ದೇಶದ ಪ್ರಗತಿಗೆ ಸೇವಾದಳ ಪೂರಕ

ಹೊನ್ನಾವರದಲ್ಲಿ ಭಾರತ ಸೇವಾದಳ ಆಯೋಜಿಸಿದ್ದ ಧ್ವಜ ನೀತಿ ಸಂಹಿತೆ ಕಾರ್ಯಾಗಾರವನ್ನು ಯೋಗೇಶ ರಾಯ್ಕರ್​ ಉದ್ಘಾಟಿಸಿದರು. ಎಂ.ಬಿ. ಪೆ, ಪುಟ್ಟೇಗೌಡ, ಬಿ.ಎಸ್​. ಭಜಂತ್ರಿ, ಜಯಶ್ರೀ ನಾಯ್ಕ ಇದ್ದರು.
ಹೊನ್ನಾವರದಲ್ಲಿ ಭಾರತ ಸೇವಾದಳ ಆಯೋಜಿಸಿದ್ದ ಧ್ವಜ ನೀತಿ ಸಂಹಿತೆ ಕಾರ್ಯಾಗಾರವನ್ನು ಯೋಗೇಶ ರಾಯ್ಕರ್​ ಉದ್ಘಾಟಿಸಿದರು. ಎಂ.ಬಿ. ಪೆ, ಪುಟ್ಟೇಗೌಡ, ಬಿ.ಎಸ್​. ಭಜಂತ್ರಿ, ಜಯಶ್ರೀ ನಾಯ್ಕ ಇದ್ದರು.
Published on

ಹೊನ್ನಾವರ: ಭಾರತ ಸೇವಾದಳವು ಉತ್ತಮ ನಾಗರಿಕರನ್ನು ಸೃಷ್ಟಿಸುವ ಮೂಲಕ ದೇಶದ ಪ್ರಗತಿಗೆ ಪೂರಕವಾಗಿದೆ ಎಂದು ಭಾರತ ಸೇವಾದಳದ ಕೇಂದ್ರ ಸಮಿತಿ ಸದಸ್ಯ ಎಂ.ಬಿ. ಪೈ ಹೇಳಿದರು.


ಪಟ್ಟಣದ ನಾಮಧಾರಿ ಸಭಾಭವನದಲ್ಲಿ ತಾಲೂಕಾಡಳಿತ ಮತ್ತು ಭಾರತ ಸೇವಾದಳ ಸಮಿತಿ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಧ್ವಜ ನೀತಿ ಸಂಹಿತೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಭಾರತ ಸೇವಾದಳದ ಜಿಲ್ಲಾಧ್ಯ ಯೋಗೇಶ ರಾಯ್ಕರ್​ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಧ್ವಜ ನೀತಿ ಸಂಹಿತಿಯ ಅರಿವು ಪಡೆಯಬೇಕು ಎಂದರು.
ಭಾರತ ಸೇವಾದಳದ ತಾಲೂಕಾಧ್ಯ ವಾಮನ ನಾಯ್ಕ ಅಧ್ಯತೆ ವಹಿಸಿದ್ದರು. ತಹಸೀಲ್ದಾರ್​ ಪ್ರವಿಣ ಕರಾಂಡೆ, ತಾಪಂ ಇಒ ಪುಟ್ಟೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್​. ಭಜಂತ್ರಿ, ಬಿಆರ್​ಸಿ ಸಮನ್ವಯಾಧಿಕಾರಿ ಜಯಶ್ರೀ ನಾಯ್ಕ, ಗ್ರಾಪಂ ಮಾಜಿ ಅಧ್ಯಕ್ಷ ಐ.ವಿ. ನಾಯ್ಕ, ಗ್ಯಾರಂಟಿ ಸಮಿತಿ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಹೆಸ್ಕಾಂ ಎಇಇ ರಾಮಕೃಷ್ಣ ಭಟ್ಟ, ಎಂ.ಜಿ. ನಾಯ್ಕ ಮಾತನಾಡಿದರು.
ಭಾರತ ಸೇವಾದಳದ ಜಿಲ್ಲಾ ಸದಸ್ಯೆ ಕಲ್ಪನಾ ಹೆಗಡೆ, ಸಿಡಿಪಿಒ ವನಿತಾ ದೇಶಭಂಡಾರಿ, ಕೆ.ಎಂ. ಹೆಗಡೆ, ಅರುಣ ರ್ನಾಂಡಿಸ್​, ಲಕ್ಷ್ಮೀ ದಳವಾಯಿ, ಇತರರು ಉಪಸ್ಥಿತರಿದ್ದರು. ಭಾರತ ಸೇವಾದಳದ ತಾಲೂಕು ಸಂಚಾಲಕ ಬಾಬು ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ಅಧ್ಯಕ್ಷ ಸುಧೀಶ ನಾಯ್ಕ, ವಿ.ಜಿ. ಭಟ್ಟ ಹಾಗೂ ಉದಯ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net