Mahabaleshwar temple ಮಹಾಬಲೇಶ್ವರ ಮಂದಿರದ ರಸ್ತೆ ಜಲಾವೃತವಾಗದಂತೆ ಕ್ರಮವಹಿಸಿ

ಗೋಕರ್ಣದ ಮಹಾಬಲೇಶ್ವರ ಮಂದಿರದ ಪಶ್ಚಿಮ ದ್ವಾರದಿಂದ ಸಮುದ್ರ ತೀರದವರೆಗಿನ ರಸ್ತೆಯ ಸ್ಥಿತಿಗತಿಯನ್ನು ಶಾಸಕ ದಿನಕರ ಶೆಟ್ಟಿ ಮಂಗಳವಾರ ಪರಿಶೀಲಿಸಿದರು. ಪಿಡಿಒ ವಿ.ಎ. ಪಟಗಾರ, ಕಾರ್ಯದರ್ಶಿ ಮಂಜುನಾಥ ಕೆ., ಮಹೇಶ ಶೆಟ್ಟಿ, ರಾಮು ಕೆಂಚನ್, ಗಣೇಶ ಪಂಡಿತ, ಮಹೇಶ ನಾಯಕ, ಸಂದೀಪ ಅಗಸಾಲಿ ಇತರರಿದ್ದರು.
ಗೋಕರ್ಣದ ಮಹಾಬಲೇಶ್ವರ ಮಂದಿರದ ಪಶ್ಚಿಮ ದ್ವಾರದಿಂದ ಸಮುದ್ರ ತೀರದವರೆಗಿನ ರಸ್ತೆಯ ಸ್ಥಿತಿಗತಿಯನ್ನು ಶಾಸಕ ದಿನಕರ ಶೆಟ್ಟಿ ಮಂಗಳವಾರ ಪರಿಶೀಲಿಸಿದರು. ಪಿಡಿಒ ವಿ.ಎ. ಪಟಗಾರ, ಕಾರ್ಯದರ್ಶಿ ಮಂಜುನಾಥ ಕೆ., ಮಹೇಶ ಶೆಟ್ಟಿ, ರಾಮು ಕೆಂಚನ್, ಗಣೇಶ ಪಂಡಿತ, ಮಹೇಶ ನಾಯಕ, ಸಂದೀಪ ಅಗಸಾಲಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಶಾಸಕ ದಿನಕರ ಶೆಟ್ಟಿ ಸೂಚನೆ
  • ಇಕ್ಕಟ್ಟಾದ ರೋಡಿನ ಸ್ಥಿತಿಗತಿ ಅವಲೋಕನ
ಗೋಕರ್ಣ: ಇಲ್ಲಿನ ಮಹಾಬಲೇಶ್ವರ ಮಂದಿರದ ಪಶ್ಚಿಮ ದ್ವಾರದ ರಸ್ತೆ ಮಳೆಯಿಂದಾಗಿ ಮೇಲಿಂದ ಮೇಲೆ ಜಲಾವೃತವಾಗಿ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಸಕ ದಿನಕರ ಶೆಟ್ಟಿ ಮಂಗಳವಾರ ಸ್ಥಳಿಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿದರು. ಈ ವೇಳೆ ಪಶ್ಚಿಮ ದ್ವಾರದಿಂದ ಸಮುದ್ರ ತೀರದತನಕದ ಇಕ್ಕಟ್ಟಾದ ರಸ್ತೆಯ ಸ್ಥಿತಿಗತಿಯನ್ನು ಅವಲೋಕಿಸಿದರು. ಈ ರಸ್ತೆಯ ಒಂದು ಬದಿಗೆ ಮಾತ್ರ ಗಟಾರವಿದ್ದು, ಇನ್ನೊಂದೆಡೆ ಗಟಾರದುದ್ದಕ್ಕೂ ಮುಚ್ಚಿಗೆ ಹಾಕಿರುವ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರು.
ನಂತರ ಸ್ಥಳದಲ್ಲಿ ಹಾಜರಿದ್ದ ಗ್ರಾಪಂ ಅಧಿಕಾರಿಗಳಿಗೆ ತೆಗೆದುಕೊಳ್ಳಬೇಕಾದ ತಕ್ಷಣದ ಕ್ರಮಗಳ ಬಗ್ಗೆ ವಿವರಿಸಿದರು.
