕ್ಷ ರಾಮ ಕಥಾ ಏಕ ವ್ಯಕ್ತಿ ಪ್ರದರ್ಶನದಲ್ಲಿ ಶ್ರೀರಾಮನ ಪಾತ್ರದಲ್ಲಿ ವಿನಾಯಕ ಹೆಗಡೆ ಕಲಗದ್ದೆ ನೃತ್ಯ ಮತ್ತು ಅಭಿನಯನದ ಮೂಲಕ ರಾಮನ ಪಾತ್ರಕ್ಕೆ ವಿಶಿಷ್ಠತೆ ತಂದುಕೊಟ್ಟರು.
ಹಿಮ್ಮೇಳದದಲ್ಲಿ ಕೇಶವ ಹೆಗಡೆ ಕೊಳಗಿ, ಶರತ ಹೆಗಡೆ ಜಾನಕೈ ಹಾಗೂ ಆದಿತ್ಯ ಕೆರೆಕೊಪ್ಪ ಉತ್ತಮ ಸಾಥ್ ನೀಡಿದರು. ನ್ಯಾಖ್ಯಾನಕಾರರಾಗಿ ಗಣಪತಿ ಹೆಗಡೆ ಗುಂಜಗೋಡ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net