ನಂಬಿದ ದೇವರು ಎಂದಿಗೂ ಕೈ ಬಿಡುವುದಿಲ್ಲ

ಸಿದ್ದಾಪುರ ತಾಲೂಕಿನ ಬೇಡ್ಕಣಿ ಸಮೀಪದ ಈಶ್ವರ ದೇವಸ್ಥಾನ ಮಾತಿಮಠ ಹಾಗೂ ಪರವಾರ ದೇವರುಗಳ ಪ್ರತಿಷ್ಠಾಪನೆ ನಡೆಯಿತು.
ಸಿದ್ದಾಪುರ ತಾಲೂಕಿನ ಬೇಡ್ಕಣಿ ಸಮೀಪದ ಈಶ್ವರ ದೇವಸ್ಥಾನ ಮಾತಿಮಠ ಹಾಗೂ ಪರವಾರ ದೇವರುಗಳ ಪ್ರತಿಷ್ಠಾಪನೆ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಧರ್ಮಸಭೆಯಲ್ಲಿ ಶ್ರೀ ಘನಬಸವ ಅಮೃತೇಶ್ವರ ಶ್ರೀಗಳ ಆಶೀರ್ವಚನ
ಸಿದ್ದಾಪುರ: ಬುದ್ಧಿವಂತನಾಗಿರುವ ಮನುಷ್ಯ ಮಾನವೀಯ ಗುಣಗಳನ್ನು ಕಳೆದುಕೊಳ್ಳುತಿದ್ದಾನೆ. ನಮ್ಮಲ್ಲಿ ಹೃದಯವಂತಿಕೆ ಇಲ್ಲದಂತಾಗಿದೆ. ಭಕ್ತಿ ಎನ್ನುವುದು ಅಚಲವಾಗಿರಬೇಕು. ನಾವು ದೇವರನ್ನು ಒಲಿಸಿಕೊಳ್ಳುವಲ್ಲಿ ಜಾಣರಾಗಬೇಕು. ದೇವರನ್ನು ನಂಬಿದರೆ ಮಾತ್ರ ಅವನು ನಮ್ಮನ್ನು ಕೈಬಿಡುವುದಿಲ್ಲ ಎಂದು ಸೊರಬ ತಾಲೂಕಿನ ಕಾನಕೇರಿಮಠದ ಶ್ರೀ ಘನಬಸವ ಅಮೃತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಬೇಡ್ಕಣಿ ಸಮೀಪದ ಈಶ್ವರ ದೇವಸ್ಥಾನ ಮಾತಿಮಠ ಹಾಗೂ ಪರವಾರ ದೇವರುಗಳ ಪ್ರತಿಷ್ಠಾಪನಾ ಕಾರ್ಯಕ್ರಮದ ಧರ್ಮಸಭೆಯ ಅಧ್ಯಕ್ಷತೆವಹಿಸಿ ಅವರು ಆಶೀರ್ವಚನ ನೀಡಿದರು.
ನಮ್ಮ ಸಂಸ್ಕೃತಿಗಳು ಶ್ರೇಷ್ಠವಾಗಿದ್ದು, ಅವುಗಳನ್ನು ಉಳಿಸುವ ಇಂತಹ ಶ್ರೇಷ್ಠ ಕಾರ್ಯಕ್ರಮದಲ್ಲಿ ಎಲ್ಲರೂ ತೊಡಗಿಕೊಳ್ಳಬೇಕು. ಎಲ್ಲರೂ ಜವಾಬ್ದಾರಿಯಿಂದ ಕ್ಷೇತ್ರವನ್ನು ರಕ್ಷಿಸಿಕೊಳ್ಳಬೇಕು. ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ತಿಳಿಸಿಕೊಡಬೇಕು. ದೇವಸ್ಥಾನಗಳ ಕುರಿತು ಪರಿಚಯ ಮಾಡಿಕೊಡಬೇಕಾಗಿದೆ. ಹಾಗಿದ್ದರೆ ಮಾತ್ರ ಇಂತಹ ಸ್ಥಾನಗಳು ಉಳಿಯುತ್ತದೆ. ದೇವಸ್ಥಾನದಂತಹ ಪುಣ್ಯ ಸ್ಥಳದಲ್ಲಿ ಮಹಿಳೆಯರು, ಯುವಕರು, ಮಕ್ಕಳು ವಾರಕ್ಕೊಮ್ಮೆಯಾದರೂ ಸೇರಿ ಭಜನೆ ಹಾಗೂ ಧ್ಯಾನ ಮಾಡಬೇಕು. ಆ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಬೇಕು ಎಂದರು. ವೇಮೂ ಪರಮೇಶ್ವರಯ್ಯ ಕಾನಳ್ಳಿಮಠ, ದೇವಸ್ಥಾನ ಕಮಿಟಿ ಅಧ್ಯಕ್ಷ ಸುರೇಶ ಹೆಗಡೆ ದಂಪತಿ ಉಪಸ್ಥಿತರಿದ್ದರು.
ದೇವಸ್ಥಾನ ಕಟ್ಟಡ ಕಾರ್ಯದಲ್ಲಿ ಸಹಕರಿಸಿದವರನ್ನು ಸನ್ಮಾನಿಸಲಾಯಿತು. ಪ್ರತಿಷ್ಠಾಪನಾ ಅಂಗವಾಗಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮುಕ್ತಾಯ ದಿನದಂದು ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net