ಸನಾತನ ಗ್ರಂಥಗಳೇ ನ್ಯಾಯಾಂಗ ವ್ಯವಸ್ಥೆಯ ಅಡಿಪಾಯ judicial

ಗೋಕರ್ಣದ ಸಾರ್ವಭೌಮ ಗುರುಕುಲಮ್‌ನಲ್ಲಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ದಿನಾಚರಣೆ ನಿಮಿತ್ತ ಕಾನೂನು ಅರಿವು (judicial) ಕಾರ್ಯಕ್ರಮ ನಡೆಯಿತು.
ಗೋಕರ್ಣದ ಸಾರ್ವಭೌಮ ಗುರುಕುಲಮ್‌ನಲ್ಲಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ದಿನಾಚರಣೆ ನಿಮಿತ್ತ ಕಾನೂನು ಅರಿವು (judicial) ಕಾರ್ಯಕ್ರಮ ನಡೆಯಿತು.
Published on
ಗೋಕರ್ಣ: ರಾಮಾಯಣ, ಮಹಾಭಾರತ ಮತ್ತಿತರ ಸನಾತನ ಗ್ರಂಥಗಳೆ ಭಾರತೀಯ ನ್ಯಾಯಾಂಗ (judicial) ವ್ಯವಸ್ಥೆಯ ಅಡಿಪಾಯಗಳಾಗಿವೆ.
ಅಲ್ಲಿ ಉಲ್ಲೇಖಿತವಾದ ಧರ್ಮ-ಅಧರ್ಮ, ನ್ಯಾಯ-ಅನ್ಯಾಯ ಮತ್ತು ತತ್ವ-ಸಿದ್ಧಾಂತಗಳು ಇವತ್ತಿನ ಭಾರತೀಯ ಅಪರಾಧ ಮತ್ತು ದಂಡ ಸಂಹಿತೆಯಲ್ಲಿ ಸಹ ಕಾಣಬಹುದಾಗಿದೆ ಎಂದು ಯುವ ವಕೀಲ ಮಂಗಲಮೂರ್ತಿ ಸಭಾಹಿತ ನುಡಿದರು.
ಇಲ್ಲಿನ ಸಾರ್ವಭೌಮ ಗುರುಕುಲಮ್‌ನಲ್ಲಿ ಆಚರಿಸಲಾದ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ದಿನಾಚರಣೆ ನಿಮಿತ್ತ ನಡೆದ ಕಾನೂನು ಅರಿವು ವಿಶೇಷ ಕಾರ್ಯಕ್ರಮದಲ್ಲಿ ವರ್ತಮಾನದ ನ್ಯಾಯ ಪದ್ಧತಿಯ ಬಗ್ಗೆ ಅವರು ಮಾತನಾಡಿದರು.
ಹಿರಿಯ ವಕೀಲ ವಿನಾಯಕ ಶೇಟ್ ಮಾತನಾಡಿ, ಅಪರಾಧ ಎಸಗದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಪ್ರಸ್ತುತ ಜಾರಿಯಲ್ಲಿರುವ ಈ ನೆಲದ ಕಾಯ್ದೆ-ಕಾನೂನುಗಳ ಅರಿವು ಹೊಂದಿರುವುದು ಅತ್ಯಂತ ಅಗತ್ಯವಾಗಿದೆ.
ಮೂಲಭೂತ ಹಕ್ಕು ಮತ್ತು ನಾಗರಿಕ ಕರ್ತವ್ಯಗಳು, ವರ್ತಮಾನದ ಸಾಮಾನ್ಯ ಕಾನೂನುಗಳು ಹಾಗೂ ಶಿಕ್ಷಾ ವಿಧಾನಗಳ ಮಾಹಿತಿಯನ್ನು ವಿದ್ಯಾರ್ಥಿಗಳು ಪಡೆದು ಇತರರಿಗೆ ತಿಳಿಸುವ ಮುಖೇನ ಸಮಾಜದಲ್ಲಿನ ಸಾಮರಸ್ಯವನ್ನು ವೃದ್ಧಿಸಬಹುದಾಗಿದೆ ಎಂದರು.
ಕೊನೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ಕಾರ್ಯಕ್ರಮದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಜಿ.ವಿ.ಹೆಗಡೆ, ಮುಖ್ಯ ಶಿಕ್ಷಕಿ ಸೌಭಾಗ್ಯಾ ಭಟ್ಟ, ಪ್ರಾಂಶುಪಾಲೆ ಶಶಿಕಲಾ ಕೂರ್ಸೆ ಉಪಸ್ಥಿತರಿದ್ದರು. ಗುರುಕುಲಮ್ ಶಿಕ್ಷಕ ಮಂಜುನಾಥ ಭಟ್ಟ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net