ಶಾಲೆ-ಕಾಲೇಜ್​ ಸಮಯಕ್ಕೆ ಪ್ರತ್ಯೇಕ ಬಸ್​ ಸಂಚರಿಸಲಿ

ಯಲ್ಲಾಪುರ ತಾಲೂಕಿನ ಉಪಳೇಶ್ವರ ಬಳಿ ಬಸ್​ಗಾಗಿ ಕಾಯುತ್ತಿರುವ ವಿದ್ಯಾಥಿರ್ಗಳು.
ಯಲ್ಲಾಪುರ ತಾಲೂಕಿನ ಉಪಳೇಶ್ವರ ಬಳಿ ಬಸ್​ಗಾಗಿ ಕಾಯುತ್ತಿರುವ ವಿದ್ಯಾಥಿರ್ಗಳು.
Published on

ಯಲ್ಲಾಪುರ: ತಾಲೂಕಿನ ಚಂದಗುಳಿ ಗ್ರಾಪಂ ವ್ಯಾಪ್ತಿಯ ವಿದ್ಯಾಥಿರ್ಗಳು ಪ್ರತಿನಿತ್ಯ ಬಸ್​ ವ್ಯವಸ್ಥೆ ಸರಿಯಾಗಿಲ್ಲದೇ ಶಾಲೆ-ಕಾಲೇಜ್​ಗೆ ಹೋಗಲು ಸಮಸ್ಯೆ ಅನುಭವಿಸುತ್ತಿದ್ದಾರೆ.


ಚಂದಗುಳಿ ಗ್ರಾಪಂ ವ್ಯಾಪ್ತಿಯ ಮಳಲಗಾಂವ್​, ಜಂಬೆಸಾಲ್​, ಉಪಳೇಶ್ವರ, ಹುತ್ಕಂಡ, ಸವಣಗೇರಿ ಭಾಗಗಳಿಂದ ಯಲ್ಲಾಪುರ ಶಾಲಾ ಕಾಲೇಜ್​ಗೆ ಸುಮಾರು 150ಕ್ಕೂ ಹೆಚ್ಚು ವಿದ್ಯಾಥಿರ್ಗಳು ಪ್ರತಿನಿತ್ಯ ಓಡಾಡುತ್ತಾರೆ. ಶಿರಸಿ ಕಡೆಯಿಂದ ಬರುವ ಬಸ್​ಗಳಲ್ಲಿ ಪ್ರಯಾಣಿಕರ ಒತ್ತಡದಿಂದ ನಿಲುಗಡೆ ಇಲ್ಲದೇ ವಿದ್ಯಾಥಿರ್ಗಳಿಗೆ ಸಮಸ್ಯೆಯಾಗಿದೆ. ತಾಸುಗಟ್ಟಲೆ ಬಸ್​ಗಾಗಿ ಕಾಯುವ ವಿದ್ಯಾಥಿರ್ಗಳು ಶಾಲೆ, ಕಾಲೇಜ್​ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ. ಸಂಜೆಯೂ ಮನೆಗೆ ಮರಳುವುದು ತಡವಾಗುತ್ತಿದೆ.
ವಿದ್ಯಾಥಿರ್ಗಳ ಅನುಕೂಲಕ್ಕಾಗಿ ಬೆಳಗ್ಗೆ ಮತ್ತು ಸಂಜೆ ಶಾಲೆ&ಕಾಲೇಜ್​ ಸಮಯಕ್ಕೆ ಪ್ರತ್ಯೇಕ ಬಸ್​ ಓಡಾಟ ಆರಂಭಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ. ಈಗಾಗಲೇ ಈ ಕುರಿತು ಟಕ ವ್ಯವಸ್ಥಾಪಕರಿಗೆ 3&4 ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ.
ಸ್ಥಳಿಯ ಮುಖಂಡರು ಈ ಕುರಿತು ಮನವಿ ಸಲ್ಲಿಸಿದ್ದಾರೆ. ಇದಲ್ಲದೆ, ಪಾಲಕರು ಈ ಬಗ್ಗೆ ಮನವಿ ನೀಡಿದ್ದಾರೆ. ಸಮಸ್ಯೆ ಬಗ್ಗೆ ಪೊಲೀಸ್​ ಇಲಾಖೆಯ ಗಮನಕ್ಕೂ ತಂದ ಹಿನ್ನೆಲೆಯಲ್ಲಿ ಪರಿಹರಿಸುವಂತೆ ಟಕ ವ್ಯವಸ್ಥಾಪಕರಿಗೆ ಪಿಎಸ್​ಐ ಕೂಡ ಕೇಳಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಘಟಕ ವ್ಯವಸ್ಥಾಪಕರು ತಕ್ಷಣವೇ ಪ್ರತ್ಯೇಕ ಬಸ್​ ಓಡಾಟಕ್ಕೆ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದರು.
ಇಷ್ಟೆಲ್ಲ ನಡೆದು ವಾರಗಳೇ ಕಳೆದರೂ ಬಸ್​ ಓಡಾಟ ಮಾತ್ರ ಇನ್ನೂ ಆರಂಭವಾಗಿಲ್ಲ. ಭರವಸೆ ನೀಡಿ, ಕ್ರಮ ಕೈಗೊಳ್ಳದೇ ಇರುವ ಬಸ್​ ಘಟಕದ ಅಧಿಕಾರಿಗಳ ಬಗ್ಗೆ ಪಾಲಕರು ಹಾಗೂ ವಿದ್ಯಾಥಿರ್ಗಳ ಆಕ್ರೋಶ ಹೆಚ್ಚಿದೆ. ಬಸ್​ ಸಮಸ್ಯೆ ಪರಿಹರಿಸಲು ಆಗ್ರಹಿಸಿ ಆ. 8ರಂದು ರಸ್ತೆ ತಡೆ ನಡೆಸಿ ಪ್ರತಿಭಟಿಸುವ ಸಿದ್ಧತೆಯನ್ನೂ ನಡೆಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net