ಜುಲೈ 30 ರಿಂದ ಜಿಲ್ಲೆಯಲ್ಲಿ ಎಸ್‌ಐಆರ್‌ ಪ್ರಕ್ರಿಯೆ

ಎಸ್‌ಐಆರ್‌ ಜಾಗೃತಿ ಬೈಕ್‌ ರ್ಯಾಲಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಚಾಳನೆ ನೀಡಿದರು.
ಎಸ್‌ಐಆರ್‌ ಜಾಗೃತಿ ಬೈಕ್‌ ರ್ಯಾಲಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಚಾಳನೆ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಬೈಕ್‌ ರ್ಯಾಲಿ ನಡೆಸಿ ಎಸ್‌ಐಆರ್‌ ಬಗ್ಗೆ ಜಾಗೃತಿ
  • ಜಿಲ್ಲೆಯಲ್ಲಿ 1445 ಬಿಎಲ್‌ಒಗಳಿಂದ ಮನೆ ಭೇಟಿ
ಕಾರವಾರ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)ಗೆ ಜಿಲ್ಲೆಯಲ್ಲಿ ಚಾಲನೆ ದೊರೆತಿದೆ. ಜೂನ್ 30 ರಿಂದ ಮತಗಟ್ಟೆ ಅಧಿಕಾರಿಗಳು (ಬಿಎಲ್‌ಒಗಳು) ಮನೆ, ಮನೆಗೆ ಭೇಟಿ ನೀಡಿ ಎನ್ಯುಮರೇಷನ್ ಫಾರ್ಮ್ಗಳನ್ನು ನೀಡಲಿದ್ದಾರೆ. ಜುಲೈ 29 ರವರೆಗೆ ಅದನ್ನು ಮರಳಿ ಪಡೆಯಲು ಅವಕಾಶವಿದೆ.
ಎನ್ಯುಮರೇಷನ್ ಫಾರ್ಮ್ಗಳನ್ನು ಜಿಲ್ಲೆಯ ಪ್ರತಿ ಮತದಾರನೂ ತುಂಬಿ ಕೊಡಬೇಕಿದೆ. ಹಾಗಿದ್ದರೆ ಮಾತ್ರ ಆತನ ಹೆಸರು ಮತದಾರರ ಪಟ್ಟಿಯಲ್ಲಿ ಉಳಿಯಲಿದೆ. ಫಾರ್ಮ್ಗೆ ಮನೆಯ ಯಾವುದಾದರೂ ಒಬ್ಬ ಹಿರಿಯ ವ್ಯಕ್ತಿ ಸಹಿ ಮಾಡಬಹುದು. ಬಿಎಲ್‌ಒಗಳು ಫಾರ್ಮ್ ತುಂಬಲು ಸಹಕಾರ ಮಾಡತ್ತಾರೆ. ತುಂಬಿ ಸಹಿ ಪಡೆದ ಎರಡು ಫಾರ್ಮ್ಗಳಲ್ಲಿ ಒಂದನ್ನು ಅವರು ಸಂಗ್ರಹಿಸಲಿದ್ದು, ಇನ್ನೊಂದಕ್ಕೆ ಸಹಿ ಮಾಡಿ ಮತದಾರರಿಗೆ ವಾಪಸ್ ನೀಡುವರು. ಮತದಾರರ ಬಿಳಿಯ ಹಿನ್ನೆಲೆ ಇರುವ ಪಾಸ್‌ಪೋರ್ಟ್ ಅಳತೆಯ ಫೋಟೋ ಹೊರತಾಗಿ ಯಾವುದೇ ದಾಖಲೆಗಳನ್ನು ಎನ್ಯುಮರೇಶನ್ ಫಾರ್ಮ್ ಜೊತೆ ಒದಗಿಸುವ ಅಗತ್ಯವಿಲ್ಲ ಎಂದು ಈಗಾಗಲೇ ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

1445 ಬಿಎಲ್‌ಒಗಳು:

