ಅಪರಾಧ ಪ್ರಕರಣ ತಡೆಯಲು ಗಂಭೀರ ಕ್ರಮಗಳನ್ನು ವಹಿಸಲಾಗುತ್ತಿದೆ. ಪ್ರಕರಣಗಳಲ್ಲಿ ಬಂಧನವಾದವರ ಶಿಕ್ಷೆಗೊಳಪಡಿಸಲು ಬೇಕಾದ ಎಲ್ಲ ಕ್ರಮ ವಹಿಸಲಾಗುತ್ತಿದೆ. ಮುಖ್ಯವಾಗಿ ಮನೆ, ಮನೆಗೆ ಪೊಲೀಸ್ ಕಾರ್ಯಕ್ರಮದಿಂದ ಪೊಲೀಸ್ ಇಲಾಖೆ ಜನ ಸಂಪರ್ಕ ಹೆಚ್ಚಿದೆ. ನಮ್ಮ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿ 3,57,944 ಮನೆಗಳನ್ನು ಸುಮಾರು 16.35 ಲಕ್ಷ ಜನಸಂಖ್ಯೆಯನ್ನು ತಲುಪಿದ್ದಾರೆ. ಮೊದಲ ಭೇಟಿಯಲ್ಲಿ 112 ವಾಹನ ಹಾಗೂ ಅದರ ಬಳಕೆಯ ಬಗ್ಗೆ ನಾವು ಮಾಹಿತಿ ನೀಡಿದ್ದೆವು. ಮೊದಲು ಪ್ರತಿ ವಾಹನಕ್ಕೆ ದಿನಕ್ಕೆ 15 ರಿಂದ 20 ಕರೆಗಳು ಬರುತ್ತಿದ್ದವು. ಈಗ ಆ ಕರೆಗಳ ಸಂಖ್ಯೆ 40 ರಿಂದ 45 ಕ್ಕೆ ಹೆಚ್ಚಿದೆ. ಕುಡಿದು ಗಲಾಟೆ, ಗಂಡ ಹೆಂಡತಿ ಜಗಳ ಮುಂತಾದ ಕರೆಗಳು ಬರುತ್ತಿವೆ ನಿಜ. ಆದರೆ, ಅದರಿಂದ ಆಗುವ ಅಪರಾಧಗಳನ್ನು ತಡೆಲು ಸಾಧ್ಯವಾಗುತ್ತಿದೆ. ಈಗ ಎರಡನೇ ಹಂತದಲ್ಲಿ ಮನೆ, ಮನೆ ಪೊಲೀಸ್ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದ್ದು, ಪೊಕ್ಸೊ ಹಾಗೂ ಹೆಲ್ಮೆಟ್ ಧಾರಣೆ ಬಗ್ಗೆ ನಾವು ಕೇಂದ್ರೀಕರಿಸಲು ತಿಳಿಸಲಾಗಿದೆ ಎಂದು ಎಸ್‌ಪಿ ದೀಪನ್ ತಿಳಿಸಿದರು.