ಪಾರದರ್ಶಕ ವ್ಯವಹಾರದಿಂದ ‘ಸಹಕಾರಿ’ಗೆ ಬಲ

ಭಟ್ಕಳ ಪಟ್ಟಣದ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಸಹಕಾರ ಯೂನಿಯನ್ ಕುಮಟಾ ನೇತೃತ್ವದಲ್ಲಿ ಏರ್ಪಡಿಸಿದ್ದ 72ನೇ ಅಖಿಲ ಭಾರತ ಸಹಕಾರ (cooperative) ಸಪ್ತಾಹದ ಕಾರ್ಯಕ್ರಮವನ್ನು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ವಿ.ಎನ್. ಭಟ್ಟ ಅಳ್ಳಂಕಿ ಉದ್ಘಾಟಿಸಿದರು. ರಾಜು ನಾಯ್ಕ,  ಪೀಟರ್ ಅಂತೋನಿ, ವೆಂಕಟೇಶ ನಾಯ್ಕ, ಇತರರಿದ್ದರು.
ಭಟ್ಕಳ ಪಟ್ಟಣದ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಸಹಕಾರ ಯೂನಿಯನ್ ಕುಮಟಾ ನೇತೃತ್ವದಲ್ಲಿ ಏರ್ಪಡಿಸಿದ್ದ 72ನೇ ಅಖಿಲ ಭಾರತ ಸಹಕಾರ (cooperative) ಸಪ್ತಾಹದ ಕಾರ್ಯಕ್ರಮವನ್ನು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ವಿ.ಎನ್. ಭಟ್ಟ ಅಳ್ಳಂಕಿ ಉದ್ಘಾಟಿಸಿದರು. ರಾಜು ನಾಯ್ಕ, ಪೀಟರ್ ಅಂತೋನಿ, ವೆಂಕಟೇಶ ನಾಯ್ಕ, ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನೆ
  • ಸಹಕಾರ ರಂಗದಲ್ಲಿ ಬದಲಾವಣೆ
  • ವಿ.ಎನ್. ಭಟ್ಟ ಅಳ್ಳಂಕಿ ಅಭಿಮತ
ಭಟ್ಕಳ: ಸಹಕಾರ (cooperative) ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸಹಕಾರ ಕ್ಷೇತ್ರ ಮತ್ತಷ್ಟು ಮುಂಚೂಣಿಗೆ ತರಲು ಮತ್ತು ಬಲಗೊಳಿಸಲು ಸಾಧ್ಯ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ವಿ.ಎನ್. ಭಟ್ಟ ಅಳ್ಳಂಕಿ ಹೇಳಿದರು. 
ಪಟ್ಟಣದ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಕುಮಟಾ ನೇತೃತ್ವದಲ್ಲಿ ಭಾನುವಾರ ಏರ್ಪಡಿಸಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
 ಜಿಲ್ಲೆಯಲ್ಲಿ ಅರ್ಬನ್ ಬ್ಯಾಂಕ್‌ಗಳು, ಮಾರ್ಕೆಟಿಂಗ್ ಸೊಸೈಟಿಗಳು ಸೇರಿದಂತೆ ಸೊಸೈಟಿ, ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸಿ ಜನರ ವಿಶ್ವಾಸ ಗಳಿಸಿವೆ. ಸಹಕಾರ ರಂಗದಲ್ಲಿ ಪಾರದರ್ಶಕ ವ್ಯವಹಾರ ನಡೆಸಿ ಜನರ ಪ್ರೀತಿ, ವಿಶ್ವಾಸ ಗಳಿಸಬೇಕು ಎಂದರು. 
ಕುಮಟಾ ಸಹಕಾರ ಸಂಘಗಳ ಸಹಾಯಕ ನಿಬಂಧಕ ಜಿ.ಕೆ. ಭಟ್ಟ ಮಾತನಾಡಿ, ಸಹಕಾರ ರಂಗದಲ್ಲಿ ಬದಲಾವಣೆ ಮಾಡಿಕೊಂಡು ಕೆಲಸ ಮಾಡಬೇಕು. ಸಹಕಾರ ರಂಗದಡಿ ಜನತೆಗೆ ಸೇವೆ ಸಲ್ಲಿಸಲು ಹಲವು ಅವಕಾಶ ಇದ್ದು, ಇದನ್ನು ಸಂಘಗಳು ಕಾರ್ಯರೂಪಕ್ಕೆ ತರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಅರ್ಬನ್ ಬ್ಯಾಂಕ್ ಅಧ್ಯಕ್ಷೆ ಮೆಹಮೂಬಿ ಪಟೇಲ್, ಸಹಕಾರಿ ಯೂನಿಯನ್‌ನ ನಿರ್ದೇಶಕ ರಾಜು ನಾಯ್ಕ, ಸಹಕಾರ ರತ್ನ ಪ್ರಶಸ್ತಿ ಪಡೆದ ಪೀಟರ್ ಅಂತೋನಿ, ಸನ್ಮಾನಿತರಾದ ಶಿರಾಲಿ ಸೊಸೈಟಿ ಅಧ್ಯಕ್ಷ ವೆಂಕಟೇಶ ನಾಯ್ಕ, ಅಳ್ವೆಕೋಡಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ವಿಠ್ಠಲ್ ದೈಮನೆ ಮಾತನಾಡಿದರು. 
ಗುಣವಂತೆ ಹಾಲು ಸೊಸೈಟಿ, ಶಿರಾಲಿ ಸೊಸೈಟಿ ಅಧ್ಯಕ್ಷ ವೆಂಕಟೇಶ ನಾಯ್ಕ, ಅಳ್ವೆಕೋಡಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ವಿಠ್ಠಲ ದೈಮನೆ ಅವರನ್ನು ಉತ್ತಮ ಕಾರ್ಯನಿರ್ವಹಣೆಗೆ ಸನ್ಮಾನಿಸಿ ಗೌರವಿಸಲಾಯಿತು. 
ಜಾಲಿ ಸೊಸೈಟಿಯ ನಿವೃತ್ತ ಪ್ರಧಾನ ವ್ಯವಸ್ಥಾಪಕ ಗೋಯ್ದಯ್ಯ ನಾಯ್ಕ ಅವರಿಗೆ ಉತ್ತಮ ಸಹಕಾರಿ ನೌಕರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿಕ್ಷಕ ಶ್ರೀಧರ ಶೇಟ್ ಉಪನ್ಯಾಸ ನೀಡಿದರು. 
ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಮಂಜಪ್ಪ ನಾಯ್ಕ, ಸತೀಶ ಭಟ್ಟ, ಸಹಕಾರ ಇಲಾಖೆಯ ಸುಮನಾ ನಾಯ್ಕ, ಸರಿತಾ ಬೇತಾಳಕರ್, ಭಟ್ಕಳ ಅರ್ಬನ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಪ್ರಶಾಂತ ಮುರ್ಡೇಶ್ವರ, ಇತರರು ಉಪಸ್ಥಿತರಿದ್ದರು.
ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಾಹಕ ಗೋಪಾಲ ನಾಯಕ ಹಾಗೂ ಜಾಲಿ ಸೊಸೈಟಿಯ ನೌಕರ ಭಾಸ್ಕರ ನಾಯ್ಕ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net