ಜಿಲ್ಲೆಯಲ್ಲಿ ಒಟ್ಟು 1445 ಬಿಎಲ್‌ಒಗಳನ್ನು ನೇಮಿಸಲಾಗಿದೆ. 300 ರಷ್ಟು ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಿಸಲಾಗಿದೆ. ಉಳಿದಂತೆ ಅಂಗನವಾಡಿ ಶಿಕ್ಷಕಿಯರನ್ನು ಬಿಎಲ್‌ಒಗಳು ಎಂದು ನೇಮಿಸಲಾಗಿದೆ. ವಿವಿಧ ಇಲಾಖೆಯ ಅಽಕಾರಿಗಳನ್ನು ಮೇಲ್ವಿಚಾರಕರನ್ನಾಗಿ ನೇಮಿಸಲಾಗಿದೆ. ಈಗಾಗಲೇ ಸಾಕಷ್ಟು ತರಬೇತಿಗಳಾಗಿದ್ದು, ಎನ್ಯುಮರೇಷನ್ ಫಾರ್ಮ್ಗಳು ಬಿಎಲ್‌ಒಗಳ ಕೈ ತಲುಪಿವೆ. ಬಿಎಲ್‌ಒಗಳಿಗೆ ಅವರವರ ಮತಗಟ್ಟೆ ವ್ಯಾಪ್ತಿಗೆ ಅನುಗುಣವಾಗಿ 50 ರಿಂದ 500 ರವರೆಗೂ ಮನೆಗಳು ಬರಲಿವೆ. 100 ರಿಂದ 1200 ಮತದಾರರನ್ನು ಅವರು ತಲುಪಬೇಕಿದೆ.
ಮತದಾರರ ಹೆಸರು ಬಿಟ್ಟು ಹೋಗದಂತೆ ಕ್ರಮ
ಎಸ್‌ಐಆರ್ ಸಂದರ್ಭದಲ್ಲಿ ಜಿಲ್ಲೆಯ ಯಾವುದೇ ಅರ್ಹ ಮತದಾರರು ಪ್ರಕ್ರಿಯೆಯಿಂದ ಹೊರ ಉಳಿಯದಂತೆ ಎಚ್ಚರ ವಹಿಸಲಾಗುವುದು ಎಂದು ಜಿಲ್ಲಾಽಕಾರಿ ಕೆ.ಲಕ್ಷ್ಮೀಪ್ರಿಯಾ ಹೇಳಿದರು.
ಎಸ್‌ಐಆರ್ ಜಾಗೃತಿಗಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಸೋಮವಾರ ಆಯೋಜಿಸಿದ್ದ ಬೈಕ್ ರ‍್ಯಾಲಿಗೆ ಜಿಪಂ ಆವರಣದಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಬಿಎಲ್‌ಒಗಳು ನೀಡುವ ಎನ್ಯುಮರೇಶನ್ ಫಾರ್ಮ್ಗಳನ್ನು ಪ್ರತಿಯೊಬ್ಬರೂ ಭರ್ತಿ ಮಾಡಿ ನೀಡಬೇಕು. ಅಗತ್ಯವಿದ್ದಲ್ಲಿ ಟೋಲ್ ಫ್ರೀ ಸಂಖ್ಯೆ ಅಥವಾ ಆಯೋಗದ ವೆಬ್‌ಸೈಟ್‌ಗಳ ಮೂಲಕ ಪಡೆದುಕೊಳ್ಳಬಹುದು. ಈ ಪ್ರಕ್ರಿಯೆಯಲ್ಲಿ ತಪ್ಪಿದಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂದರು.
ಇದೇ ಸಂದರ್ಭದಲ್ಲಿ ಮತದಾನದ ಪ್ರತಿಜ್ಞಾ ವೀಧಿ ಸ್ವೀಕರಿಸಲಾಯಿತು. ಜಿಪಂ ಸಿಇಒ ಡಾ.ದಿಲೀಷ್ ಶಶಿ, ಎಸ್‌ಪಿ ದೀಪನ್ ಎಂ.ಎನ್, ಜಿಪಂ ಮುಖ್ಯ ಯೋಜನಾಽಕಾರಿ ಸೋಮಶೇಖರ ಮೇಸ್ತ, ಯೋಜನಾ ನಿರ್ದೇಶಕ ಕರೀಂ ಅಸಾದಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net