ಕುಮಟಾ ತಾಲೂಕಿನ ಚಂದಾವರ ಸೀಮೆ ಹನುಮಂತ ದೇವಸ್ಥಾನದ ಕಾರ್ಯಕ್ರಮ ಆಮಂತ್ರಣ ಪತ್ರಿಕೆಯನ್ನು ಆಡಳಿತ ಮಂಡಳಿ ಹಾಗೂ ಕಲಾವೃದ್ಧಿ ಸಮಿತಿ ಶನಿವಾರ ಬಿಡುಗಡೆಗೊಳಿಸಿತು. ಆರ್.ಜಿ. ನಾಯ್ಕ, ಎಂ.ಕೆ. ಪಟಗಾರ, ಎನ್.ಎಸ್. ನಾಯ್ಕ, ಸೀತಾರಾಮ ನಾಯ್ಕ, ಉಮೇಶ ನಾಯ್ಕ, ದೇವು ಗೌಡ, ಸೂರಜ ನಾಯ್ಕ, ಜಿ.ಎನ್. ನಾಯ್ಕ, ಎಂ.ಜಿ. ಪಟಗಾರ, ಗುರು ಐಗಳ, ಎಂ.ಜಿ. ಚಂದಾವರ ಇತರರಿದ್ದರು.
Published on:
Copied
Follow Us
ಕುಮಟಾ: ಚಂದಾವರದ ಹನುಮಂತ ದೇವರ ಸವಾರಿ ಮೂರ್ತಿಯ ಕಲಾವೃದ್ಧಿ ಮಹೋತ್ಸವವನ್ನು ಮಾ. 11 ಹಾಗೂ 12ರಂದು ಹಮ್ಮಿಕೊಳ್ಳಲಾಗಿದೆ ಎಂದು ಕಲಾವೃದ್ಧಿ ಸಮಿತಿ ಅಧ್ಯಕ್ಷ ಆರ್.ಜಿ. ನಾಯ್ಕ ಹಾಗೂ ಮಂದಿರದ ಮೊಕ್ತೇಸರ ಎಂ.ಕೆ. ಪಟಗಾರ ಜಂಟಿಯಾಗಿ ತಿಳಿಸಿದರು.
ಆರ್.ಜಿ. ನಾಯ್ಕ ಮಾತನಾಡಿ, ಮಂದಿರದಲ್ಲಿ ನಿತ್ಯ ಪೂಜಿತ ಸ್ಥಿರಮೂರ್ತಿ ಹಾಗೂ ಸವಾರಿ ಮೂರ್ತಿಗಳೆಂದು ಎರಡು ಹನುಮಂತನ ಮೂರ್ತಿಗಳಿವೆ. ಇವೆರಡೂ ಅನಾದಿಕಾಲದಿಂದ ಪೂಜೆಗೊಳ್ಳುತ್ತಿದ್ದು ಮಂದಿರ ಎಷ್ಟು ಹಳೆಯದೆಂಬ ಬಗ್ಗೆ ಸ್ಪಷ್ಟ ದಾಖಲೆ ಇಲ್ಲ. ಹಿಂದೆ 1982ರಲ್ಲಿ ಇದೇ ಸವಾರಿ ಮೂರ್ತಿಯು ಭಿನ್ನವಾಗಿದ್ದು, ಬೆಸುಗೆ ಹಾಕಿ ಕಲಾವೃದ್ಧಿ ಮಾಡಲಾಗಿತ್ತು. ಈಗ ಪುನಃ ಅಂದು ಬೆಸುಗೆ ಹಾಕಿದ ಜಾಗದಲ್ಲೇ ಈಗ ಪುನಃ ಬಿರುಕು ಬಿಟ್ಟಿದ್ದರಿಂದ ಇಲ್ಲಿನ ಪರಂಪರೆಯಂತೆ ದೇವರ ಪ್ರಸಾದ ಅಪ್ಪಣೆ ಪಡೆದು ಸವಾರಿ ಮೂರ್ತಿಯ ದುರಸ್ತಿಯೊಂದಿಗೆ ಕಲಾವೃದ್ಧಿಗೆ ಸಿದ್ಧತೆ ನಡೆದಿದೆ. ಸೀಮೆ ಒಡೆಯನ ದರ್ಶನಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ದೇವಸ್ಥಾನದ ಪಕ್ಕದಲ್ಲೇ ಒಂದೂವರೆ ಎಕರೆ ಜಾಗ ಖರೀದಿಸಿದ್ದೇವೆ. ಆ ಜಾಗವನ್ನು ಕಾರ್ಯಕ್ರಮ ಸಂದರ್ಭದಲ್ಲಿ ವಾಹನ ನಿಲುಗಡೆ, ಊಟೋಪಚಾರ ಇನ್ನಿತರ ವ್ಯವಸ್ಥೆಗೆ ಬಳಸಿಕೊಳ್ಳಲಾಗುತ್ತಿದೆ. ಪ್ರಸ್ತುತ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಹಾಗೂ ಅನ್ನ ಸಂತರ್ಪಣೆಗೆ ಹೊರೆಗಾಣಿಕೆ ಸ್ವೀಕರಿಸುತ್ತೇವೆ. 2000ಕ್ಕೂ ಹೆಚ್ಚು ಕಾರ್ಯಕರ್ತರು ಎರಡು ದಿನದ ಕಲಾವೃದ್ಧಿ ಮಹೋತ್ಸವದಲ್ಲಿ ಮಂದಿರ ಹಾಗೂ ಭಕ್ತಾದಿಗಳ ಸೇವೆಯಲ್ಲಿ ದುಡಿಯಲಿದ್ದಾರೆ. ಕಾರ್ಯಕ್ರಮದ ದಿನಗಳಲ್ಲಿ ಅಪಾರ ಭಕ್ತಾದಿಗಳ ದಟ್ಟಣೆ ಹಾಗೂ ಇಕ್ಕಟ್ಟಾದ ರಸ್ತೆ ಇರುವುದರಿಂದ ದೇವರ ದರ್ಶನ ವ್ಯವಸ್ಥೆ ಸುಸೂತ್ರಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಮೊಕ್ತೇಸರ ಎಂ.ಕೆ. ಪಟಗಾರ ಮಾತನಾಡಿ, ಕಲಾವೃದ್ಧಿ ಧಾರ್ಮಿಕ ಕಾರ್ಯಕ್ರಮ ಗೋಕರ್ಣದ ಆಗಮ ವಿದ್ವಾನ್ ವರದೇಶ್ವರ ಹಿರೇಗಂಗೆ ನೇತೃತ್ವದಲ್ಲಿ ನಡೆಯಲಿದೆ ಎಂದರು.
ಮಂದಿರದ ಪ್ರಧಾನ ಅರ್ಚಕ ಬಾಲಕೃಷ್ಣ ಅಡಿ, ಊಟೋಪಚಾರ ವಿಭಾಗದ ಎಂ.ಎಸ್. ನಾಯ್ಕ ಮಾತನಾಡಿದರು. ಎನ್.ಎಸ್.ನಾಯ್ಕ, ಉಮೇಶ ನಾಯ್ಕ, ದೇವು ಗೌಡ, ಸೂರಜ ನಾಯ್ಕ, ಜಿ.ಎನ್. ನಾಯ್ಕ, ಎಂ.ಜಿ. ಪಟಗಾರ, ಗುರು ಐಗಳ, ಎಂ.ಜಿ. ಚಂದಾವರ ಇತರರು ಇದ್ದರು. ಕಲಾವೃದ್ಧಿ ಸಮಿತಿಯ ಕಾರ್ಯದರ್ಶಿ ಸೀತಾರಾಮ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.