ಶಾಸಕ ಸತೀಶ ಸೈಲ್, ಎಂಎಲ್‌ಸಿ ಗಣಪತಿ ಉಳ್ವೇಕರ್, ಜಿಲ್ಲಾಽಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಪಂ ಸಿಇಒ ಡಾ.ದಿಲೀಶ್ ಶಶಿ, ಎಸ್‌ಪಿ ದೀಪನ್ ಎಂ.ಎನ್., ಡಿಎಫ್‌ಒ ಸಿ.ರವಿಶಂಕರ್ ಇತರರು ಇದ್ದರು. ಪೊಲೀಸ್, ಗೃಹರಕ್ಷಕ, ಅರಣ್ಯ, ಎನ್‌ಸಿಸಿ, ಭಾರತ ಸೇವಾದಳ ಸೇರಿ ವಿವಿಧ ತುಕಡಿಗಳಿಂದ ಆಕರ್ಷಕ ಪಥ ಸಂಚಲನ ಗಮನ ಸೆಳೆಯಿತು. ನಂತರ ಶಿರವಾಡದ ಕೆಪಿಎಸ್ ಪ್ರೌಢಶಾಲೆ, ಅಮದಳ್ಳಿಯ ಎಜುಕೇರ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಸೇಂಟ್ ಮೈಕಲ್ ಪ್ರೌಢಶಾಲೆಯಿಂದ ಸಾಮೂಹಿಕ ನೃತ್ಯ ರೂಪಕಗಳು ಗಮನ ಸೆಳೆದವು.