ಪ್ಲಾಸ್ಟಿಕ್‌ ತಿಂದು ಕಡಲಾಮೆ ಸಾವು

ಕಡಲಾಮೆ
ಕಡಲಾಮೆ
Published on

ಕಾರವಾರ: ಇಲ್ಲಿನ ಟ್ಯಾಗೋರ್ ಕಡಲ ತೀರದ ಹನುಮಾನ್ ಮೂರ್ತಿಯ ಬಳಿ ಬುಧವಾರ ಮೃತ ಸ್ಥಿತಿಯಲ್ಲಿ ಕಡಲಾಮೆಯೊಂದು ಪತ್ತೆಯಾಗಿತ್ತು. ಅದರ ಮರಣೋತ್ತರ ಪರೀಕ್ಷೆ ನಡೆಸಿದಾಗ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಉಂಡೆಗಳು ಪತ್ತೆಯಾಗಿವೆ.
ಹಾಕ್ಸ್ಬಿಲ್ ಪ್ರಭೇದಕ್ಕೆ ಸೇರಿದ ಕಡಲಾಮೆ ಇದಾಗಿದ್ದು, ಅರಣ್ಯ ಇಲಾಖೆಯ ಮರೈನ್ ಆ್ಯಂಡ್ ಇಕೋ ಸಿಸ್ಟಂ ಸೆಲ್‌ನ ಅಽಕಾರಿಗಳು ಅದನ್ನು ಮರಣೋತ್ತರ ಪರೀಕ್ಷೆಗೆ ಒಳ ಪಡಿಸಿದ್ದರು. ಪ್ಲಾಸ್ಟಿಕ್ ಸೇವೆನಯಿಂದಲೇ ಆಮೆ ಮೃತಪಟ್ಟಿದೆ ಎಂದು ನಿರ್ಧರಿಸಲಾಗಿದೆ ಎಂದು ಆರ್‌ಎಫ್‌ಒ ಕಿರಣ ಮನವಾಚಾರಿ ತಿಳಿಸಿದ್ದಾರೆ. ಪ್ಲಾಸ್ಟಿಕ್ ಕಡಲ ಜೀವಿಗಳ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿರುವುದು ಮತ್ತೆ, ಮತ್ತೆ ಸಾಬೀತಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net