ತಾಲೂಕಿನ ಮೈನಳ್ಳಿ ಗ್ರಾಮವು ಪ್ರತಿ ವರ್ಷ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರವೆಂದರೆ ಅತ್ತಿವೇರಿ ಜಲಾಶಯದಿಂದ ಹುನಗುಂದ, ನಂದಿಕಟ್ಟಿ ಗುಂಜಾವತಿ ಮೂಲಕ ಮೈನಳ್ಳಿವರೆಗೆ ಪೈಪ್‌ಲೈನ್ ಸಂಪರ್ಕ ನೀಡಿದರೆ ಸಮಸ್ಯೆ ಬಗೆಹರಿಸಬಹುದು ಎಂದು ಎಇ ರಾಜೇಶ್ವರಿ ಕದಂ ಅವರು ಸಿಎಸ್ ಅವರ ಗಮನಕ್ಕೆ ತಂದರು. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು. ಅಲ್ಲದೆ, ಮುಂಡಗೋಡದ ಮಾಹಿತಿಯುಳ್ಳ ನಕಾಶೆ ಪ್ರತಿ ಇಲಾಖೆಯಲ್ಲಿ ಅಳವಡಿಸಬೇಕು ಎಂದು ಸೂಚಿಸಿದರು. ನಂತರ ಪಂಚಾಯತ್‌ರಾಜ್ ಇಲಾಖೆಗೆ ಭೇಟಿ ನೀಡಿ ಪರಿಶೀಲಿಸಿದರು.