ತಂದೆಯ ಕೊಲೆ, ತಾಯಿ ಜೈಲಿಗೆ ಮಕ್ಕಳಿಬ್ಬರು ಅನಾಥ

ಕೊಲೆಯಾದ ಪರಮೇಶ್ವರ ನಾಯ್ಕ
ಕೊಲೆಯಾದ ಪರಮೇಶ್ವರ ನಾಯ್ಕ
Published on
ಶಿರಸಿ: ತಂದೆಯ ಭಿಕರ ಕೊಲೆಯಾಗಿದೆ.ಅದೇ ಪ್ರಕರಣದಲ್ಲಿ ತಾಯಿ ಜೈಲು ಸೇರಿದ್ದಾಳೆ. ಏನನ್ನೂ ಅರಿಯದ ಮಕ್ಕಳಿಬ್ಬರು ಅನಾಥವಾಗಿದ್ದಾರೆ.
ಇದು ತಾಲೂಕಿನ ಶಿಂಗನಮನೆಯ ಕೊಲೆ ಪ್ರಕರಣದ ನಂತರ ದಾರುಣ ಪರಿಸ್ಥಿತಿಯಾಗಿದೆ. ಪರಮೇಶ್ವರ ಬಾಬು ನಾಯ್ಕ ಕೊಲೆ ಪ್ರಕರಣದಲ್ಲಿ ಅವರ ಪತ್ನಿ ಅರ್ಪಿತಾಳ ಪಾತ್ರವಿರುವುದೂ ಖಚಿತವಾಗಿದ್ದರಿಂದ ಆಕೆಯನ್ನೂ ಬಂಧಿಸಲಾಗಿದೆ. ದಂಪತಿಗೆ 5 ವರ್ಷ ಹಾಗೂ 3 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದರು. ಈಗ ಅವರು ತಂದೆ ಹಾಗೂ ತಾಯಿ ಇಬ್ಬರೂ ಸಿಗದಂತಾಗಿದೆ. ಅಜ್ಜಿ ಹಾಗೂ ಅತ್ತೆ (ತಂದೆಯ ಸಹೋದರಿ) ಈಗ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ.
ಕತ್ತಿಯಿಂದ ಕಡಿದು, ಪರಮೇಶ್ವರ ಬಾಬು ನಾಯ್ಕ ಎಂಬುವವರನ್ನು ಭೀಕರವಾಗಿ ಹತ್ಯೆ ಮಾಡಿದ ಆರೋಪದ ಮೇಲೆ ಮೃತರ ಸಹೋದರ ಸಂಬಂಧಿಯಾಗಿರುವ ಪಕ್ಕದ ಮನೆಯ ಪರಮೇಶ್ವರ ತಿಮ್ಮಾ ನಾಯ್ಕ ಎಂಬಾತನನ್ನು ಶುಕ್ರವಾರವೇ ಬಂಧಿಸಲಾಗಿತ್ತು. ಈ ಕೊಲೆಗೆ ಪರಮೇಶ್ವರ ತಿಮ್ಮಾ ನಾಯ್ಕ ಹಾಗೂ ಅರ್ಪಿತಾ ನಡುವಿನ ಅಕ್ರಮ ಸಂಬಂಧವೇ ಕಾರಣ ಎಂಬುದು ಖಚಿತವಾಗಿರುವ ಕಾರಣ ಶನಿವಾರ ಆಕೆಯನ್ನೂ ಅಽಕೃತವಾಗಿ ಬಂಽಸಲಾಗಿದೆ.

ಒಯ್ದ ಕತ್ತಿಯೇ ಮುಳುವಾಯ್ತು...

