war ಆಟೋ ಚಾಲಕರಿಗೆ ತಟ್ಟಿದ ಯುದ್ಧದ ಬಿಸಿ !

ಮಧ್ಯಪ್ರಾಚ್ಯದ ಯುದ್ಧ war ಬಿಕ್ಕಟ್ಟಿನಿಂದ ಸಿಎನ್‌ಜಿ ಗ್ಯಾಸ್ ಇಂಧನ ಕೊರತೆಯಿಂದಾಗಿ ಶಿರಸಿಯ ಪೆಟ್ರೋಲ್ ಬಂಕ್ ಬಳಿ ಸಾಲುಗಟ್ಟಿ ನಿಂತಿರುವ ಆಟೋಗಳು.
ಮಧ್ಯಪ್ರಾಚ್ಯದ ಯುದ್ಧ war ಬಿಕ್ಕಟ್ಟಿನಿಂದ ಸಿಎನ್‌ಜಿ ಗ್ಯಾಸ್ ಇಂಧನ ಕೊರತೆಯಿಂದಾಗಿ ಶಿರಸಿಯ ಪೆಟ್ರೋಲ್ ಬಂಕ್ ಬಳಿ ಸಾಲುಗಟ್ಟಿ ನಿಂತಿರುವ ಆಟೋಗಳು.
Published on
ಶಿರಸಿ: ಮಧ್ಯಪ್ರಾಚ್ಯದಲ್ಲಿ ಇರಾನ್, ಅಮೇರಿಕ ಯುದ್ಧ war ಬಿಕ್ಕಟ್ಟು ನಗರದ ಆಟೋ ಪ್ರಯಾಣಿಕರು ಹಾಗೂ ಆಟೋ ಚಾಲಕರಿಗೂ ತಟ್ಟಿದೆ. ಆಟೋ ಚಾಲಕರಿಗೆ ಸಿಎನ್‌ಜಿ ಗ್ಯಾಸ್ ಇಂಧನಕ್ಕಾಗಿ ಪೆಟ್ರೋಲ್ ಬಂಕ್‌ಗಳ ಮುಂದೆ ಕಾಯುವ ಪರಿಸ್ಥಿತಿ ಎದುರಾಗಿದೆ.
ನಗರದಲ್ಲಿ ಎರಡು ಪೆಟ್ರೋಲ್ ಬಂಕ್‌ಗಳಲ್ಲಿ ಮಾತ್ರ ಸಿಎನ್‌ಜಿ ಗ್ಯಾಸ್ ಇಂಧನ ಲಭ್ಯವಿದೆ. ಇದರಿಂದಾಗಿ ಸಾಮಾನ್ಯ ದಿನಗಳಲ್ಲಿಯೂ ಇಂಧನ ತುಂಬಿಸಿಕೊಳ್ಳಲು ಸಮಯ ಹಿಡಿಯುತ್ತಿತ್ತು.
ನಗರದಾದ್ಯಂತ 500ಕ್ಕೂ ಅಧಿಕ ಆಟೋಗಳು ಗ್ಯಾಸ್ ಇಂಧನವನ್ನೇ ಬಳಸುತ್ತಿವೆ. ಯುದ್ಧದ ಸನ್ನಿವೇಶ ಆರಂಭವಾದ ಬಳಿಕ ಸಿಎನ್‌ಜಿ ಇಂಧನ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ ಎಂದು ಆಟೋ ಚಾಲಕರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಆಟೋ ಚಾಲಕ ವಿಶ್ವನಾಥ ಗೌಡ ಹೇಳುವಂತೆ ಕಳೆದ ಎರಡು ದಿನಗಳಿಂದ ಅಗತ್ಯ ಪ್ರಮಾಣದಲ್ಲಿ ಸಿ ಎನ್ ಜಿ ಗ್ಯಾಸ್ ಆಟೋಗಳಿಗೆ ಲಭ್ಯವಾಗುತ್ತಿಲ್ಲ. ಬಹುತೇಕ ಆಟೋ ಚಾಲಕರು ಅಂದಿನ ದುಡಿಮೆಯನ್ನೇ ಅವಲಂಬಿಸಿ ಜೀವನ ನಡೆಸುತ್ತಿರುವುದರಿಂದ ಆದಾಯ ಕೊರತೆ ಸಮಸ್ಯೆಯಾಗಿದೆ. ಶೀಘ್ರದಲ್ಲಿ ಸಿಎನ್‌ಜಿ ಗ್ಯಾಸ್ ಇಂಧನ ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪೆಟ್ರೋಲ್ ಬಂಕ್ ಗಳ ಮಾಲೀಕರು ಹೇಳುವಂತೆ ಸಿ ನ್‌ಜಿ ಗ್ಯಾಸ್ ಇಂಧನ ಪೂರೈಕೆಯಲ್ಲಿ ಗಮನಾರ್ಹ ಸಮಸ್ಯೆ ಏನೂ ಆಗಿಲ್ಲ. ಆದರೆ, ಗ್ಯಾಸ್ ಲಭ್ಯವಿಲ್ಲ ಎಂಬ ವದಂತಿ ದಟ್ಟವಾಗಿ ಹಬ್ಬಿರುವ ಕಾರಣ ಆಟೋ ಚಾಲಕರು, ಗ್ಯಾಸ್ ಇಂಧನ ಬಳಸುವ ವಾಹನ ಮಾಲೀಕರು ಒಮ್ಮೆಲೇ ಪೆಟ್ರೋಲ್ ಬಂಕ್‌ಗೆ ಆಗಮಿಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಗ್ಯಾಸ್ ಅಲಭ್ಯವಾದರೆ ಎಂಬ ಆತಂಕದಲ್ಲಿ ಟ್ಯಾಂಕ್ ಭರ್ತಿ ಮಾಡಿಸಿಕೊಳ್ಳುತ್ತಿರುವುದರಿಂದ ಸಮಸ್ಯೆ ಆಗಿದೆ ಎನ್ನುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net