ಶಿವಾಜಿ ಶಿಕ್ಷಣ ಸಂಸ್ಥೆಯಲ್ಲಿ ಜ.16 ರಿಂದ ಸಂಭ್ರಮಾಚರಣೆ

ಶಿವಾಜಿ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತು.
ಶಿವಾಜಿ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತು.
Published on
ಕಾರವಾರ: ಶಿವಾಜಿ ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗಗಳ ಅಮೃತ ಮಹೋತ್ಸವ, ಸುವರ್ಣ ಮಹೋತ್ಸವ ಹಾಗೂ ಬೆಳ್ಳಿ ಮಹೋತ್ಸವವನ್ನು ಜನವರಿ 16 ರಿಂದ 19 ರವರೆಗೆ ಆಯೋಜಿಸಲಾಗಿದೆ ಎಂದು ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಅಶೋಕ ನಾಯ್ಕ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಬಾಡದ ಶಿವಾಜಿ ಶಿಕ್ಷಣ ಸಂಸ್ಥೆಯು ಕನ್ನಡ ಜಿಲ್ಲೆಯ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾಗಿದೆ. ಸ್ವಾತಂತ್ರ್ಯ ಪೂರ್ವ ಎಂದರೆಣ‌ 1941 ನಲ್ಲಿ ದಿವಂಗತ ಶಂಕರ ಬಾನು ಸಾವಂತ ಅವರ ನೇತೃತ್ವದಲ್ಲಿ ಹಲವಾರು ಶಿಕ್ಷಣ ಪ್ರೇಮಿಗಳು ಹಾಗೂ ಹಿತೈಷಿಯೊಂದಿಗೆ ಸ್ಥಾಪನೆಗೊಂಡಿತು. ಈ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಹಾಗೂ ಗಡಿ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಮುಂದೆ ಬರಬೇಕು ಎಂಬ ಕಾರಣದಿಂದ ಆಗಿನ ಮಹನೀಯರು ಪ್ರಾರಂಭದಲ್ಲಿ ತಮ್ಮದೇ ಸಂಪನ್ಮೂಲ ಕ್ರೋಢೀಕರಿಸಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದರು.
ಶಿಕ್ಷಣ ಸಂಸ್ಥೆಯು ಅನೇಕ ಅಡೆ, ತಡೆಗಳನ್ನು ಎದುರಿಸಿ, ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದೆ. ವಿಶೇಷವಾಗಿ ಗ್ರಾಮೀಣ ಹಾಗೂ ಅಂತರ ರಾಜ್ಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡಿದ್ದು ಅನೇಕ ವಿದ್ಯಾರ್ಥಿಗಳು ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಹಿಂದಿನ ಹಾಗೂ ಪ್ರಸ್ತುತ ಆಡಳಿತ ಮಂಡಳಿ ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳ ಅತ್ಯಮೂಲ್ಯ ಸೇವೆಯ ಗುರಿಯೊಂದಿಗೆ ಇಂದಿಗೂ ಸರಾಸರಿ ಪ್ರತಿ ವರ್ಷ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಸ್ಥೆಯ ಅಂಗ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಶಿಕ್ಷಣ ಸಂಸ್ಥೆಗಳು

ನಮ್ಮ ಸಂಸ್ಥೆಯ ಅಡಿ ಶಿವಾಜಿ ಬಾಲಕರ ಪ್ರೌಢ ಶಾಲೆ. (1945 ರಲ್ಲಿ ಪ್ರಾರಂಭ), ಶಿವಾಜಿ ಬಾಲಕಿಯರ ಪ್ರೌಢಶಾಲೆ (1966 ರಲ್ಲಿ ಪ್ರಾರಂಭ), ಶ್ರೀ ಸಾಂತೇರಿ ವಿದ್ಯಾಲಯ, ಹಣಕೋಣ (1970 ರಲ್ಲಿ ಪ್ರಾರಂಭ), ಶಿವಾಜಿ ಕಲಾ ಮತ್ತು ವಾಣಿಜ್ಯ, ಮಹಾವಿದ್ಯಾಲಯ,(1970), ಶಿವಾಜಿ ಶಿಕ್ಷಣ ಮಹಾವಿದ್ಯಾಲಯ, (1972 ರಲ್ಲಿ ಪ್ರಾರಂಭ), ಶ್ರೀ ಶಿವಾಜಿ ಬಾಲಮಂದಿರ ಆಂಗ್ಲ ಮಾದ್ಯಮ ಕಿರಿಯ ಹಾಗೂ ಹಿರಿಯ ಪೌಢ ಶಾಲೆ ( 2000 ರಲ್ಲಿ) ಪ್ರಾರಂಭ, ಶಿವಾಜಿ ಪದವಿ ಪೂರ್ವ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜು ( 2001 ರಲ್ಲಿ ಪ್ರಾರಂಭ), ಕಾರ್ಯ ನಿರ್ವಹಿಸುತ್ತಿವೆ.