ಇಬ್ಬರ ನಡುವೆ 8 ವರ್ಷಗಳಿಂದ ಅಕ್ರಮ ಸಂಬಂಧ ಇತ್ತು. ಎನ್ನಲಾಗಿದೆ. ಅಕ್ರಮ ಸಂಬಂಧ ಬಯಲಾಗುತ್ತಿದ್ದಂತೆಯೇ ತನ್ನ ಪ್ರಿಯಕರನೊಂದಿಗೆ ಸೇರಿ ತನ್ನ ಗಂಡನನ್ನೇ ಮುಗಿಸುವ ಯೋಜನೆಯನ್ನು ಮೃತನ ಪತ್ನಿ ಅರ್ಪಿತಾ ಹಾಕಿರುವುದು ವಿಚಾರಣೆಯ ವೇಳೆ ಬಹಿರಂಗಗೊಂಡಿದೆ.
ಗುರುವಾರ ಸಂಜೆ ಯಾವುದೋ ಕೆಲಸದಲ್ಲಿ ನಿರತನಾಗಿದ್ದ ಪರಮೇಶ್ವರ ಬಾಬು ನಾಯ್ಕರಿಗೆ ಆರೋಪಿ ಪರಮೇಶ್ವರ ತಿಮ್ಮಾ ನಾಯ್ಕ "ಮಾತನಾಡುವುದಿದೆ, ಮನೆ ಪಕ್ಕದಲ್ಲಿರುವ ಕಾಡಿಗೆ ಬಾ" ಎಂದು ಫೋನ್ ಮಾಡಿದ್ದಾನೆ. ಫೋನ್ ಕರೆ ಬರುತ್ತಿದ್ದಂತೆಯೇ ಪರಮೇಶ್ವರ ಬಾಬು ನಾಯ್ಕ ಕೆಲಸಕ್ಕಾಗಿ ಹಿಡಿದುಕೊಂಡಿದ್ದ ಕತ್ತಿಯನ್ನೂ ತನ್ನೊಂದಿಗೆ ಒಯ್ದಿದ್ದಾನೆ. ಮನೆಯಿಂದ ಸುಮಾರು 200 ಮೀ. ದೂರದ, ಕಾಡಿನ ಪ್ರದೇಶದಲ್ಲಿ ನಿಂತಿದ್ದ ಪರಮೇಶ್ವರ ತಿಮ್ಮಾ ನಾಯ್ಕ ಅವನೊಂದಿಗೆ ಆರಂಭದಲ್ಲಿ ಸಹಜ ಮಾತುಕತೆಯೇ ನಡೆದಿದೆ. ಆದರೆ, ಅಕ್ರಮ ಸಂಬAಧಕ್ಕೆ ಸಂಬAಽಸಿದ ಮಾತುಕತೆ ಆರಂಭವಾಗಿ ಮಾತು ವಿಕೋಪಕ್ಕೆ ಹೋಗಿದೆ. ಜಗಳ ಜೋರಾದಾಗ ಪರಮೇಶ್ವರ ಬಾಬು ನಾಯ್ಕ ತಂದಿದ್ದ ಕತ್ತಿಯನ್ನೇ ಕಸಿದು ಆರೋಪಿ ಆತನನ್ನು ಕೊಚ್ಚಿ ಹಾಕಿದ್ದಾನೆ. ಬಳಿಕ ಕತ್ತಿಯನ್ನು ತಂದು ಮನೆಯಲ್ಲಿ ಚೀಲದಲ್ಲಿ ಸುತ್ತಿಟ್ಟಿದ್ದ. ಪೊಲೀಸ್ ಶ್ವಾನ ಕೊಲೆ ನಡೆದ ಸ್ಥಳದಿಂದ ನೇರವಾಗಿ ಪರಮೇಶ್ವರ ತಿಮ್ಮಾ ನಾಯ್ಕನ ಮನೆಗೆ ಬಂದು ಕತ್ತಿ ಇಟ್ಟ ಜಾಗವನ್ನು ತೋರಿಸಿತ್ತು. ಇದರಿಂದ ಆತನೇ ಕೊಲೆ ಮಾಡಿದ ಎಂಬುದು ಖಚಿತವಾಗಿದೆ.
ಪರಮೇಶ್ವರ ಬಾಬು ನಾಯ್ಕ ರಾತ್ರಿಯಾದರೂ ಮನೆಗೆ ಬರದಿದ್ದುದರಿಂದ ಅವರ ಮಾವ ಪೊಲೀಸರಿಗೆ ಫೋನ್ ಮಾಡಿದ್ದರು. ಶುಕ್ರವಾರ ಬೆಳಗ್ಗೆ ನಾಪತ್ತೆಯಾದವನ ಹುಡುಕಾಟದಲ್ಲಿ ಪರಮೇಶ್ವರ ತಿಮ್ಮಾ ನಾಯ್ಕನೂ ಸಾಮಾನ್ಯನಂತೆ ಭಾಗಿಯಾಗಿದ್ದ ಎನ್ನಲಾಗಿದೆ. ಅಕ್ಕಪಕ್ಕದ ಮನೆಯವರು ಸೂಚನೆಯಂತೆ ಆತನನ್ನು ದೂರವಿಟ್ಟು ಹುಡುಕಾಟ ನಡೆಸಿದಾಗ ಕೆಲವೇ ಕ್ಷಣದಲ್ಲಿ ಶವ ಪತ್ತೆಯಾಗಿದೆ. ಪತ್ನಿ ಅರ್ಪಿತಾಳನ್ನು ವಿಚಾರಣೆ ನಡೆಸಿದಾಗ ಇಡೀ ಕತೆ ಬಯಲಾಗಿದೆ.
......
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net