ರಾಜ್ಯಮಟ್ಟದ ಪಿಯು ಥ್ರೋ ಬಾಲ್‌ ಪಂದ್ಯಾವಳಿ ಮೈಸೂರು, ಮಂಗಳೂರು ತಂಡಗಳಿಗೆ ಜಯ

ಮೈಸೂರು ತಂಡ ಜಯಗಳಿಸಿತು
ಮೈಸೂರು ತಂಡ ಜಯಗಳಿಸಿತು
Published on
ಕಾರವಾರ: ಇಲ್ಲಿನ ಶಿವಾಜಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಪದವಿಪೂರ್ವ ಕಾಲೇಜ್‌ಗಳ ರಾಜ್ಯಮಟ್ಟದ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗಂಡುಮಕ್ಕಳ ವಿಭಾಗದಲ್ಲಿ ಮೈಸೂರು, ಹೆಣ್ಣು ಮಕ್ಕಳ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಡಗಳು ಜಯಗಳಿಸಿದವು.
ಒಟ್ಟು 33 ಪಿಯು ಶೈಕ್ಷಣಿಕ ಜಿಲ್ಲೆಗಳಿಂದ 64 ತಂಡಗಳ 875 ಸ್ಪರ್ಧಾಳುಗಳು ಆಗಮಿಸಿದ್ದರು. ಭಾನುವಾರ ಎಂಎಲ್‌ಸಿ ಗಣಪತಿ ಉಳ್ವೇಕರ್ ಪಂದ್ಯಾವಳಿಗೆ ಚಾಲನೆ ನೀಡಿದ್ದರು. ಭಾನುವಾರ ಕ್ವಾರ್ಟ್ರ್‌ಫೈನಲ್‌ವರೆಗಿನ ಪಂದ್ಯಗಳು, ಸೋಮವಾರ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆದವು.
ಬಾಲಕರ ವಿಭಾಗದಲ್ಲಿ ಮೈಸೂರು ಹಾಗೂ ದಕ್ಷಿಣ ಕನ್ನಡ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಿತು. ಮೈಸೂರು ತಂಡವು 24-26, 2,23, 15-12 ಅಂಕಗಳ ಅಂತರದಲ್ಲಿ ಜಯಗಳಿಸಿತು.
ಬಾಲಕಿಯರ ವಿಭಾಗದಲ್ಲಿ ಇದೇ ಎರಡು ಜಿಲ್ಲಾ ತಂಡಗಳು ಸೆಣಸಿದವು. ದಕ್ಷಿಣ ಕನ್ನಡ ತಂಡ 25-21, 15-25, 15-13 ಅಂಕಗಳ ಅಂತರದಲ್ಲಿ ಜಯಗಳಿಸಿತು. ಪದವಿಪೂರ್ವ ಶಿಕ್ಷಣ ಇಲಾಖೆ ದೈಹಿಕ ಪರಿವೀಕ್ಷಕರ ತಂಡದ ಅಧ್ಯಕ್ಷ ಬಸವರಾಜ ಟಿ.ಸಿ., ಶಿವಾಜಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಬಹುಮಾನ ವಿತರಿಸಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಕಾರವಾರ ತಾಲೂಕು ಪದವಿಪೂರ್ವ ಕಾಲೇಜ್ ಪ್ರಾಂಶುಪಾಲ ಸಂಘ, ಉತ್ತರ ಕನ್ನಡ ಜಿಲ್ಲಾ ದೈಹಿಕ ಶಿಕ್ಷಕರ ಸಂಘದಿಂದ ಪಂದ್ಯಾವಳಿ ಆಯೋಜಿಸಲಾಗಿತ್ತು. ಡಿಡಿಪಿಯು ಸತೀಶ ಬಿ.ನಾಯ್ಕ, ಸರ್ಕಾರಿ ಪಿಯು ಕಾಲೇಜ್‌ಪ್ರಾಂಶುಪಾಲ ರಮೇಶ ಪತ್ರೇಕರ್, ಬಾಡ ದುರ್ಗಾದೇವಿ ಪಿಯು ಕಾಲೇಜ್ ಪ್ರಾಂಶುಪಾಲ ಎ.ಸಿ.ಗಾಂವಕರ್, ಹಳಗಾ ಮಹಾಸತಿ ಪಿಯು ಕಾಲೇಜ್‌ನ ಹರೀಶ ನಾಯಕ, ಸಿದ್ದರ ಮಲ್ಲಿಕಾರ್ಜುನ ಪಿಯು ಕಾಲೇಜ್ ಜಿ.ಡಿ.ಮನೋಜೆ, ಚಿತ್ತಾಕುಲಾ ಶಿವಾಜಿ ಕಾಲೇಜ್‌ನ ಶ್ರೀದೇವಿ ನಾಯಕ, ಅಮಿರಬಿ ಕಾಲೇಜ್ ನ ಪಿಂಕಿ,ಪ್ರೀಮಿಯರ್ ಪಿಯು ಕಾಲೆಜ್‌ನ ಗೋವಿಂದಪ್ಪ, ಸದಾಶಿವವಡ ಬಿ.ಜಿ.ವಿ.ಎಸ್ ಪಿಯು ಕಾಲೇಜ್ ರಾಜೇಶ ಸೈಲ್, ಅಮದಳ್ಳಿ ಸರ್ಕಾರಿ ಪಿಯು ಕಾಲೇಜ್‌ನ ನಾಗವೇಣಿ ನಾಯ್ಕ, ನೋಡಲ್ ಅಽಕಾರಿ ಪ್ರಶಾಂತ ರಾಣೆ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಪಾಂಡುರAಗ ಪಟಗಾರ, ಸುನೀಲ ಗಾಂವಕರ್, ರೋಹಿತ ನಾಯ್ಕ , ಕಿರಣ ನಾಯ್ಕ, ಸಂಜಯ ಗೌಡ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net