ಉತ್ತರ ಕನ್ನಡದ ಟ್ಯಾಬ್ಲೋಗೆ ಎರಡನೇ ಸ್ಥಾನ

ಮೈಸೂರು ಜಂಬು ಸವಾರಿಯಲ್ಲಿ ಪ್ರದರ್ಶನಗೊಂಡ ಉತ್ತರ ಕನ್ನಡದ ಟ್ಯಾಬ್ಲೋ
ಮೈಸೂರು ಜಂಬು ಸವಾರಿಯಲ್ಲಿ ಪ್ರದರ್ಶನಗೊಂಡ ಉತ್ತರ ಕನ್ನಡದ ಟ್ಯಾಬ್ಲೋ
Published on: 

ಕಾರವಾರ: ಮೈಸೂರು ದಸರಾ ಮಹೋತ್ಸವ ಅಂಗವಾಗಿ ನಡೆದ ಜಂಬೂಸವಾರಿ ಮೆರವಣಿಗೆಯಲ್ಲಿ ಪ್ರದರ್ಶನಗೊಂಡ ಉತ್ತರ ಕನ್ನಡ ಜಿಲ್ಲೆಯ ಸ್ತಬ್ಧ ಚಿತ್ರಕ್ಕೆ ದ್ವಿತೀಯ ಬಹುಮಾನ ದೊರಕಿದೆ.

ಬೆಳಗಾವಿ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿಯಿAದ `ಸಾಂಪ್ರದಾಯಿಕ ಕಲೆ ಮತ್ತು ಪ್ರಕೃತಿ ಸೌಂದರ್ಯ' ಎಂಬ ಶೀರ್ಷಿಕೆಯಡಿಯ ಸ್ತಬ್ಧಚಿತ್ರ ರಚಿಸಲಾಗಿತ್ತು. ಜಿಲ್ಲೆಯ ಪ್ರಸಿದ್ಧ ಕಾಳಿ ಹುಲಿ ಸಂರಕ್ಷಿತ ಅರಣ್ಯ, ಯಾಣ, ಸ್ಥಳೀಯ ಬುಡಕಟ್ಟು ಸಮುದಾಯಗಳ ಸಂಸ್ಕೃತಿ ಹಾಗೂ ಪ್ರವಾಸಿ ತಾಣಗಳನ್ನು ಅತ್ಯಂತ ಆಕರ್ಷಕವಾಗಿ ಬಿಂಬಿಸಲಾಗಿತ್ತು.

ಜಿಪಂ ಸಿಇಒ ಡಾ.ದಿಲೀಶ್ ಶಶಿ ಅವರ ಮಾರ್ಗದರ್ಶನ ಮತ್ತು ಯೋಜನಾ ನಿರ್ದೇಶಕ ಕರೀಂ ಅಸದಿ ಅವರ ಮೇಲುಸ್ತುವಾರಿಯಲ್ಲಿ ಖಾಗ್ರಾ ತಂಡದ ಅವಿರತ ಪ್ರಯತ್ನದ ಫಲವಾಗಿ ಈ ಸ್ತಬ್ಧಚಿತ್ರ ರೂಪುಗೊಂಡಿತ್ತು.