ಹವ್ಯಕ ಭವನ ಲೋಕಾರ್ಪಣೆ May 1st

ಅಖಿಲ ಹವ್ಯಕ ಮಹಾಸಭಾದ ಶ್ರೀ ಕ್ಷೇತ್ರ ಬೆಳಕೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಧರ್ಂತ್ಯುತ್ಸವ ಮತ್ತು ಹವ್ಯಕ ಭವನ ಲೋಕಾರ್ಪಣೆ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ದೇವಸ್ಥಾನದ ಸಂಚಾಲಕ ನಾಗರಾಜ ಮಧ್ಯಸ್ಥ, ಅರ್ಚಕ ಸುಮಂತ ಭಟ್ಟ, ವೇಮೂ. ವಿಶ್ವನಾಥ ಭಟ್ಟ ಇದ್ದರು
ಅಖಿಲ ಹವ್ಯಕ ಮಹಾಸಭಾದ ಶ್ರೀ ಕ್ಷೇತ್ರ ಬೆಳಕೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಧರ್ಂತ್ಯುತ್ಸವ ಮತ್ತು ಹವ್ಯಕ ಭವನ ಲೋಕಾರ್ಪಣೆ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ದೇವಸ್ಥಾನದ ಸಂಚಾಲಕ ನಾಗರಾಜ ಮಧ್ಯಸ್ಥ, ಅರ್ಚಕ ಸುಮಂತ ಭಟ್ಟ, ವೇಮೂ. ವಿಶ್ವನಾಥ ಭಟ್ಟ ಇದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಹವ್ಯಕ ಮಹಾಸಭಾ ಕಾರ್ಯದರ್ಶಿ ಪ್ರಶಾಂತ ಭಟ್ಟ ಮಾಹಿತಿ
  • ಬೆಳಕೆಯಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆ
ಭಟ್ಕಳ: ಅಖಿಲ ಹವ್ಯಕ ಮಹಾಸಭಾದ ಶ್ರೀ ಕ್ಷೇತ್ರ ಬೆಳಕೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಧರ್ಂತ್ಯುತ್ಸವ ಮತ್ತು ಹವ್ಯಕ ಭವನ ಲೋಕಾರ್ಪಣೆ ಮೇ 1 ಮತ್ತು 2ರಂದು ಶ್ರೀ ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಹವ್ಯಕ ಮಹಾಸಭಾದ ಕಾರ್ಯದರ್ಶಿ ಪ್ರಶಾಂತ ಭಟ್ಟ ಹೇಳಿದರು.
ತಾಲೂಕಿನ ಬೆಳಕೆ ದುರ್ಗಾಪರಮೇಶ್ವರ ದೇವಸ್ಥಾನದ ಸಭಾಭವನದಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾಹಿತಿ ನೀಡಿದರು. ಮೇ 1ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಮೇ 2ರಂದು ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 10.30 ಗಂಟೆಗೆ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು ಆಗಮಿಸಿ ನೂತನ ಸಭಾಭವನ ಉದ್ಘಾಟಿಸಿ ಬಳಿಕ ನಡೆಯುವ ಧರ್ಮ ಸಭೆಯ ಸಾನ್ನಿಧ್ಯ ವಹಿಸುವರು.
ಬೆಳಕೆ, ಗೊರ್ಟೆ ಮತ್ತಿತರ ಭಾಗದ ಸರ್ವ ಜನತೆಗೂ ಅನುಕೂಲವಾಗಲಿ ಎನ್ನುವ ಸದಾಶಯದೊಂದಿಗೆ ಸುಮಾರು 75 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಸಭಾಭವನ ನಿರ್ಮಿಸಲಾಗಿದೆ. ಸಭಾಭವನ ನಿರ್ಮಾಣದಿಂದ ಸ್ಥಳೀಯರಿಗೆ ಮದುವೆ, ಉಪನಯನ, ನಾಮಕರಣ, ಮುಂತಾದ ಶುಭಕಾರ್ಯಗಳಿಗೆ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಲು ಅನುಕೂಲವಾಗಲಿದೆ. ಇದೀಗ 600 ಜನರ ಆಸನ ಸಾಮರ್ಥ್ಯ ಇರುವ ಸಭಾಭನ ನಿರ್ಮಿಸಲಾಗಿದೆ. ಏಕಕಾಲದಲ್ಲಿ 200 ಜನ ಸಾಮರ್ಥ್ಯದ ಭೋಜನಾಲಯ, 1000 ಜನ ಸಾಮರ್ಥ್ಯದ ಅಡುಗೆ ಮನೆ ಮತ್ತು ಪರಿಕರಗಳು, ಸುಸಜ್ಜಿತವಾದ ವಾಹನ ನಿಲುಗಡೆ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಹವ್ಯಕ ಮಹಾಸಭಾಕ್ಕೆ ಕಳೆದ ನಾಲ್ಕೈದು ವರ್ಷಗಳ ಹಿಂದೆ ಉದ್ಯಮಿ ಮಂಜುನಾಥ ಬಿಲ್ಲವ ಅವರು ಜಾಗವನ್ನು ದಾನ ನೀಡಿದ್ದು, ನಾವು ಜಾಗ ಸ್ವೀಕರಿಸಿದ ನಂತರ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಸುಸಜ್ಜಿತ ಸಭಾಭವನದ ಸದುಪಯೋಗವನ್ನು ಸ್ಥಳೀಯ ಜನರು ಪಡೆಯಬೇಕು. ಮುಂದೆ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಹವ್ಯಕ ಮಹಾಸಭಾ ಚಿಂತನೆ ನಡೆಸಿದ್ದು, ಸ್ಥಳೀಯರ ಸಹಕಾರ ಅಗತ್ಯ ಎಂದರು.
ಬೆಳಕೆ ದುರ್ಗಾಪರಮೇಶ್ವರ ದೇವಸ್ಥಾನದ ಸಂಚಾಲಕ ನಾಗರಾಜ ಮಧ್ಯಸ್ಥ, ಅರ್ಚಕ ಸುಮಂತ ಭಟ್ಟ, ವೇಮೂ. ವಿಶ್ವನಾಥ ಭಟ್ಟ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net