ಆಕಸ್ಮಿಕ ಬೆಂಕಿಗೆ ಅಂಗಡಿ ನಾಶ

ಗೋಕರ್ಣ ಬಳಿಯ ಗಂಗೆಕೊಳ್ಳದಲ್ಲಿ ಬುಧವಾರ ರಾತ್ರಿ ನಡೆದ ಬೆಂಕಿ ಆಕಸ್ಮಿಕದಲ್ಲಿ ದಿನಸಿ ಮತ್ತು ಸ್ಟೇಶನರಿ ಅಂಗಡಿ ಸಂಪೂರ್ಣ ಸುಟ್ಟು ಕರಕಲಾಗಿರುವುದು.
ಗೋಕರ್ಣ ಬಳಿಯ ಗಂಗೆಕೊಳ್ಳದಲ್ಲಿ ಬುಧವಾರ ರಾತ್ರಿ ನಡೆದ ಬೆಂಕಿ ಆಕಸ್ಮಿಕದಲ್ಲಿ ದಿನಸಿ ಮತ್ತು ಸ್ಟೇಶನರಿ ಅಂಗಡಿ ಸಂಪೂರ್ಣ ಸುಟ್ಟು ಕರಕಲಾಗಿರುವುದು.
Published on
ಗೋಕರ್ಣ: ಹತ್ತಿರದ ಗಂಗೆಕೊಳ್ಳ ಗ್ರಾಮದಲ್ಲಿ ಬುಧವಾರ ರಾತ್ರಿ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಮಂಜುನಾಥ ಪರಮೇಶ್ವರ ಗೌಡ ಎಂಬುವವರ ದಿನಸಿ ಮತ್ತು ಸ್ಟೇಶನರಿ ಅಂಗಡಿ ಸಂಪೂರ್ಣವಾಗಿ ಸುಟ್ಟು ಅಪಾರ ಹಾನಿಯಾಗಿದೆ. ಅಂಗಡಿಯಲ್ಲಿದ್ದ ಎಲ್ಲ ಮಾರಾಟದ ವಸ್ತುಗಳು, ಫ್ರಿಜ್, ಟಿವಿ ಮತ್ತು 50 ಸಾವಿರ ನಗದು ಹಣ ಕೂಡ ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ. ಅಂಗವಿಕಲರಾಗಿರುವ ಮಂಜುನಾಥ ಅವರು ಉಪಯೋಗಿಸುತ್ತಿದ್ದ ಕೃತಕ ಕಾಲು ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲ ಪರಿಕರುಗಳು ಮತ್ತು ಇತರ ಮರಾಟ ಸಾಮಾನುಗಳು ಸೇರಿ ಒಟ್ಟೂ ಮೂರೂವರೆ ಲಕ್ಷ ರೂ. ವಸ್ತುಗಳು ಬೆಂಕಿಯಲ್ಲಿ ನಾಶವಾಗಿವೆ.
ಸ್ಥಳಕ್ಕೆ ಭೇಟಿಯಿತ್ತ ಕಂದಾಯ ಇಲಾಖೆ ಗ್ರಾಮಾಧಿಕಾರಿ ಸೋಮಶೇಖರ ನಗದು ಹಣ ಸಹಿತ ಇತರ ಎಲ್ಲ ವಸ್ತುಗಳೂ ಸೇರಿ ಒಟ್ಟು 4 ಲಕ್ಷ 50 ಸಾವಿರ ರೂ. ಹಾನಿಯನ್ನು ಅಂದಾಜಿಸಿ ತಹಸೀಲ್ದಾರರಿಗೆ ವರದಿ ಸಲ್ಲಿಸಿದ್ದಾರೆ. ಅಂಗಡಿಗೆ ಹೊಂದಿಕೊಂಡು ಅವರ ಮನೆಯಿದ್ದು ಘಟನೆಯಿಂದ ಮನೆಗೆ ಅಥವಾ ಅಲ್ಲಿದ್ದ ಜನ ಜಾನುವಾರುಗಳಿಗೆ ಯಾವುದೇ ತೊಂದರೆ ಆಗಲಿಲ್ಲವಾಗಿ ತಾಲೂಕು ತಹಸೀಲ್ದಾರ್ ಕಚೇರಿಯಿಂದ ತಿಳಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net