ಮೀನುಗಾರಿಕೆ ಇಲಾಖೆಗೆ ಪ್ರತ್ಯೇಕ ಸಚಿವಾಲಯ ಯೋಜನೆ

ಮಂಕಾಲ ವೈದ್ಯ
ಮಂಕಾಲ ವೈದ್ಯ
Published on
ಕಾರವಾರ: ಮೀನುಗಾರಿಕೆ ಇಲಾಖೆಗೆ ಪ್ರತ್ಯೇಕ ಸಚಿವಾಲಯ ರಚನೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಪಶು ಸಂಗೋಪನಾ ಸಚಿವಾಲಯದ ಜೊತೆ ಮೀನುಗಾರಿಕೆ ಸಚಿವಾಲಯ ಸೇರಿಕೊಂಡಿದೆ. ವಿಶ್ವ ವಿದ್ಯಾಲಯವೂ ಪಶು ಸಂಗೋಪನೆಯ ಜೊತೆಯೇ ಸೇರಿಕೊಂಡಿದೆ. ಇದರಿಂದ ಮೀನುಗಾರಿಕೆಗೆ ಸಾಕಷ್ಟು ಮಹತ್ವ ಸಿಗುತ್ತಿಲ್ಲ. ಅದನ್ನು ಬೇರ್ಪಡಿಸಿ, ಪ್ರತ್ಯೇಕ ಸಚಿವಾಲಯ ರಚಿಸುವ ಚಿಂತನೆ ನಡೆದಿದೆ.

ಪ್ರತ್ಯೇಕ ವಿವಿ:

ಮೀನುಗಾರಿಕೆಗೆ ಪ್ರತ್ಯೇಕ ವಿಶ್ವ ವಿದ್ಯಾಲಯ ಸ್ಥಾಪನೆ ಸಂಬAಧ ಯೋಜಿಸಲಾಗಿತ್ತು. ಆದರೆ, ಸದ್ಯ ಮಂಗಳೂರಿನಲ್ಲಿ ಒಂದು ಮೀನುಗಾರಿಕೆ ಕಾಲೇಜ್ ಇದೆ. ಒಂದೇ ಕಾಲೇಜ್‌ಗೆ ಒಂದು ವಿಶ್ವ ವಿದ್ಯಾಲಯ ಸ್ಥಾಪನೆ ಮಾಡಲು ಸಾಧ್ಯವಿಲ್ಲ ಎಂಬ ತಜ್ಞರ ಅಭಿಪ್ರಾಯ ವ್ಯಕ್ತವಾಯಿತು. ಇದರಿಂದ ಬೀದರ್‌ನಲ್ಲಿ ಇನ್ನೊಂದು ಕಾಲೇಜ್ ಸ್ಥಾಪನೆಯ ಬಗ್ಗೆ ಚಿಂತನೆ ನಡೆದಿದೆ. ಮಂಗಳೂರಿನಲ್ಲಿರುವ ಮೀನುಗಾರಿಕೆ ಕಾಲೇಜ್ ದೇಶದ ಏಕೈಕ ಅತಿ ಪುರಾತನ ಕಾಲೇಜ್. ಆದರೆ, ಎರಡನೇ ಕಾಲೇಜ್ ರಾಜ್ಯದಲ್ಲಿ ಇಚ್ಛಾ ಶಕ್ತಿಯ ಕೊರತೆಯಿಂದ ಸ್ಥಾಪನೆಯಾಗಿಲ್ಲ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net