ಜಿಲ್ಲೆಯಲ್ಲಿ 199 ಪ್ರೌಢಶಾಲೆಗಳಿದ್ದು 134 ಪ್ರೌಢಶಾಲೆಗಳು ಶೇ. 100 ರಷ್ಟು ಫಲಿತಾಂಶ ಪಡೆದಿವೆ. ಅದರಲ್ಲಿ 47 ಸರ್ಕಾರಿ ಪ್ರೌಢಶಾಲೆ, 39 ಅನುದಾನಿತ ಪ್ರೌಢಶಾಲೆಗಳು ಹಾಗೂ 48 ಅನುದಾನ ರಹಿತ ಪ್ರೌಢಶಾಲೆಗಳು ಶೇ. 100 ಫಲಿತಾಂಶ ಪಡೆದಿವೆ.
ಜಿಲ್ಲೆಯ 25 ವಿದ್ಯಾರ್ಥಿಗಳು ರಾಜ್ಯದ 2 ರಿಂದ 10ನೇ ರ‍್ಯಾಂಕಗಳಲ್ಲಿ ಸ್ಥಾನ ಪಡೆದಿರುತ್ತಾರೆ. ಜಿಲ್ಲೆಯ 1 ರಿಂದ 10ನೇ ರ‍್ಯಾಂಕಗಳಲ್ಲಿ 49 ವಿದ್ಯಾರ್ಥಿಗಳು ಸ್ಥಾನ ಪಡೆದಿರುತ್ತಾರೆ.
ಹೊನ್ನಾವರ ತಾಲೂಕು ಶೇ. 99.08 ಫಲಿತಾಂಶದೊAದಿಗೆ ಮೊದಲ ಸ್ಥಾನ ಭಟ್ಕಳ 98.63 ಫಲಿತಾಂಶದೊAದಿಗೆ ದ್ವಿತೀಯ ಸ್ಥಾನ, ಅಂಕೋಲಾ 97.78 ಫಲಿತಾಂಶದೊAದಿಗೆ ತೃತೀಯ ಸ್ಥಾನ, ಕುಮಟಾ 97.65 ಫಲಿತಾಂಶದೊAದಿಗೆ ನಾಲ್ಕನೇ ಸ್ಥಾನ, ಹಾಗೂ ಕಾರವಾರ ತಾಲೂಕು 97.25 ಫಲಿತಾಂಶದೊAದಿಗೆ ಐದನೇ ಸ್ಥಾನದಲ್ಲಿರುತ್ತದೆ.