ಗಟಾರಕ್ಕೆ ಮಳೆ ನೀರು ಒಳ ಸೇರದಂತೆ ಮುಚ್ಚಿಕೆ ಹಾಕಿರುವುದನ್ನು ಕೂಡಲೇ ತೆರವು ಮಾಡಿಸಬೇಕು.ಮುಚ್ಚಿಕೆಯಿಂದಾಗಿ ಮೂರ್ನಾಲ್ಕು ಅಡಿ ಮಳೆ ನೀರು ರಸ್ತೆಯಲ್ಲಿ ಭರ್ತಿಯಾಗಿ ಮಂದಿರಕ್ಕೆ ಸಾಗುವ ಭಕ್ತರು ಮತ್ತು ಸಮುದ್ರ ತೀರದ ಪಾರ್ಕಿಂಗ್‌ಗೆ ಸಾಗುವ ವಾಹನಗಳಿಗೆ ವ್ಯತ್ಯಯವಾಗುತ್ತಿದೆ. ಗಟಾರದ ಕೆಲವೆಡೆಗಳಲ್ಲಿ ಹೂಳು ತುಂಬಿರುವುದನ್ನು ಸ್ವಚ್ಛಗೊಳಿಸಿ ಬುಧವಾರ ಸಂಜೆಯೊಳಗೆ ಕಾಮಗಾರಿ ವಿವರ ಒಪ್ಪಿಸಬೇಕು. ಕ್ಷೇತ್ರದ ಮುಖ್ಯ ರಸ್ತೆಯ ಇಕ್ಕಟ್ಟಾದ ಭಾಗಗಳಲ್ಲಿ ಮಳೆ ನೀರು ರಸ್ತೆ ಮೇಲೆ ಹರಿಯುತ್ತಿದ್ದರೆ ಆ ಸ್ಥಳಗಳ ಗಟಾರಗಳ ಮುಚ್ಚಿಕೆ ಮತ್ತು ಹೂಳಿದ್ದರೆ ಹೊರ ಸಾಗಿಸಬೇಕು ಎಂದು ಆದೇಶಿಸಿದರು.
ಪಂಚಾಯತಿ ಪಿಡಿಒ ವಿ.ಎ. ಪಟಗಾರ ಈ ಕುರಿತು ಮಾಹಿತಿ ನೀಡಿ ಮುಖ್ಯ ರಸ್ತೆಯ ಗಟಾರಗಳನ್ನು ಮಳೆ ಪೂರ್ವದಲ್ಲಿ ಸ್ವಚ್ಛ ಮಾಡಲಾಗಿದೆ. ಸಮಸ್ಯೆಯಿರುವ ಇನ್ನಿತರೆಡೆ ಕೂಡ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಬುಧವಾರ ಬೆಳಗ್ಗೆಯಿಂದ ಹಿತಾಚಿ ಮತ್ತು ಹೆಚ್ಚಿನ ಕಾರ್ಮಿಕರನ್ನು ಬಳಸಿ ಅಗತ್ಯ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದರು.
ಕಾರ್ಯದರ್ಶಿ ಮಂಜುನಾಥ ಕೆ., ಸ್ಥಳೀಯ ಬಿಜೆಪಿ ಅಧ್ಯಕ್ಷ ಗಣೇಶ ಪಂಡಿತ, ತಾಪಂ ಮಾಜಿ ಸದಸ್ಯ ಮಹೇಶ ಶೆಟ್ಟಿ, ಗ್ರಾಪಂ ಮಾಜಿ ಸದಸ್ಯರಾದ ಸತೀಶ ದೇಶಭಂಡಾರಿ, ಲಕ್ಷ್ಮೀಶ ಗೌಡ, ಪ್ರಭಾಕರ ಪ್ರಸಾದ, ಗಣಪತಿ ನಾಯ್ಕ, ಮಹೇಶ ಎನ್. ನಾಯಕ, ಬಿಜೆಪಿ ಕಾರ್ಯಕರ್ತರಾದ ಸಂದೀಪ ಅಗಸಾಲಿ, ರಾಮು ಕೆಂಚನ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net