ಇಲ್ಲಿಯ ಕೃಷಿಕ ಗಣೇಶ ಹೆಗಡೆ, ಚೇತನಾ ಹೆಗಡೆ ಅವರ ಪುತ್ರಿಯಾಗಿರುವ ರೇಷ್ಮಾ, ಆರಂಭಿಕ ಶಿಕ್ಷಣವನ್ನು ಜಾಗನಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪಡೆದಿದ್ದಾರೆ. ಆ ಬಳಿಕ ಗ್ರಾಮೀಣ ಪ್ರದೇಶದಲ್ಲಿ ಇರುವ ಕಾನಸೂರಿನ ಕಾಳಿಕಾಂಬಾ ಪ್ರೌಢ ಶಾಲೆಯಲ್ಲಿ ಆಂಗ್ಲಮಾಧ್ಯಮದಲ್ಲಿ ಪೂರೈಸಿದ ಬಳಿಕ ನಗರದ ಎಂ ಇ ಎಸ್ ಚೈತನ್ಯ ಮಹಾವಿದ್ಯಾಲಯದಲ್ಲಿ ಪಿಯುಸಿ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ಬಳಿಕ ಬೆಂಗಳೂರಿನ ಕ್ರಿಸ್ಟುಜಯಂತಿ ಕಾಲೇಜ್‌ನಲ್ಲಿ ಮೈಕ್ರೋಬಯಾಲಾಜಿ ಹಾಗೂ ಜನೆಟಿಕ್ ಶಿಕ್ಷಣವನ್ನು ಕಲಿಯುತ್ತಿದ್ದಾರೆ. ಈ ಶಿಕ್ಷಣದ ನಡುವೆಯೇ ಮುಂಬೈ ಐ ಐಟಿ ಕಾಲೇಜಿನ ಜಾಮ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.