ನಕಲಿ ಬಂಗಾರ ಇಟ್ಟು ತಾಮೀರ ಕೋ-ಆಪರೇಟಿವ್‌ ಸೊಸೈಟಿಗೆ ನೌಕರರಿಂದಲೇ ವಂಚನೆ

ಸಾಂದರ್ಭಿಕ ಎಐ ಚಿತ್ರ
ಸಾಂದರ್ಭಿಕ ಎಐ ಚಿತ್ರ
Published on
ಕಾರವಾರ: ಅಂಕೋಲಾ ಮೂಲದ ತಾಮೀರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ದಾಂಡೇಲಿ ಶಾಖೆಯಲ್ಲಿ ಭಾರಿ ಪ್ರಮಾಣದ ಅವ್ಯವಹಾರ ಬೆಳಕಿಗೆ ಬಂದಿದೆ. 
ಸೊಸೈಟಿಯ ನೌಕರರೇ ಗ್ರಾಹಕರ ಹಣವನ್ನು ಲಪಟಾಯಿಸಿದದ ಬಗ್ಗೆ ದಾಂಡೇಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರಾದ ಮೀರ್ ಕರೀಂ ಮೀರ್ ಇಸ್ಮಾಯಿಲ್, ಕಲೀಮುದ್ದೀನ್ ಖಾನ್, ಸರ್ದಾರ್ ಖಾನ್, ಕ್ಲಕ್‌ಗಳಾದ ಮಂಚಾಲಿ ಚೂಡಾಮಣಿ ನೇತ್ರೇಕರ್, ಮೊಹಮದ್ ಇಬ್ರಾಹಿಂ ಗುಲಾಂ ಮೊಹಿದ್ದೀನ್, ಫಯಾಜ್ ಅಹಮದ್ ಅಬ್ದುಲ್ ಶೇಖ್, ಹಲಿಮಾಬಿ ಬಷೀರ್ ಖಾನ್, ಕ್ಯಶಶಿಯರ್ ನೂರ್ ಅಹಮದ್ ಉಸ್ಮಾನ್ ಸಾಬ್, ನಿವೃತ್ತ ನೌಕರ ಮೊಹಮದ್ ಹನೀಫ್ ಖಾಸಿಂ ಸಾಬ್ ಹಾಗೂ ಸರಾಫ್ ಸಂಜಯ ಸದಾನಂದ ರೇವಣಕರ್ ವಿರುದ್ಧ ಸೊಸೈಟಿಯ ಜನರಲ್ ಮ್ಯಾನೇಜರ್ ಮೊಹಮದ್ ರುಕ್ನುದ್ದೀನ್ ಶೇಖ್ ಎಫ್‌ಐಆರ್ ದಾಖಲಿಸಿದ್ದಾರೆ. 
ಈ ಎಲ್ಲರೂ ಸೇರಿಕೊಂಡು 2021 ರಿಂದ 24 ರ ಅವಽಯಲ್ಲಿ ಸಾಲಗಾರರಿಂದ ಸರಿಯಾಗಿ ಸಾಲದ ಭದ್ರತೆಗಳನ್ನು ತೆಗೆದುಕೊಳ್ಳದೇ, ಸಾಲಗಾರರ ಸರಿಯಾದ ಕೆವೈಸಿ ಪಡೆಯದೇ ಸುಳ್ಳು ಸಾಲಗಾರರ ಹೆಸರಿನಲ್ಲಿ ನಕಲಿ ಬಂಗಾರವನ್ನು ಇಟ್ಟು, 208 ಖಾತೆಗಳಿಂದ ಸಂಘಕ್ಕೆ ಒಟ್ಟು 5,09,09,450 ರೂ. ಮೋಸ ಮಾಡಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ. 2023-24 ರ ಲೆಕ್ಕ ಪರಿಶೋಧನಾ ವರದಿ ಈಗ ಲಭ್ಯವಾಗಿದ್ದು, ತಕ್ಷಣ ದೂರು ದಾಖಲು ಮಾಡಲಾಗಿದೆ ಎಂದು ಜಿಎಂ ದೂರಿನಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net