ಅತಿಕ್ರಮಣ ತೆರವು ತಡೆದ ಸತೀಶ ಸೈಲ್‌

ಶಾಸಕ ಸತೀಶ ಸೈಲ್‌ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ಗ್ರಾಮಸ್ಥರ ಸಮಸ್ಯೆ ಆಲಿಸಿದರು.
ಶಾಸಕ ಸತೀಶ ಸೈಲ್‌ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ಗ್ರಾಮಸ್ಥರ ಸಮಸ್ಯೆ ಆಲಿಸಿದರು.
Published on
ಕಾರವಾರ: ಅತಿಕ್ರಮಣಗಳನ್ನು ತೆರವು ಮಾಡದಂತೆ ಶಾಸಕ ಸತೀಶ ಸೈಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಶಿರವಾಡ ಬಂಗಾರಪ್ಪ ನಗರದಲ್ಲಿ ಅರಣ್ಯ ಭೂಮಿ ಅತಿಕ್ರಮಣ ಮಾಡಿಕೊಂಡ ಕೆಲವು ಮನೆಗಳಲ್ಲಿ ಹೊಸದಾಗಿ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಗುರುವಾರ ಬೆಳಗ್ಗೆ ಅರಣ್ಯಾಧಿಕಾರಿಗಳು ಜೆಸಿಬಿ ತಂದು ಅತಿಕ್ರಮಣ ತೆರವಿಗೆ ಮುಂದಾಗಿದ್ದರು. ಗ್ರಾಮಸ್ಥರು ಜೆಸಿಬಿಗೆ ಅಡ್ಡ ಮಲಗಿ ತೆರವು ತಡೆದರು.
ನಂತರ ಶಾಸಕ ಸತೀಶ ಸೈಲ್ ಅವರ ಜತೆ ಜಿಲ್ಲಾಽಕಾರಿ ಕಚೇರಿಯಲ್ಲಿ ಜಮಾಯಿಸಿದ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರ ಎದುರು ಗ್ರಾಮಸ್ಥರು ಸಮಸ್ಯೆ ಹೇಳಿಕೊಂಡರು. 40 ವರ್ಷಗಳಿಂದ ಅದೇ ಸ್ಥಳದಲ್ಲಿ ವಾಸವಿದ್ದೇವೆ. ಈಗ ಮಳೆಗಾಲ ಬಂದಿದ್ದರಿAದ ಹಂಚು ತೆಗೆದು ಶೀಟ್ ಅಳವಡಿಕೆ ಮಾಡುತ್ತಿದ್ದೇವೆ. ಅದಕ್ಕೆ ಅಽಕಾರಿಗಳು ಬಂದು ಅತಿಕ್ರಮಣ ಮಾಡಿದ್ದಾರೆ ಎಂದು ತೆರವು ಮಾಡಲು ಮುಂದಾಗಿದ್ದಾರೆ ಎಂದರು.
ಎಸಿಎಫ್ ಕೆ.ಡಿ.ನಾಯ್ಕ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹೊಸದಾಗಿ ಮಾಡಿಕೊಂಡ ಅತಿಕ್ರಮಣಗಳನ್ನು ತೆರವು ಮಾಡಲು ಮುಂದಾಗಿದ್ದೇವೆ ಎಂದು ಸ್ಪಷ್ಟನೆ ನೀಡಿದರು. ಯಾವುದೇ ಕಾರಣಕ್ಕೆ ಅತಿಕ್ರಮಣ ತೆರವು ಮಾಡಬೇಡಿ ಎಂದು ಸತೀಶ ಸೈಲ್ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆಗಾಲ ಮುಗಿಯುವವರೆಗೆ ಅವಕಾಶ
ಗಾಂಧಿನಗರದಲ್ಲಿ ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಯಲ್ಲಿ ಬಹು ಮಹಡಿ ಕಟ್ಟಡ ನಿರ್ಮಾಣಕ್ಕೆ ನಗರಸಭೆ ಮುಂದಾಗಿದೆ. ಅಲ್ಲಿ ವಾಸವಿರುವ ಪೌರ ಕಾರ್ಮಿಕರಲ್ಲದ 9 ಕುಟುಂಬಗಳ ಮನೆ ತೆರವು ಮಾಡಲು ಮುಂದಾದ ಕ್ರಮಕ್ಕೆ ಶಾಸಕ ಸತೀಶ ಸೈಲ್ ತಡೆ ನೀಡಿದ್ದಾರೆ.
ಕುಟುಂಬಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ, ಡಿಸಿ ಹಾಗೂ ಸತೀಶ ಸೈಲ್ ಅವರ ಬಳಿ ಮನೆಗಳನ್ನು ಖಾಲಿ ಮಾಡಿಸದಂತೆ ಮನವಿ ಮಾಡಿದರು.
ನಗರಸಭೆ ಪೌರಾಯುಕ್ತ ಜಗದೀಶ ಹುಲಿಗೆಜ್ಜಿ ಮಾಹಿತಿ ನೀಡಿ, ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಯಲ್ಲಿ 8 ಮನೆಗಳಿರುವ ಮೂರು ಮಹಡಿಯ ಒಂದು ಕಟ್ಟಡ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಇನ್ನೊಂದು ಕಟ್ಟಡ ಕಾಮಗಾರಿ ಪ್ರಾರಂಭಿಸಲು ಈಗಾಗಲೇ ಪೌರ ಕಾರ್ಮಿಕರು ವಾಸವಿರುವ ಕ್ವಾಟ್ರಸ್‌ಗಳನ್ನು ತೆರವು ಮಾಡಬೇಕಾಗಿದೆ. ಎಲ್ಲ ಪೌರ ಕಾರ್ಮಿಕರು ಮನೆಗಳನ್ನು ತೆರವು ಮಾಡಿ ಕಾಮಗಾರಿಗೆ ಸಹಕಾರ ನೀಡಿದ್ದಾರೆ. ಆದರೆ, ಪೌರ ಕಾರ್ಮಿಕರಲ್ಲದ 9 ಕುಟುಂಬಗಳು ಅಲ್ಲಿ ವಾಸವಿವೆ. ಅವರು ಏಳಲು ಸಿದ್ಧರಿಲ್ಲ ಎಂದರು.
ಶಾಸಕ ಸತೀಶ ಸೈಲ್ ಮಾತನಾಡಿ, ಕೊಳಚೆ ನಿರ್ಮೂಲನಾ ಮಂಡಳಿಗೆ ಪ್ರಸ್ತಾವನೆ ಕಳಿಸಿ ಆ 9 ಕುಟುಂಬಗಳಿಗೆ ಹೊಸ ಮನೆ ಕಟ್ಟಿಕೊಡುವ ವ್ಯವಸ್ಥೆ ಮಾಡೋಣ. ಅವರಿಗೆ ಮನೆಗಳನ್ನು ತೆರವು ಮಾಡಲು ಮಳೆಗಾಲ ಮುಗಿಯುವವರೆಗೆ ಅವಕಾಶ ನೀಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net