ಸಂಸ್ಥೆಗಳಿಗೆ ಅಂಗ ಸಂಸ್ಥೆಗಳು ಸ್ವಂತ ಕಟ್ಟಡಗಳನ್ನು ಮೂಲ ಸೌಕರ್ಯಗಳೊಂದಿಗೆ ಒದಗಿಸಿರುತ್ತದೆ.
ಸಂಸ್ಥೆಯು ಸುಸಜ್ಜಿತ ಕಂಪ್ಯೂಟರ್ ಪ್ರಯೋಗಾಲಯ, ಮೂರು ಎಕರೆ ವಿಶಾಲವಾದ ಆಟದ ಮೈದಾನಗಳನ್ನು ಹೊಂದಿದ್ದು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಯಶಸ್ವಿಯಾಗಿ ಸಂಘಟಿಸಿದೆ.
ಸಂಸ್ಥೆಯು ಯುಜಿಸಿ ಹಾಗೂ ಸಂಸ್ಥೆಯ ಮ್ಯಾಚಿಂಗ್ ಗ್ರಾಂಟ್ ಪಡೆದು ಸುಸಜ್ಜಿತ ಮಹಿಳಾ ವಸತಿ ನಿಲಯವನ್ನು ಹೊಂದಿದೆ. ಸಂಸ್ಥೆಯ ಆವರಣದಲ್ಲಿ ಬ್ಯಾಂಕ್ ವಿಸ್ತರಣಾ ಶಾಖೆ, ಕ್ಯಾಂಟೀನ್ ಸೌಲಭ್ಯವನ್ನು ಹೊಂದಿರುತ್ತದೆ.
ಕಟ್ಟಡ ಉದ್ಘಾಟನೆ
ಅಮೃತ ಮಹೋತ್ಸವ, ಸುವರ್ಣ ಮಹೋತ್ಸವದ ಅಂಗವಾಗಿ ವಿವಿಧ ಶಾಶ್ವತ ಕಾರ್ಯಕ್ರಮ ಆಯೋಜಿಸಲಾಗಿದೆ.
ಮುಂಬೈನ ಸೆಂಟುರಾ ಫಾರ್ಮಾಸುಟಿಕಲ್,‌ ಸಂಸ್ಥಾಪಕರಾದ ಶ್ರೀ. ಶಿವಾನಂದ ಸಾವಂತ ಅವರು ತಮ್ಮ ಕಂಪನಿಯ ಸಿ.ಎಸ್.ಆರ್ ನಿಧಿಯ ಅಡಿ 3 ಕೋಟಿ 60 ಲಕ್ಷಗಳ ಮೌಲ್ಯದ ಬಹುಮಹಡಿ ಕಟ್ಟಡವನ್ನು ನಿರ್ಮಿಸಿ ಕೊಟ್ಟಿದ್ದು, ಅದರ ಉದ್ಘಾಟನೆ ನಡೆಯಲಿದೆ.
ಸುಮಾರು ಅಂದಾಜು 4 ಕೋಟಿ ವೆಚ್ಚದಲ್ಲಿ ಶಿವಾಜಿ ಪದವಿ ಪೂರ್ವ ಕಾಲೇಜಿಗೆ ಸ್ವತಂತ್ರವಾದ ಕಟ್ಟಡವನ್ನು ನಿರ್ಮಿಸುವುದು.
