ಎನ್‌ಡಬ್ಲುಕೆಆರ್‌ಟಿಸಿ ಶಿರಸಿ ಡಿಸಿ ಬಸವರಾಜ ಅಮ್ಮನವರ್ ಮಾತನಾಡಿ, ಕಾರವಾರ ಡಿಪೋ ಕಟ್ಟಡ, ನೆಲ ಎತ್ತರ ಮಾಡುವ ಹಾಗೂ ಕಂಪೌAಡ್ ನಿರ್ಮಾಣದ 10 ಕೋಟಿ ರೂ. ಕಾಮಗಾರಿಗಳು ಪ್ರಗತಿಯಲ್ಲಿದ್ದ ಕಾರಣ ಡಿಪೋದ ಕೆಲವು ಬಸ್‌ಗಳನ್ನು ತಾತ್ಕಾಲಿಕವಾಗಿ ಅಂಕೋಲಾಕ್ಕೆ ಸ್ಥಳಾಂತರಿಸಲಾಗಿದ್ದರಿಂದ ಸಮಸ್ಯೆಯಾಗಿದೆ. ತಿಂಗಳಲ್ಲಿ ಉದ್ಘಾಟನೆ ಮಾಡಿದಲ್ಲಿ ಇಲ್ಲಿನ ಸಮಸ್ಯೆ ಬಗೆಹರಿಸಲಿದ್ದೇವೆ. ಕೋವಿಡ್ ಸಮಯದಲ್ಲಿ ಯಾವುದೇ ಹೊಸ ಬಸ್ ಬಂದಿರಲಿಲ್ಲ. ಈಗ ಎರಡುವರೆ ವರ್ಷದಲ್ಲಿ 23 ಹೊಸ ಬಸ್‌ಗಳು ಕಾರವಾರ ಕ್ಷೇತ್ರಕ್ಕೆ ಬಂದಿವೆ. ಇನ್ನೂ ಕೆಲವು ಹೊಸ ಬಸ್‌ಗಳು ಬರಲಿದ್ದು, ಹಳೆಯ ಬಸ್‌ಗಳನ್ನು ಬದಲಿಸಲಿದ್ದೇವೆ. ಹೊಸ ಚಾಲಕ ನಿರ್ವಾಕರ ನೇಮಕಾತಿ ಸಹ ನಡೆದಿದೆ ಎಂದರು.ಎನ್‌ಡಬ್ಲುಕೆಆರ್‌ಟಿಸಿ ಶಿರಸಿ ವಿಭಾಗವು ಹಿಂದಿನ ವರ್ಷ 36 ಕೋಟಿ ನಷ್ಠದಲ್ಲಿತ್ತು. ಈ ಸಾಲಿನಲ್ಲಿ ಮೊದಲ ಬಾರಿಗೆ 13 ಕೋಟಿ ರೂ. ಲಾಭಕ್ಕೆ ಬಂದಿದೆ ಎಂದರು.