ಅಪರಾಧ ನಡೆದ ಸ್ಥಳಕ್ಕೆ ತಕ್ಷಣ ತಲುಪುತ್ತೆ ಸೊಕೊ ವಾಹನ ಏನಿದರ ವಿಶೇಷ..?

ಸೊಕೊ ವಾಹನವನ್ನು ಜಿಲ್ಲಾ ನ್ಯಾಯಾಧೀಶರು ಉದ್ಘಾಟಿಸಿದರು
ಸೊಕೊ ವಾಹನವನ್ನು ಜಿಲ್ಲಾ ನ್ಯಾಯಾಧೀಶರು ಉದ್ಘಾಟಿಸಿದರು
Published on

ಪ್ರಮುಖ ಮುಖ್ಯಾಂಶಗಳು

  • 20 ಕೋಟಿ ರೂ. ಮೌಲ್ಯದ ಅತ್ಯಾಧುನಿಕ ವಾಹನ
  • ಮೊಬೈಲ್‌ ಲ್ಯಾಬೋರೆಟರಿ
ಕಾರವಾರ: ಉತ್ತರ ಕನ್ನಡ ಜಿಲ್ಲಾ ಪೊಲೀಸ್‌ಗೆ ಹಂಚಿಕೆಯಾಗಿರುವ ಸೆನ್ಸ್ ಆಫ್ ಕ್ರೈ ಆಫೀಸರ್ಸ್(ಸೊಕೊ)ವಾಹನಕ್ಕೆ ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಬಿ. ಶುಕ್ರವಾರ ಹಸಿರು ನಿಶಾನೆ ತೋರಿದರು.
ಇದು ಅತ್ಯಾಧುನಿಕ ಮೊಬೈಲ್ ಫಾರೆನ್ಸಿಕ್ ಲ್ಯಾಬೋರೇಟರಿಯಾಗಿದೆ. ವಾಹನದಲ್ಲಿ ಡಿಜಿಟಲ್ ಪರೀಕ್ಷೆಗೆ ಬೇಕಾಗಿರುವ ಉಪಕರಣಗಳು, ಬೆರಳಚ್ಚುಗಳು, ಹೆಜ್ಜೆ ಗುರುತುಗಳನ್ನು ಸಂಗ್ರಹಿಸಬಲ್ಲ ಸಾಧನಗಳು, ರಕ್ತ ಮತ್ತು ಡಿಎನ್‌ಎ ಮೂಲ ದ್ರವ್ಯ ಸಂಗ್ರಹಿಸಬಲ್ಲ ರೆಫ್ರಿಜರೇಟರ್‌ಗಳು ಬಿಲ್ಟ್ ಇನ್ ಜನರೇಟರ್ ಮುಂತಾದ ಸೌಲಭ್ಯಗಳಿವೆ.
ಕೇಂದ್ರ ಸರ್ಕಾರದ ನೆರವಿನಲ್ಲಿ ರಾಜ್ಯವು ತಲಾ 20.40 ಕೋಟಿ ರೂ. ವೆಚ್ಚದಲ್ಲಿ 32 ವಾಹನಗಳನ್ನು ಖರೀದಿಸಿದೆ.ಜು. ಅಪರಾಧ ನಡೆದ ಸ್ಥಳಕ್ಕೆ ಈ ಅಽಕಾರಿಗಳು ತಕ್ಷಣ ಹೋಗಿ ಅಲ್ಲಿನ ಫಾರೆನ್ಸಿಕ್ ದಾಖಲೆಗಳನ್ನು ಸಂಗ್ರಹಿಸಬಹುದು. ಜುಲೈ 11 ರಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ವಾಹನವನ್ನು ಲೋಕಾರ್ಪಣೆ ಮಾಡಿದ್ದರು. ಈಗ ಜಿಲ್ಲೆಗೆ ತಲುಪಿದೆ. ಕಾರ್ಯಕ್ರಮದಲ್ಲಿ ಎಸ್‌ಪಿ ದೀಪನ್ ಎಂ.ಎನ್., ಎಎಸ್‌ಪಿ ಕೃಷ್ಣಮೂರ್ತಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net