ಕಾರವಾರ: ಸಿದ್ದಾಪುರ ಅವರಗುಪ್ಪ ಕೊಲೆ ಆರೋಪಿ ಕಮಲಾಕರ ಟಿವಿಗಳಲ್ಲಿ ಕಮಲಾಕರ ಗುರೂಜಿ ಎಂದು ಪ್ರಸಿದ್ಧನಾಗಿದ್ದ. ಟಿವಿ ಕಾರ್ಯಕ್ರಮಗಳಲ್ಲಿ ತನ್ನನ್ನು ಕಮಲಾಕರ ಭಟ್ ಎಂದು ಹೇಳಿಕೊಳ್ಳುತ್ತಿದ್ದ. ಆದರೆ, ಆತನ ಮೂಲ ಹೆಸರು ಕಮಲಾಕರ ಹೆಗಡೆ ಆಗಿದ್ದು, ತನ್ನ ವೃತ್ತಿಯ ಸಲುವಾಗಿ ಹೆಸರು ಬದಲಿಸಿಕೊಂಡಿದ್ದ ಎನ್ನಲಾಗಿದೆ. 15 ವರ್ಷಗಳಲ್ಲಿ ಆತ ಬೆಳೆದ ಕತೆಯೇ ರೋಚಕವಾಗಿದೆ.