ಅಂದಾಜು 1.20 ಕೋಟಿ ವೆಚ್ಚದಲ್ಲಿ ಮಹಿಳಾ ವಸತಿ ನಿಲಯಕ್ಕೆ ಎರಡನೇ ಅಂತಸ್ತಿನ ಕಟ್ಟಡವನ್ನು ನಿರ್ಮಿಸುವುದು.
25 ಲಕ್ಷಗಳ ವೆಚ್ಚದಲ್ಲಿ ಆಟದ ಮೈದಾನವನ್ನು ಅಭಿವೃದ್ಧಿ.
ಸುಮಾರು 45 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಾಲ್ಕು ಶಾಲಾ ಬಸ್‌ಗಳ ಖರೀದಿ.
ಸುಮಾರು ಅಂದಾಜು ರೂಪಾಯಿ 25 ಲಕ್ಷದ ಅತ್ಯಾಧುನಿಕ ಕಲಿಕಾ ಸಾಧನಗಳ ಖರೀದಿ.
25 ಲಕ್ಷದ ಉದ್ಯೋಗಾಭಿಮುಖ ಹೆಚ್ಚುವರಿ ಕೋರ್ಸುಗಳನ್ನು ಪ್ರಾರಂಭಿಸುವುದು.
4 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸುಸಜ್ಜಿತ ಹೆಚ್ಚುವರಿ ಕಲಿಕಾ ಕೊಠಡಿಗಳ ನಿರ್ಮಾಣ‌ ಮಾಡುವುದು ಎಂದರು.

ಕಾರ್ಯಕ್ರಮ:

ಶಿವಾಜಿ ಬಾಲಕರ ಪ್ರೌಢ ಶಾಲೆಯ ಅಮೃತ ಮಹೋತ್ಸವವನ್ನು ದಿನಾಂಕ 16 ರಂದು ಹಾಗೂ ಇನ್ನಿತರೆ ಅಂಗ ಸಂಸ್ಥೆಗಳ ಸುವರ್ಣ ಹಾಗೂ ಬೆಳ್ಳಿ ಮಹೋತ್ಸವವನ್ನು ಜ. 17 ರಿಂದ 19 ರವರೆಗೆ ಆಯೋಜಿಸಲಾಗಿದೆ. ಶಾಸಕ ಸತೀಶ ಸೈಲ್ ಗೌರವ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ.
ನಾಲ್ಕು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.ಹಳೆ ವಿದ್ಯಾರ್ಥಿ ಸಂಘದ ಸಭೆ ನಡೆಸಲಾಗಿದೆ.
ಶಿವಾಜಿ ಶಿಕ್ಷಣ ಸಂಸ್ಥೆಯ ಪ್ರಗತಿಯತ್ತ ಸಹಕಾರವನ್ನು ನೀಡಿದವರು, ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು, ನಾಟಕ ಯಕ್ಷಗಾನಗಳಂಥ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಸಂಸ್ಥೆಯ ಅಧ್ಯಕ್ಷ ಕೆ.ಪಿ.ನಾಯ್ಕ, ಕಾರ್ಯದರ್ಶಿ ಕಿಶೋರ ರಾಣೆ,
ಶಿವಾನಂದ ಕದಂ, ಪ್ರಭಾಕರ ಸಾವಂತ, ಮಂಜುನಾಥ ಪವಾರ್, ದೇವಿದಾಸ ಸಾವಂತ , ನರೇಂದ್ರ ಬಾಳಾ ದೇಸಾಯಿ, ಡಾ.ಸುಮನ್ ಸಾವಂತ, ಹೈಸ್ಕೂಲ್ ಮುಖ್ಯಾಧ್ಯಾಪಕ ರಾಮದಾಸ ನಾಯ್ಕ, ಶಿಲ್ಪಾ ಪವಾರ್, ಜಯಶ್ರೀ ಸೈಲ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net