ಶಿರೂರು ಭೂ ಕುಸಿತ ಸ್ಥಳದ ವಿರುದ್ಧ ದಿಕ್ಕಿನಲ್ಲಿ ಗಂಗಾವಳಿ ನದಿಯಾಚೆಯ ಉಳುವರೆ ಎಂಬ ಗ್ರಾಮದಲ್ಲಿ ಭಾರಿ ಹಾನಿಯಾಗಿತ್ತು. ವೇಗವಾಗಿ ಹರಿಯುವ ನದಿಗೆ ಗುಡ್ಡದ ಮಣ್ಣು ರಭಸದಿಂದ ಬಂದು ಬಿದ್ದ ಪರಿಣಾಮ ನದಿಯ ಇನ್ನೊಂದು ದಡದಲ್ಲಿ ಸುನಾಮಿ ಸೃಷ್ಟಿಯಾಗಿತ್ತು. ಕಲ್ಲು, ಮಣ್ಣುಗಳಿಂದ ಕೂಡಿದ ರಾಡಿ ನೀರು ನದಿಯ ದಡದ ಉಳುವರೆ ಗ್ರಾಮಕ್ಕೆ ಅಪ್ಪಳಿಸಿತ್ತು. ಎರಡು ಮನೆಗಳು ಅಡಿಪಾಯವೂ ಇಲ್ಲದಂತೆ ನಾಶವಾಗಿದ್ದರೆ, ಏಳು ಮನೆಗಳಿಗೆ ಭಾರಿ ಹಾನಿಯಾಗಿತ್ತು. ಒಬ್ಬ ವೃದ್ಧೆ ಮೃತಪಟ್ಟಿದ್ದು, ಮಕ್ಕಳು, ಮಹಿಳೆಯರು ಸೇರಿ 14 ಜನ ಗಾಯಗೊಂಡಿದ್ದರು.