ಯಜ್ಞದಷ್ಟೇ ಪವಿತ್ರ ತಪಸ್ಸು ನಾಟ್ಯಕಲೆ

ಕುಮಟಾದ ಹವ್ಯಕ ಸಭಾಭವನದಲ್ಲಿ ಭರತನಾಟ್ಯ ರಂಗಪ್ರವೇಶಗೈದ ವಿದುಷಿ ಮೇದಿನಿ ಭಟ್​ ಅವರನ್ನು ಗೌರವಿಸಲಾಯಿತು. ಜಿ.ಎಲ್​. ಹೆಗಡೆ, ಎಂ.ಎಂ. ಹೆಗಡೆ, ಪ್ರದಿಪ ಭಟ್​, ಡಾ. ಸಹನಾ ಭಟ್​, ಶ್ರೀರಾಮ ಭಟ್​, ಪಾರ್ವತಿ ಭಟ್ಟ, ರಮಾ ಭಟ್ಟ ಇತರರಿದ್ದರು.
ಕುಮಟಾದ ಹವ್ಯಕ ಸಭಾಭವನದಲ್ಲಿ ಭರತನಾಟ್ಯ ರಂಗಪ್ರವೇಶಗೈದ ವಿದುಷಿ ಮೇದಿನಿ ಭಟ್​ ಅವರನ್ನು ಗೌರವಿಸಲಾಯಿತು. ಜಿ.ಎಲ್​. ಹೆಗಡೆ, ಎಂ.ಎಂ. ಹೆಗಡೆ, ಪ್ರದಿಪ ಭಟ್​, ಡಾ. ಸಹನಾ ಭಟ್​, ಶ್ರೀರಾಮ ಭಟ್​, ಪಾರ್ವತಿ ಭಟ್ಟ, ರಮಾ ಭಟ್ಟ ಇತರರಿದ್ದರು.
Published on

ಕುಮಟಾ: ನಾಟ್ಯಕಲೆ ಕೇವಲ ಮನರಂಜನೆಗಲ್ಲ, ಅದು ಯಜ್ಞದಷ್ಟೇ

ಪವಿತ್ರವಾದ ತಪಸ್ಸು. ನಾಟ್ಯವು ಭಾರತೀಯ ಸಂಸತಿಯ ಆಧ್ಯಾತ್ಮಿಕ ಅಭಿವ್ಯಕ್ತಿ ಎಂದು ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಡಾ. ಜಿ.ಎಲ್​. ಹೆಗಡೆ ಹೇಳಿದರು.


ಪಟ್ಟಣದ ಹವ್ಯಕ ಸಭಾಭವನದಲ್ಲಿ ಇತ್ತೀಚೆಗೆ ನಾಟ್ಯಾಂಜಲಿ ನೃತ್ಯಕಲಾ ಕೇಂದ್ರದ ಆಶ್ರಯದಲ್ಲಿ ವಿದುಷಿ ಡಾ. ಸಹನಾ ಪ್ರದಿಪ ಭಟ್ಟ ಅವರ ಶಿಷ್ಯೆ ವಿದುಷಿ ಮೇದಿನಿ ಶ್ರೀರಾಮ ಭಟ್ಟ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನೃತ್ಯ ಕಲಿತರೆ ಮಾತ್ರ ಸಾಲದು. ಅದನ್ನು ಸಾಧನೆಯ ಮೂಲಕ ಜೀವನದ ಭಾಗವನ್ನಾಗಿಸಿಕೊಳ್ಳಬೇಕು ಎಂದರು.
ಹೊಲನಗದ್ದೆ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಎಂ.ಎಂ. ಹೆಗಡೆ ಮಾತನಾಡಿ, ಮೇದಿನಿ ಭಟ್ಟ ಅವರ ರಂಗಪ್ರವೇಶವು ಗುರುಗಳ ಪರಿಶ್ರಮದ ಲವಾಗಿದ್ದು, ಮುಂದಿನ ದಿನಗಳಲ್ಲಿ ಅವರು ರಾಷ್ಟ್ರಮಟ್ಟದ ಕಲಾವಿದೆಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಅಧ್ಯತೆ ವಹಿಸಿದ್ದ ನಾಟ್ಯಾಂಜಲಿ ನೃತ್ಯಕಲಾ ಕೇಂದ್ರದ ಅಧ್ಯಕ್ಷ ಪ್ರದಿಪ ಭಟ್ಟ ಸ್ವಾಗತಿಸಿದರು. ಸತೀಶ ಮೂರೂರು ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಶ್ರೀರಾಮ ಭಟ್ಟ, ಪಾರ್ವತಿ ಭಟ್ಟ, ರಮಾ ಭಟ್ಟ, ಡಾ. ಸಹನಾ ಪ್ರದಿಪ ಭಟ್ಟ ಇತರರಿದ್ದರು.
ವಿದುಷಿ ಮೇದಿನಿ ಭಟ್ಟ ಗುರುವಂದನಾ ನೃತ್ಯದಿಂದ ರಂಗಪ್ರವೇಶ ಕಾರ್ಯಕ್ರಮ ಆರಂಭಿಸಿದರು. ನಂತರ ಮಹಾಭಾರತದ ಅಜ್ಞಾತವಾಸದ ಸಂದರ್ಭದ ಅರ್ಜುನನ ಬೃಹನ್ನಳೆ ಪಾತ್ರವನ್ನು ಆಧರಿಸಿದ ಏಕವ್ಯಕ್ತಿ ನೃತ್ಯರೂಪಕವನ್ನು ಅದ್ಭುತವಾಗಿ ಪ್ರದಶಿರ್ಸಿದರು.
ಈ ನೃತ್ಯರೂಪಕದ ಸಾಹಿತ್ಯವನ್ನು ಅಂಕಣಕಾರ ಪ್ರದಿಪ ಭಟ್ಟ ರಚಿಸಿದ್ದು, ಸಂಗೀತ ಸಂಯೋಜನೆಯನ್ನು ವಿದ್ವಾನ್​ ಬಾಲಸುಬ್ರಹ್ಮಣ್ಯ ಶರ್ಮಾ ಮಾಡಿದ್ದರು. ಪರಿಕಲ್ಪನೆ ಹಾಗೂ ನೃತ್ಯ ಸಂಯೋಜನೆಯನ್ನು ಡಾ. ಸಹನಾ ಭಟ್ಟ ನಿರ್ವಹಿಸಿದರು.
ಹಿಮ್ಮೇಳದ ನಟುವಾಂಗದಲ್ಲಿ ಡಾ. ಸಹನಾ ಭಟ್ಟ, ಗಾಯನದಲ್ಲಿ ವಿದ್ವಾನ್​ ಬಾಲಸುಬ್ರಹ್ಮಣ್ಯ ಶರ್ಮಾ, ಮೃದಂಗದಲ್ಲಿ ವಿದ್ವಾನ್​ ಪಂಚಮ ಉಪಾಧ್ಯಾಯ, ಕೊಳಲಿನಲ್ಲಿ ವಿದ್ವಾನ್​ ದೀಪಕ ಹೆಬ್ಬಾರ ಹಾಗೂ ರಿದಮ್​ ಪ್ಯಾಡ್​ನಲ್ಲಿ ವಿದ್ವಾನ್​ ಡಾ. ಗೋಪಾಲಕೃಷ್ಣ ಸಾಥ್​ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net