

ಪ್ರಮುಖ ಮುಖ್ಯಾಂಶಗಳು
ಗ್ರುಪ್ ಡಿ ಹುದ್ದೆಯಲ್ಲಿ ನಾವು ಕರ್ತವ್ಯ ನಿರ್ವಹಿಸುತ್ತೇವೆ. ನಮಗೆ ಮಾತ್ರ ತಿಂಗಳಿಗೆ ಸರಿಯಾಗಿ ವೇತನ ದೊರೆಯುವುದಿಲ್ಲ. ಆದರೆ, ನಾವು ಕಿರಾಣಿ ಅಂಗಡಿ, ವಿದ್ಯತ್ ಬಿಲ್, ಸಾಲದ ಹಣ ಮರುಪಾವತಿ, ಶಾಲಾ ಮಕ್ಕಳ ಶುಲ್ಕ, ಹಾಲು, ತರಕಾರಿ ಎಲ್ಲರಿಗೂ ಸರಿಯಾಗಿ ಪಾವತಿ ಮಾಡಬೇಕು. ಹಣ ಹೊಂದಿಸುವುದೆ ಕಷ್ಟದ ಕೆಲಸವಾಗಿದೆ. 3-4 ತಿಂಗಳಿಗೊಮ್ಮೆ ದೊರೆತ ವೇತನ ಬಡ್ಡಿ ಹಣ ತುಂಬುವುದಕ್ಕೆ ಸರಿ ಹೋಗುತ್ತದೆ. ಸಕಾಲಕ್ಕೆ ವೇತನ ಪಾವತಿಯಾಗುವಂತೆ ಸರ್ಕಾರ ವ್ಯವಸ್ಥೆ ಕಲ್ಪಿಸಲಿ.
ವೇತನ ಬಾಕಿ ಇರುವುದು ಕೇವಲ ಭಟ್ಕಳದಲ್ಲಿ ಮಾತ್ರವಲ್ಲ. ನಾನು ಭಟ್ಕಳ, ಹೊನ್ನಾವರ, ಯಲ್ಲಾಪುರದ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯನ್ನು ನಿಯೋಜಿಸಿದ್ದೇನೆ. ನನಗೆ ಜೂನ್‌ನಿಂದ ಸರ್ಕಾರ ವೇತನ ಬಾಕಿ ಇಟ್ಟಿದೆ. ನನಗೆ 5 ತಿಂಗಳ ವೇತನ ಬಾಕಿ ಇದ್ದರೂ ಕಾರ್ಮಿಕರಿಗೆ ತೊಂದರೆ ಆಗಬಾರದು ಎನ್ನುವ ದೃಷ್ಟಿಯಿಂದ ಕೈಯಿಂದ 3 ತಿಂಗಳ ವೇತನ ಪಾವತಿ ಮಾಡಿದ್ದೇನೆ. ಪ್ರತಿ ಆಸ್ಪತ್ರೆಗೆ ತಿಂಗಳಿಗೆ 4.5 ಲಕ್ಷ ರೂ.ಗಳಂತೆ ಈಗಾಗಲೆ 40 ಲಕ್ಷ ರೂ.ಗಳಿಗೂ ಅಧಿಕ ಹಣವನ್ನು ನಾನು ಕೈಯಿಂದ ವ್ಯಯಿಸಿದ್ದು ಆ ಹಣ ಪಡೆಯಲು ಒದ್ದಾಡುವಂತಾಗಿದೆ. ಅನುದಾನ ಬಂದಿಲ್ಲ ಎಂದು ಇಲಾಖೆ ಹಿಂದೆ ಕಳುಹಿಸುತ್ತಿದೆ.