ಕಾರವಾರ: ಶಿರಸಿ ಉಪವಿಭಾಗಾಧಿಕಾರಿ ಕಾವ್ಯಾರಾಣಿ ಕೆ.ವಿ. ಅವರನ್ನು ಸರ್ಕಾರ ಮೈಸೂರು ಜಿಲ್ಲೆ ಹುಣಸೂರು ಉಪ ವಿಭಾಗಾಧಿಕಾರಿಯಾಗಿ ನಿಯುಕ್ತಿಗೊಳಿಸಿದೆ. ಈ ಕುರಿತಂತೆ ಸರ್ಕಾರದ ಅಧೀನ ಕಾರ್ಯದರ್ಶಿ ಕೇಶವ ಪ್ರಸಾದ ಎಚ್.ಕೆ.ಗುರುವಾರ ಆದೇಶ ಹೊರಡಿಸಿದ್ದಾರೆ. ಪ್ರಸಕ್ತ ಭಟ್ಕಳದ ಉಪವಿಭಾಗಾಧಿಕಾರಿಯಾಗಿಯೂ ಸಹ ಜವಾಬ್ದಾರಿ ನಿರ್ವಹಿಸುತ್ತಿದ್ದ ಅವರ ವರ್ಗಾವಣೆಯಿಂದ ತೆರವಾದ ಶಿರಸಿ ವಿಭಾಗಕ್ಕೆ ಯಾರನ್ನೂ ನಿಯುಕ್ತಿಗೊಳಿಸಲಾಗಿಲ್ಲ.
ಜಿಲ್ಲೆಯಲ್ಲಿ ಕಾರವಾರ, ಕುಮಟಾ, ಶಿರಸಿ ಹಾಗೂ ಭಟ್ಕಳ ನಾಲ್ಕು ಉಪ ವಿಭಾಗಗಳಿದ್ದು, ಪ್ರಸ್ತುತ ಇಬ್ಬರು ಉಪವಿಭಾಗಾಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದರು. ಈಗ ಕಾವ್ಯಾರಾಣಿ ಅವರ ವರ್ಗಾವಣೆಯಿಂದ ನಾಲ್ಕೂ ಉಪ ವಿಭಾಗಗಳಿಗೆ ಕುಮಟಾ ಎಸಿ ಶ್ರವಣಕುಮಾರ್ ಒಬ್ಬರೇ ಪ್ರಭಾರಿಯಾದಂತಾಗಿದೆ.